ಸಮಗ್ರ ನ್ಯೂಸ್: ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ ಕೇಂದ್ರ ಸರ್ಕಾರದ ಯೋಜನೆಯಾಗಿದ್ದು, ಕೃಷಿ ಒಳಹರಿವು ಮತ್ತು ದೇಶೀಯ ಅಗತ್ಯಗಳಿಗಾಗಿ ರೈತರ ಆರ್ಥಿಕ ಅಗತ್ಯಗಳನ್ನು ಪೂರೈಸಲು ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯದೊಂದಿಗೆ ಭಾರತ ಸರ್ಕಾರ ಪ್ರಾರಂಭಿಸಿದೆ.
ಪ್ರಧಾನ ಮಂತ್ರಿ ಕಿಸಾನ್ ಯೋಜನೆ ಎಂದರೇನು?
ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯು ಭಾರತ ಸರ್ಕಾರವು ಪ್ರಾರಂಭಿಸಿದ ಯೋಜನೆ. ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ವರ್ಷಕ್ಕೆ 6,000 ರೂ.ಗಳ ಆರ್ಥಿಕ ಸಹಾಯವನ್ನು ಒದಗಿಸುತ್ತಿದ್ದು, ಈ ಯೋಜನೆಯಡಿಯಲ್ಲಿ, ಪ್ರತಿ ನಾಲ್ಕು ತಿಂಗಳಿಗೊಮ್ಮೆ ಎಲ್ಲ ರೈತರ ಖಾತೆಗಳಿಗೆ 2,000 ರೂ. ಹಾಕಲಾಗುತ್ತದೆ.
ಯಾವಾಗ ಅನ್ನದಾತರ ಖಾತೆಗೆ ಹಣ ಬರಲಿದೆ?
ದೇಶದ ರೈತರಿಗೆ ಮುಂದಿನ ಕಂತು ಅಂದ್ರೆ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ 20ನೇ ಕಂತು ಜೂನ್ ತಿಂಗಳ ಅಂತ್ಯದ ವೇಳೆಗೆ ಸಿಗಲಿದ್ದು, ಇದುವರೆಗೆ ಕೇಂದ್ರ ಸರ್ಕಾರ 19 ಕಂತುಗಳನ್ನು ಬಿಡುಗಡೆ ಮಾಡಿದೆ. ಇದರಡಿ ಪ್ರತಿ ನಾಲ್ಕು ತಿಂಗಳಿಗೊಮ್ಮೆ ರೈತರಿಗೆ 2000 ರೂಪಾಯಿ ಅಂದರೆ ವಾರ್ಷಿಕವಾಗಿ 6000 ರೂ.ಗಳನ್ನು ನೇರವಾಗಿ ಫಲಾನುಭವಿ ಖಾತೆಗೆ ಹಾಕುತ್ತಿದೆ.







