ಕಪ್‌ ಗೆದ್ದ RCB ತಂಡದಿಂದ ಇಂದು ಬೆಂಗಳೂರಿನಲ್ಲಿ ವಿಜಯಯಾತ್ರೆ

ಸಮಗ್ರ ನ್ಯೂಸ್: ಅಹಮದಾಬಾದ್ ನಲ್ಲಿರುವ ನರೇಂದ್ರ ಮೋದಿ ಸ್ಟೇಡಿಯಂ ನಲ್ಲಿ ಪಂಜಾಬ್ ವಿರುದ್ಧ 6 ಕೆಲವು ಸಾಧಿಸಿ, ರಾಯಲ್ ಚಾಲೆಂಜರ್ಸ್ ಬೆಂಗಳೂರು ಐಪಿಎಲ್ ಟ್ರೋಫಿಯನ್ನು ಗೆದ್ದಿದೆ. ಕಳೆದ 17 ವರ್ಷಗಳಿಂದ ಕಪ್ ಬರ ಎದುರಿಸುತ್ತಿದ್ದ ಆರ್‌ಸಿಬಿ ಇದೀಗ ಚೊಚ್ಚಲ ಕಪ್ ಗೆದ್ದು ಬೀಗಿದೆ. ಈ ನೆಲೆಯಲ್ಲಿ ಇಂದು ಬೆಂಗಳೂರಿನಲ್ಲಿ ಆರ್‌ಸಿಬಿ ಆಟಗಾರರಿಂದ ವಿಜಯೋತ್ಸವ ರ‍್ಯಾಲಿ ನಡೆಯಲಿದೆ.

Ad Widget ... ..

ಚೊಚ್ಚಲ ಐಪಿಎಲ್ ಟ್ರೋಫಿ ಗೆದ್ದಿರುವ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಆರ್‌ಸಿಬಿ ಬಾಯ್ಸ್ ನಿಂದ ವಿಜಯಯಾತ್ರೆ ನಡೆಸಲಿದ್ದಾರೆ. ಬೆಂಗಳೂರಿಗೆ ಆಗಮಿಸಿ RCB ಬಾಯ್ಸ್ ಬಸ್ ನಲ್ಲಿ ವಿಜಯಯಾತ್ರೆ ನಡೆಸಲಿದ್ದಾರೆ.

Ad Widget

ಬೆಂಗಳೂರಿನ ಪ್ರಮುಖ ರಸ್ತೆಗಳಲ್ಲಿ ಆರ್‌ಸಿಬಿ ರ‍್ಯಾಲಿ ನಡೆಸಲಾಗುತ್ತದೆ. ವಿಧಾನಸೌಧದಿಂದ ಚಿನ್ನಸ್ವಾಮಿ ಸ್ಟೇಡಿಯಂ ಅವರಿಗೆ ಆರ್‌ಸಿಬಿ ಬಾಯ್ಸ್ ರ‍್ಯಾಲಿ ನಡೆಸಲಿದ್ದಾರೆ. ಇಂದು(ಜೂ.4) ಸಂಜೆ 3.30ಕ್ಕೆ ವಿಜಯಯಾತ್ರೆಗೆ ಪ್ಲಾನ್ ಕೂಡ ಮಾಡಲಾಗಿದೆ ಎಂದು ಬಲ್ಲಮೂಲಗಳಿಂದ ತಿಳಿದುಬಂದಿದೆ.

Leave a Comment

Your email address will not be published. Required fields are marked *