ಮಂಡ್ಯ: ಮದೀನಾ ಹೊಟೇಲ್ ನಲ್ಲಿ ಬೌಬೌ ಬಿರಿಯಾನಿ| ಮಾಂಸದೊಂದಿಗೆ ಸಿಕ್ಕಿಬಿದ್ದ ಹೊಟೇಲ್ ಮಾಲೀಕ

ಸಮಗ್ರ ನ್ಯೂಸ್: ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಚಿನಕುರಳಿ ಗ್ರಾಮದಲ್ಲಿರುವ ಮದೀನಾ ಎನ್ನುವ ಹೋಟೆಲ್‌ ಮಾಲೀಕನ ವಿರುದ್ಧ ಗಂಭೀರ ಆರೋಪ ಕೇಳಿಬಂದಿದೆ. ಮದೀನಾ ಹೋಟೆಲ್ ಮಾಲೀಕ ಆಜಾದ್ ಬಿರಿಯಾನಿಗೆ ನಾಯಿ ಮಾಂಸವನ್ನು ಬೆರೆಸುವ ಆರೋಪ ಕೇಳಿಬಂದಿದೆ.

Ad Widget ... ..

ಹೋಟೆಲ್ ಮಾಲೀಕ ಆಜಾದ್ ಬಿರಿಯಾನಿಗೆ ನಾಯಿ ಮಾಂಸವನ್ನು ಬೆರೆಸಿ ಗ್ರಾಹಕರಿಗೆ ಬಡಿಸುತ್ತಿದ್ದ ಎನ್ನಲಾಗಿದೆ. ಬಿರಿಯಾನಿ ತಿಂದ ಕೆಲ ಗ್ರಾಹಕರಿಗೆ ಮಾಂಸದ ರುಚಿಯಲ್ಲಿ ವ್ಯತ್ಯಾಸ ಕಂಡು ಬಂದಿದ್ದು, ನಾಯಿ ಮಾಂಸ ಇರಬಹುದು ಎನ್ನುವ ಶಂಕೆ ವ್ಯಕ್ತಪಡಿಸಿದ್ದಾರೆ.

Ad Widget

ಅನುಮಾನಗೊಂಡ ಕೆಲ ಗ್ರಾಹಕರು ಒಟ್ಟಾಗಿ ಮದೀನಾ ಹೋಟೆಲ್ ಮೇಲೆ ದಾಳಿ ಮಾಡಿದಾಗ ನಾಯಿ ಮಾಂಸದ ಸಾಕ್ಷಿಯೊಂದಿಗೆ ಆರೋಪಿ ಆಜಾದ್ ಗ್ರಾಹಕರ ಕೈಗೆ ಸಿಕ್ಕಿಬಿದ್ದಿದ್ದಾನೆ ಎನ್ನಲಾಗಿದೆ. ಬಿರಿಯಾನಿಗೆ ನಾಯಿ ಮಾಂಸ ಬೆರೆಸುತ್ತಿದ್ದ ಆಜಾದ್‌ನನ್ನು ಗ್ರಾಹಕರು ಹಿಡಿದು ಥಳಿಸಿದ್ದಾರೆ.

ಘಟನಾ ಸ್ಥಳಕ್ಕೆ ಪಾಂಡವಪುರ ನಗರ ಪೊಲೀಸ್ ಠಾಣೆಯ ಸಿಬ್ಬಂದಿ ದೌಡಾಯಿಸಿದ್ದು, ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ. ಸದ್ಯ ಪ್ರಕರಣ ದಾಖಲಾಗಿದ್ದು, ಪೊಲೀಸರ ತನಿಖೆಯಲ್ಲಿ ಸತ್ಯಾಂಶ ತಿಳಿದು ಬರಬೇಕಿದೆ.

Leave a Comment

Your email address will not be published. Required fields are marked *