ಸಮಗ್ರ ನ್ಯೂಸ್: ಕಾಶ್ಮೀರದಲ್ಲಿ ಮೂರು ಪ್ರಾದೇಶಿಕ ರಾಜಕೀಯ ಪಕ್ಷಗಳು ‘ಪೀಪಲ್ಸ್ ಅಲೈಯನ್ಸ್ ಫಾರ್ ಚೇಂಜ್’ ಎಂಬ ಹೊಸ ರಾಜಕೀಯ ಮೈತ್ರಿಕೂಟವನ್ನು ರಚಿಸಿದೆ.
ಈ ಮೈತ್ರಿಕೂಟದಲ್ಲಿ ಶಾಸಕ ಸಜ್ಜದ್ ಗನಿ ಲೋನ್ ನೇತೃತ್ವದ ಪೀಪಲ್ಸ್ ಕಾನ್ಸರೆನ್ಸ್, ಮಾಜಿ ಶಾಸಕ ಹಕೀಮ್ ಮೊಹಮ್ಮದ್ ಯಾಸಿನ್ ನೇತೃತ್ವದ ಪೀಪಲ್ಸ್ ಡೆಮಾಕ್ರಟಿಕ್ ಫ್ರಂಟ್(ಪಿಡಿಎಫ್) ಮತ್ತು ಈಗ ನಿಷೇಧಿತ ಜಮಾತ್-ಇ-ಇಸ್ಲಾಮಿಯ ಮಾಜಿ ಸದಸ್ಯರನ್ನು ಒಳಗೊಂಡ ಹೊಸದಾಗಿ ರಚಿಸಲಾದ ರಾಜಕೀಯ ಪಕ್ಷ ಜಸ್ಟೀಸ್ & ಡೆವಲಪ್‌ಮೆಂಟ್ ಫ್ರಂಟ್(ಜೆಡಿಎಫ್) ಸೇರಿವೆ.
ಶ್ರೀನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಜೆಡಿಎಫ್ ಅಧ್ಯಕ್ಷ ಶಮೀಮ್ ಅಹ್ಮದ್ ಥೋಕರ್ ಈ ಹೊಸ ಮೈತ್ರಿಕೂಟವನ್ನು ಘೋಷಣೆ ಮಾಡಿದರು. ಜಮ್ಮು ಮತ್ತು ಕಾಶ್ಮೀರದ ಜನರಿಗೆ ಸಾಮೂಹಿಕವಾಗಿ ಕೆಲಸ ಮಾಡುವ ಗುರಿಯನ್ನು ಮೈತ್ರಿಕೂಟ ಒತ್ತಿ ಹೇಳಿದರು. ಜನರಿಗೆ ಸೇವೆ ಸಲ್ಲಿಸಲು ನಾವು ಒಂದಾಗಬೇಕು. ಈ ಪ್ರದೇಶದಲ್ಲಿ ರಾಜಕೀಯ ಏಕತೆಯ ಮಹತ್ವವನ್ನು ಒತ್ತಿ ಹೇಳಿದರು.







