ತತ್ಕಾಲ್‌ ಟಿಕೆಟ್‌ಗೆ ಆಧಾರ್‌ ಕಡ್ಡಾಯ/ ರೈಲ್ವೆ ಇಲಾಖೆ ಘೋಷಣೆ

ಸಮಗ್ರ ನ್ಯೂಸ್‌: ಆಧಾರ್‌ ದೃಢೀಕರಣಕ್ಕೆ ಒಳಪಡುವ ಗ್ರಾಹಕರು ಮಾತ್ರವೇ, ಜು.1ರಿಂದ ತತ್ಕಾಲ್‌ ವ್ಯವಸ್ಥೆಯಡಿ ಟಿಕೆಟ್‌ ಬುಕ್‌ ಮಾಡಬಹುದು ಎಂದು ರೈಲ್ವೆ ಇಲಾಖೆ ಘೋಷಿಸಿದೆ. ತತ್ಕಾಲ್‌ ಟಿಕೆಟ್‌ಗಳ ಬುಕಿಂಗ್ ಆರಂಭವಾದ 1 ನಿಮಿಷಕ್ಕೂ ಮೊದಲೇ ಎಲ್ಲಾ ಟಿಕೆಟ್‌ಗಳು ಬುಕ್‌ ಆಗುವುದರ ಹಿಂದೆ ಭಾರೀ ಅಕ್ರಮ ನಡೆಯುತ್ತಿದೆ ಎಂಬ ಆರೋಪಗಳ ಬೆನ್ನಲ್ಲೇ ರೈಲ್ವೆ ಈ ಹೊಸ ಯೋಜನೆ ಪರಿಚಯಿಸಿದೆ. ಇದರ ಜೊತೆಗೆ ಜು.15ರ ಬಳಿಕ ಆಧಾರ್‌ ಆಧರಿತ ಒಟಿಪಿ ವ್ಯವಸ್ಥೆಯನ್ನೂ ಪರಿಚಯಿಸಲಾಗುವುದು ಎನ್ನಲಾಗಿದೆ.

Ad Widget . Ad Widget . Ad Widget .

ತತ್ಕಾಲ್ ಬುಕಿಂಗ್ ಆರಂಭವಾದ ಮೊದಲ 30 ನಿಮಿಷ, ಭಾರತೀಯ ರೈಲ್ವೆಯ ಬುಕಿಂಗ್‌ ಏಜೆಂಟ್‌ಗಳು ಟಿಕೆಟ್‌ಗಳನ್ನು ಬುಕ್ ಮಾಡಲು ಸಾಧ್ಯವಾಗುವುದಿಲ್ಲ. ಎಸಿ ಕ್ಲಾಸ್‌ನಲ್ಲಿ ಬೆಳಗ್ಗೆ 10 ಗಂಟೆಯಿಂದ 10.30ರ ವರೆಗೆ ಮತ್ತು ಎಸಿ ಏತರದಲ್ಲಿ 11 ಗಂಟೆಯಿಂದ 11.30ರ ತನಕ ಈ ನಿರ್ಬಂಧ ಇರಲಿದೆ. ಇದಕ್ಕೆ ಸೂಕ್ತವಾದ ಬದಲಾವಣೆಗಳನ್ನು ವ್ಯವಸ್ಥೆಯಲ್ಲಿ ಮಾಡಿಕೊಳ್ಳುವಂತೆ ಸಿಆರ್‌ಐಎಸ್‌ ಮತ್ತು ಐಆರ್‌ಸಿಟಿಸಿಗೆ ಸೂಚಿಸಲಾಗಿದೆ.

Ad Widget . Ad Widget .

Leave a Comment

Your email address will not be published. Required fields are marked *