ಅಹಮದಾಬಾದ್ ನಲ್ಲಿ ಏರ್ ಇಂಡಿಯಾ ವಿಮಾನ ಪತನ| 130 ಮಂದಿ ಪ್ರಯಾಣಿಕರು ಬಲಿ!?

ಸಮಗ್ರ ನ್ಯೂಸ್: ಗುಜರಾತ್ ನಲ್ಲಿ ಇಂದು ಘೋರವಾದ ದುರಂತ ಒಂದು ಸಂಭವಿಸಿದ್ದು, ಅಹ್ಮದಾಬಾದ್ ಏರ್ಪೋರ್ಟ್ ಬಳಿಯೇ ವಿಮಾನ ಒಂದು ಪತನವಾಗಿದೆ. ಟೇಕಾಫ್ ಆಗುವಾಗ ವಿಮಾನ ತಾಂತ್ರಿಕ ದೋಷದಿಂದ ಪತನವಾಗಿದೆ ಎಂದು ತಿಳಿದುಬಂದಿದೆ.

Ad Widget . Ad Widget . Ad Widget .

ಅಹಮದಾಬಾದ್ ನಿಂದ ಏರ್ ಇಂಡಿಯಾನಾ ವಿಮಾನ ಲಂಡನ್ ಗೆ ತೆರಳುತ್ತಿದ್ದ ವಿಮಾನ ಟೇಕಾಪ್ ಆದ ಕೆಲವೇ ಕ್ಷಣದಲ್ಲಿ ಪತನವಾಗಿದೆ. ಗಾಯಾಳುಗಳನ್ನು ಅಹ್ಮದಾಬಾದ್ನ ಸಿವಿಲ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಏರ್ಪೋರ್ಟ್ ಬಳಿ ವಿಮಾನ ಹೊತ್ತಿ ಉರಿಯುತ್ತಿದೆ.

Ad Widget . Ad Widget .

ವಿಮಾನದಲ್ಲಿ 133 ಪ್ರಯಾಣಿಕರು ಇರುವ ಮಾಹಿತಿ ಇದೆ. ವಿಮಾನದಲ್ಲಿ ಸಿಬ್ಬಂದಿಗಳು ಸೇರಿದಂತೆ ಒಟ್ಟು 133 ಪ್ರಯಾಣಿಕರು ಇರುವ ಮಾಹಿತಿ ಇದ್ದು, ಇದರಲ್ಲಿ 130 ಮಂದಿ ಸಾವನ್ನಪ್ಪಿದ್ದಾಗಿ ಹೇಳಲಾಗಿದೆ. ಗುಜರಾತ್ನ ಅಹ್ಮದಾಬಾದ್ ಏರ್ಪೋರ್ಟ್ ಬಳಿಯೇ ಈ ಒಂದು ದುರಂತ ಸಂಭವಿಸಿದ್ದು, ಸಾವು ನೋವಿನ ಕುರಿತಂತೆ ನಿಖರ ಮಾಹಿತಿ ನಿರೀಕ್ಷಿಸಲಾಗುತ್ತಿದೆ.

Leave a Comment

Your email address will not be published. Required fields are marked *