“ಈ ಸಲ‌ ಕಪ್‌‌ ನಮ್ದೇ”| 18 ವರ್ಷಗಳ ಬಳಿಕ ಚೊಚ್ಚಲ ಕಪ್‌ ಗೆದ್ದ ಆರ್ ಸಿಬಿ

ಸಮಗ್ರ ನ್ಯೂಸ್: 17 ವರ್ಷಗಳಿಂದ ಆರ್​ಸಿಬಿ ಕೈಗೆಟುಕದ ಗಗನ ಕುಸುಮವೊಂದು ಇದೀಗ ಐಪಿಎಲ್ (IPL 2025) ಕಿರೀಟವಾಗಿ ಆರ್​ಸಿಬಿ (RCB) ಮುಡಿಗೇರಿದೆ. ಕೋಟ್ಯಾಂತರ ಆರ್​ಸಿಬಿ ಅಭಿಮಾನಿಗಳ ಪ್ರಾಥನೆ ಕೊನೆಗೂ ಫಲಿಸಿದೆ. ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ 2025 ರ ಫೈನಲ್ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ (PBKS) ತಂಡವನ್ನು 6 ರನ್​​ಗಳಿಂದ ಮಣಿಸಿದ ಆರ್​ಸಿಬಿ ಚೊಚ್ಚಲ ಐಪಿಎಲ್ ಕಿರೀಟವನ್ನು ತನ್ನ ಮುಡಿಗೇರಿಸಿಕೊಂಡಿದೆ.

Ad Widget . Ad Widget . Ad Widget .

ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಆರ್‌ಸಿಬಿ 20 ಓವರ್‌ಗಳಲ್ಲಿ 9 ವಿಕೆಟ್‌ಗಳಿಗೆ 190 ರನ್ ಗಳಿಸಿತು. ಆರ್‌ಸಿಬಿ ಪರ ಅತಿ ಹೆಚ್ಚು ರನ್ ಗಳಿಸಿದ ವಿರಾಟ್ ಕೊಹ್ಲಿ 35 ಎಸೆತಗಳಲ್ಲಿ 43 ರನ್ ಗಳಿಸಿದರು. ಪಂಜಾಬ್ ಪರ ಕೈಲ್ ಜೇಮಿಸನ್ ಮತ್ತು ಅರ್ಶ್‌ದೀಪ್ ಸಿಂಗ್ ತಲಾ ಮೂರು ವಿಕೆಟ್ ಪಡೆದರು. ಇದಕ್ಕೆ ಪ್ರತಿಕ್ರಿಯೆಯಾಗಿ, ಪಂಜಾಬ್ ಕಿಂಗ್ಸ್ 20 ಓವರ್‌ಗಳಲ್ಲಿ 7 ವಿಕೆಟ್‌ಗಳಿಗೆ 184 ರನ್‌ಗಳಿಸಲಷ್ಟೇ ಶಕ್ತವಾಯಿತು. ಪಂಜಾಬ್ ಪರ ಶಶಾಂಕ್ ಸಿಂಗ್ ಅಜೇಯ 61 ರನ್ ಗಳಿಸಿದರಾದರೂ ತಂಡವನ್ನು ಗೆಲುವಿನ ದಡ ಮುಟ್ಟಿಸಲು ಸಾಧ್ಯವಾಗಲಿಲ್ಲ.

Ad Widget . Ad Widget .

ಜೂನ್ 3 ರ ಮಂಗಳವಾರ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಈ ಫೈನಲ್ ಪಂದ್ಯದಲ್ಲಿ, ವಿರಾಟ್ ಕೊಹ್ಲಿ ಈ ಬಾರಿ ತಮ್ಮ ಹೆಸರಿನ ಮುಂದೆ ಐಪಿಎಲ್ ಚಾಂಪಿಯನ್ ಎಂದು ಬರೆಯಲು ಸಾಧ್ಯವಾಗುತ್ತದೆಯೇ ಅಥವಾ ಇಲ್ಲವೇ ಎಂಬುದರ ಮೇಲೆ ಎಲ್ಲರ ಕಣ್ಣುಗಳಿದ್ದವು.

ಇದಕ್ಕೆ ಒಂದು ಕಾರಣವಿತ್ತು. ಸೀಸನ್ ಪ್ರಾರಂಭವಾಗುವ ಮೊದಲೇ, 18 ನೇ ಸೀಸನ್‌ನಲ್ಲಿ 18 ನೇ ಜೆರ್ಸಿ ಸಂಖ್ಯೆ ಧರಿಸುವ ವಿರಾಟ್‌ಗೆ ಇದು ಅತ್ಯುತ್ತಮ ವರ್ಷವಾಗಿರಬಹುದು ಎಂದು ಪದೇ ಪದೇ ಹೇಳಲಾಗುತ್ತಿತ್ತು. ಅಭಿಮಾನಿಗಳು ಸಹ 18 ನೇ ದಿನದಂದೇ ಮಹಾಭಾರತ ಕೊನೆಗೊಂಡಿತ್ತು ಎಂದು ಹೇಳಲು ಪ್ರಾರಂಭಿಸಿದ್ದರು. ಅಂತಿಮವಾಗಿ ಈ ಎಲ್ಲಾ ಕಾಕತಾಳೀಯಗಳು ಕೊಹ್ಲಿ ಮತ್ತು ಆರ್‌ಸಿಬಿಗೆ ಅನುಕೂಲಕರವೆಂದು ಸಾಬೀತಾಗಿದೆ.

ಆರ್‌ಸಿಬಿ ಗೆಲುವು ದಾಖಸಲಿಸುತ್ತಿದ್ದಂತೆ ವಿರಾಟ್ ಕೊಹ್ಲಿ ಭಾವುಕರಾಗಿ ಕಣ್ಣೀರಿಟ್ಟಿದ್ದರು. ಆದರೆ ಕೊಹ್ಲಿ ತಮ್ಮ ಭಾವನೆ ನಿಯಂತ್ರಿಸಿಕೊಂಡು ಆಡಿದ ಮಾತಿಗೆ ಬೆಂಗಳೂರು ಅಭಿಮಾನಿಗಳು ಭಾವುಕರಾಗಿದ್ದಾರೆ. ಯಾವತ್ತೂ ನನ್ನ ಹೃದಯ ಹಾಗೂ ಆತ್ಮ ಬೆಂಗಳೂರಿನೊಂದಿಗೆ ಬೆಸದುಕೊಂಡಿದೆ. ಎಲ್ಲೀವರಗೆ ನಾನು ಐಪಿಎಲ್ ಆಡುತ್ತೇನೆ, ಅಲ್ಲೀವರೆಗೆ ಆರ್‌ಸಿಬಿಗೆ ಆಡುತ್ತೇನೆ ಎಂದು ಕೊಹ್ಲಿ ಹೇಳಿದ್ದಾರೆ.

Leave a Comment

Your email address will not be published. Required fields are marked *