ದ.ಕ‌ ಎಸ್ಪಿ ಅರುಣ್ ಗೆ ನೋಟೀಸ್ ನೀಡಿದ ಹೈಕೋರ್ಟ್| ರಾತ್ರೋರಾತ್ರಿ ಹಿಂದೂ ಮುಖಂಡರ ಮನೆಗೆ ನುಗ್ಗಿ ಫೋಟೋ ತೆಗೆಸಿದ್ದೇ ಮುಳುವಾಯ್ತೇ?

ಸಮಗ್ರ ನ್ಯೂಸ್: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ರಾತ್ರೋ ರಾತ್ರಿ ಹಿಂದೂ ಮುಖಂಡರ ಮನೆಗಳ ಮೇಲೆ ಪೊಲೀಸರು ದಾಳಿ ನಡೆಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಹೈಕೋರ್ಟ್ ನೋಟಿಸ್ ನೀಡಿದೆ.

Ad Widget ... ..

ಜಿಲ್ಲೆಯ ಹಿರಿಯ ಆರ್.ಎಸ್.ಎಸ್ ಮುಖಂಡ ಯು.ಜಿ.ರಾಧಾ ಅವರ ಮನೆ ಮೇಲೆ ಪೊಲೀಸರು ದಾಳಿ ನಡೆಸಿ ಪರಿಶೋಲನೆ ನಡೆಸಿದ್ದರು. ಇದೀಗ ಎಸ್ ಪಿ ಡಾ.ಅರುಣ್ ಕುಮಾರ್ ಅವರಿಗೆ ಕಾರಣ ಕೇಳಿ ಹೈಕೋರ್ಟ್ ನೋಟಿಸ್ ಜಾರಿ ಮಾಡಿದೆ.

Ad Widget

ಪ್ರಕರಣ ಸಂಬಂಧ ಸೂಕ್ತ ದಾಖಲೆ ಸಲ್ಲಿಸಬೇಕು. ಅಲ್ಲದೇ ಕಾನೂನು ಹೊರತಾಗಿ ಅವರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳವಾರದು ಎಂದು ತಾಕೀತು ಮಾಡಿದೆ.

ಉಪ್ಪಿನಂಗಡಿಯಲ್ಲಿರುವ ನನ್ನ ಮನೆಗೆ ಜೂನ್ 1ರಂದು ರಾತ್ರಿ ಪೊಲೀಸರು ಬಂದಿದ್ದರು. ನನ್ನ ವಿರುದ್ಧ ಯಾವುದೇ ಕ್ರಿಮಿನಲ್ ಪ್ರಕರಣ ಇಲ್ಲದಿದ್ದರು ಪೊಲೀಸರು ನನ್ನನ್ನು ಆರೋಪಿ ರೀತಿ ನಡೆಸಿಕೊಂಡಿದ್ದಾರೆ. ಇದರಿಂದ ನನ್ನ ಖಾಸಗಿತನಕ್ಕೆ, ಚರಿತ್ರ್ಯಕ್ಕೆ ಧಕ್ಕೆಯಾಗಿದೆ. ವ್ಯಕ್ತಿಸ್ವಾತಂತ್ರ್ಯವನ್ನು ಪೊಲೀಸರು ವಿನಾಕಾರಣ ಕಸಿದಿದ್ದಾರೆ ಎಂದು ಆರೋಪಿಸಿ ಯು.ಜಿ.ರಾಧಾ ಅವರು ಹೈಕೋರ್ಟ್ ಮೆಟ್ಟಿಲೇರಿದ್ದರು.

Leave a Comment

Your email address will not be published. Required fields are marked *