ಅಹಮದಾಬಾದ್ ವಿಮಾನ ದುರಂತ| ಗುಜರಾತ್ ಮಾಜಿ ಸಿಎಂ‌‌ ವಿಜಯ್ ರೂಪಾನಿ ದುರ್ಮರಣ

ಸಮಗ್ರ ನ್ಯೂಸ್: ಅಹಮದಾಬಾದ್ ನಲ್ಲಿ ನಡೆದ ವಿಮಾನ ದುರಂತದಲ್ಲಿ ಗುಜರಾತ್ ಮಾಜಿ ಸಿಎಂ ವಿಜಯ್ ರೂಪಾನಿ ದುರ್ಮರಣವನ್ನಪ್ಪಿದ್ದಾರೆ. ರೂಪಾಣಿ ಅಹಮದಾಬಾದ್ ನಿಂದ ಲಂಡನ್ ಗೆ ಹೊರಟಿದ್ದರು ಎನ್ನಲಾಗಿದೆ.

Ad Widget ... ..

ಇಂದು ಮಧ್ಯಾಹ್ನ 1.39ಕ್ಕೆ ವಿಮಾನ ಟೇಕ್ ಆಫ್ ಆಗಬೇಕಿತ್ತು. ಟೇಕಾಫ್ ಆಗಿ ಐದು ನಿಮಿಷಕ್ಕೆ ಈ ದುರ್ಘಟನೆ ನಡೆದಿದೆ. ಆಗುವ 5 ನಿಮಿಷಕ್ಕೆ ಮೊದಲು ಈ ದುರ್ಘಟನೆ ನಡೆದಿದೆ. ಲಂಡನ್ ಗೆ ಹೊರಟಿದ್ದ ವಿಮಾನ ಪತನವಾಗಿದ್ದು, ಘಟನೆಯಲ್ಲಿ ಈಗಾಗಲೇ ಸಾವನ್ನಪ್ಪಿದವರ ಸಂಖ್ಯೆ 105ರಷ್ಟಾಗಿದೆ. ಈ ಪೈಕಿ 20ಕ್ಕೂ ಅಧಿಕ ವಿದ್ಯಾರ್ಥಿಗಳು ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.

Ad Widget

ಈ ವಿಮಾನ ಪತನ ದುರಂತ ಭವಿಷ್ಯದ ವೈದ್ಯರನ್ನೇ ಆಹುತಿ ಪಡೆದಿದೆ. ಬಿಜೆ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ವಿಮಾನ ಅಪ್ಪಳಿಸಿದೆ. ಹಾಸ್ಟೆಲ್ ನ ಮೇಲ್ಛಾವಣಿಯಲ್ಲಿದ್ದ ಮೆಸ್ ಗೆ ವಿಮಾನ ಡಿಕ್ಕಿ ಹೊಡೆದ ಪರಿಣಾಮ ಮಧ್ಯಾಹ್ನದ ಊಟಕ್ಕೆ ತೆರಳಿದ್ದ ಸುಮಾರು 20ಕ್ಕೂ ಅಧಿಕ ವಿದ್ಯಾರ್ಥಿಗಳು ದುರ್ಮರಣ ಹೊಂದಿದ್ದಾರೆ. ಈ ವಿಮಾನ ಅಹಮದಾಬಾದ್ ನ ಬಿಜೆ ಹಾಸ್ಟೆಲ್ ಗೆ ಅಪ್ಪಳಿಸಿದೆ.

ವಿಮಾನ ಬಿಜೆ ಆಸ್ಪತ್ರೆ ಹಾಸ್ಟೆಲ್ ನ ಮೆಸ್ ಗೆ ಅಪ್ಪಳಿಸಿಸುತ್ತಿದ್ದಂತೆ ಅಲ್ಲಿದ್ದ ವಿದ್ಯಾರ್ಥಿಗಳು ಸಾವನ್ನಪ್ಪಿದ್ದಾರೆ. ವಿಮಾನ ಅಪ್ಪಳಿಸುತ್ತಿದ್ದಂತೆ ಕಟ್ಟಡದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಪರಿಣಾಮ ಹಾಸ್ಟೇಲ್ ನಲ್ಲಿದ್ದ 20ಕ್ಕೂ ಅಧಿಕ ವಿದ್ಯಾರ್ಥಿಗಳು ದುರ್ಮರಣ ಹೊಂದಿದ್ದಾರೆ ಎಂದು ತಿಳಿದು ಬಂದಿದೆ.

ಈ ವಿಮಾನದಲ್ಲಿ ಇಬ್ಬರು ಪೈಲೆಟ್, 10 ಸಿಬ್ಬಂದಿ ಸೇರಿದಂತೆ 242 ಜನ ಪ್ರಯಾಣಿಕರು ಪ್ರಯಾಣಿಸುತ್ತಿದ್ದರು. ವಿಮಾನಕ್ಕೆ ಸುಮಿತ್ ಸಬರ್ವಾಲ್ ಪೈಲೆಟ್ ಆಗಿದ್ದರು. ಅವರು 8200 ಗಂಟೆ ಚಾಲನೆ ಮಾಡಿರುವ ಅನುಭವವಿದೆ. ಆದರೆ, ಇಂದು ಅವರಿದ್ದ ವಿಮಾನ ದುರಂತವಾಗಿರುವುದು ದುರ್ದೈವ ಎಂದಿದ್ದಾರೆ.

.

Leave a Comment

Your email address will not be published. Required fields are marked *