ಅಹ್ಮದಾಬಾದ್: ಪತನಗೊಂಡು ಕಾಲೇಜು ಹಾಸ್ಟೆಲ್ ಗೆ ಅಪ್ಪಳಿಸಿದ ವಿಮಾನ| 30 ವಿದ್ಯಾರ್ಥಿಗಳು ಸಾವನ್ನಪ್ಪಿರುವ ಶಂಕೆ

ಸಮಗ್ರ ನ್ಯೂಸ್: ಗುಜರಾತ್‌ನ ಅಹಮದಾಬಾದ್‌ನ ಮೇಘನಿ ನಗರ ಪ್ರದೇಶದಲ್ಲಿಇಂದು ಮಧ್ಯಾಹ್ನ ವಿಮಾನ ದುರಂತ ನಡೆದಿದ್ದು, 242 ಪ್ರಯಾಣಿಕರಿದ್ದ ಏರ್ ಇಂಡಿಯಾ ವಿಮಾನ ಟೇಕ್ ಆಫ್ ಆದ ಕೆಲವೇ ಕ್ಷಣಗಳಲ್ಲಿ ಪತನವಾಗಿದೆ.

Ad Widget ... ..

ಪತನಗೊಂಡ ವಿಮಾನವು ಮೆಡಿಕಲ್ ಕಾಲೇಜಿನ ಹಾಸ್ಟೆಲ್‌ಗೆ ಅಪ್ಪಳಿಸಿದ್ದು, ಮಧ್ಯಾಹ್ನ ಊಟಕ್ಕೆ ಬಂದಿದ್ದ 30 ವಿದ್ಯಾರ್ಥಿಗಳು ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ.

Ad Widget

ಮೇಘನಿ ನಗರ ಪ್ರದೇಶದಲ್ಲಿರುವ ಬಿಜೆ ಮೆಡಿಕಲ್ ಕಾಲೇಜಿನ ಹಾಸ್ಟೆಲಿಗೆ ಪತನಗೊಂಡ ವಿಮಾನ ನುಗ್ಗಿದ್ದು, ಹಾಸ್ಟೆಲ್‌ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ವಿಮಾನ ಹಾಸ್ಟೆಲ್‌ಗೆ ನುಗ್ಗುತ್ತಿದ್ದಂತೆ ಕೆಲ ವಿದ್ಯಾರ್ಥಿಗಳು ಕಟ್ಟಡದಿಂದ ಜಿಗಿದು ಗಂಭೀರ ಗಾಯಗೊಂಡಿದ್ದಾರೆ.

ಇನ್ನು ವಿದ್ಯಾರ್ಥಿಗಳು ಊಟ ಮಾಡುವಾಗಲೇ ಈ ಘಟನೆ ನಡೆದಿದೆ ಎನ್ನುದಕ್ಕೆ ಹಾಸ್ಟೆಲ್‌ನ ಊಟದ ಹಾಲ್‌ನಲ್ಲಿ ಅರೆ ತಿಂದ ತಟ್ಟೆಗಳು ಸಾಕ್ಷಿಯಾಗಿವೆ. ಸದ್ಯ ರಕ್ಷಣಾ ತಂಡ ಬಿಜೆ ಮೆಡಿಕಲ್ ಕಾಲೇಜಿನ ಹಾಸ್ಟೆಲ್‌ನಲ್ಲಿಯೂ ಕಾರ್ಯಾಚರಣೆ ನಡೆಸುತ್ತಿದ್ದಾರೆ.

Leave a Comment

Your email address will not be published. Required fields are marked *