May 2025

ಕಾಶ್ಮೀರ ವಿಷಯದಲ್ಲಿ ಇನ್ನೊಬ್ಬರ ಮಧ್ಯಸ್ಥಿಕೆ ಅಗತ್ಯವಿಲ್ಲ, ಪಾಕ್ ನಿಂದ ದಾಳಿ ನಡೆದರೆ ಸುಮ್ಮನಿರುವ ಮಾತೇ ಇಲ್ಲ| ಅಮೇರಿಕಾ ಉಪಾಧ್ಯಕ್ಷರ ಖಡಕ್ ಮಾತನಾಡಿದ ನಮೋ

ಸಮಗ್ರ ನ್ಯೂಸ್: ಕದನ ವಿರಾಮ ಉಲ್ಲಂಘಿಸಿದ ಪಾಕಿಸ್ತಾನಕ್ಕೆ ಪ್ರಧಾನಿ ಮೋದಿ ಎಚ್ಚರಿಕೆ ನೀಡಿದ್ದು, ಮತ್ತೆ ಏನಾದರೂ ದಾಳಿ ಮಾಡಿದರೆ ತಕ್ಕ ತಿರುಗೇಟು ನೀಡುತ್ತೇವೆ ಎಂದು ಅಮೆರಿಕ ಉಪಾಧ್ಯಕ್ಷ ಜೆ.ಡಿ. ವ್ಯಾನ್ಸ್ ತಿಳಿಸಿದ್ದಾರೆ. ದೂರವಾಣಿಯ ಮೂಲಕ ಜೆ.ಡಿ. ವ್ಯಾನ್ಸ್ ಅವರೊಂದಿಗೆ ಚರ್ಚೆ ನಡೆಸಿದ ಮೋದಿ, ಕದನ ವಿರಾಮ ಉಲ್ಲಂಘಿಸಿದ ಪಾಕಿಸ್ತಾನಕ್ಕೆ ಸ್ಪಷ್ಟ ಸಂದೇಶ ನೀಡಿದ್ದಾರೆ. ಕಾಶ್ಮೀರ ವಿವಾದ ಬಗೆಹರಿಸಲು ಯಾರ ಮಧ್ಯಸ್ಥಿಕೆಯೂ ಬೇಡ. ಯಾರ ಮಧ್ಯಸ್ಥಿಕೆ ಕೂಡ ನಮಗೆ ಬೇಕಾಗಿಲ್ಲ ಎಂದು ಹೇಳಿದ್ದಾರೆ. ಪಿಒಕೆ ಮರಳುವಿಕೆ ಚರ್ಚಿಸಬೇಕಾದ ಏಕೈಕ […]

ಕಾಶ್ಮೀರ ವಿಷಯದಲ್ಲಿ ಇನ್ನೊಬ್ಬರ ಮಧ್ಯಸ್ಥಿಕೆ ಅಗತ್ಯವಿಲ್ಲ, ಪಾಕ್ ನಿಂದ ದಾಳಿ ನಡೆದರೆ ಸುಮ್ಮನಿರುವ ಮಾತೇ ಇಲ್ಲ| ಅಮೇರಿಕಾ ಉಪಾಧ್ಯಕ್ಷರ ಖಡಕ್ ಮಾತನಾಡಿದ ನಮೋ Read More »

ಟೆಸ್ಟ್ ಕ್ರಿಕೆಟ್ ಗೆ ವಿರಾಟ್ ಕೊಹ್ಲಿ ಗುಡ್ ಬೈ

ಸಮಗ್ರ ನ್ಯೂಸ್: ಕ್ರಿಕೆಟ್ ಸೂಪರ್ ಸ್ಟಾರ್ ವಿರಾಟ್‌ ಕೊಹ್ಲಿ ಅವರು ಟೆಸ್ಟ್ ಕ್ರಿಕೆಟ್‌ಗೆ ವಿದಾಯ ಹೇಳಿದ್ದು, ಸೋಶಿಯಲ್‌ ಮೀಡಿಯಾದಲ್ಲಿ ಈ ಬಗ್ಗೆ ಅಧಿಕೃತವಾಗಿ ಮಾಹಿತಿ ಹಂಚಿಕೊಂಡಿದ್ದಾರೆ. ಟೆಸ್ಟ್ ಕ್ರಿಕೆಟ್‌ನಲ್ಲಿ ನಾನು ಮೊದಲ ಬಾರಿಗೆ ಗುಡ್ಡೆಯ ನೀಲಿ ಜರ್ಸಿ ಧರಿಸಿ 14 ವರ್ಷಗಳಾಗಿವೆ. ನಿಜವಾಗಿಯೂ, ಈ ಸ್ವರೂಪವು ನನ್ನನ್ನು ಎಲ್ಲಿ ಕೊಂಡೊಯ್ಯುತ್ತದೆ ಎಂದು ನಾನು ಎಂದಿಗೂ ಊಹಿಸಿರಲಿಲ್ಲ. ಇದು ನನ್ನನ್ನು ಪರೀಕ್ಷಿಸಿದೆ, ರೂಪಿಸಿದೆ ಮತ್ತು ಜೀವನಪೂರ್ತಿ ನೆನಪಿನಲ್ಲಿರುವ ಪಾಠಗಳನ್ನು ಕಲಿಸಿದೆ. ಬಿಳಿಯ ಉಡುಪಿನಲ್ಲಿ ಆಡುವುದರಲ್ಲಿ ಏನೋ ಆತ್ಮೀಯವಾದದ್ದು ಇದೆ.

ಟೆಸ್ಟ್ ಕ್ರಿಕೆಟ್ ಗೆ ವಿರಾಟ್ ಕೊಹ್ಲಿ ಗುಡ್ ಬೈ Read More »

ಪಾಕ್ ಗೆ ಸಮನ್ಸ್ ನೀಡಿದ ಚೀನಾ? ಭಾರತದ ಮೇಲೆ ತನ ದೇಶದ ಕ್ಷಿಪಣಿ ಬಳಸಿದ್ದಕ್ಕೆ ಕಿವಿ ಹಿಂಡಿದ ಡ್ಯ್ರಾಗನ್

ಸಮಗ್ರ ನ್ಯೂಸ್: ತಮ್ಮ ದೇಶದ ಪಿಎಸ್‌15 ಕ್ಷಿಪಣಿ, ಜೆ17 ಫೈಟರ್‌ ಜೆಟ್‌ಗಳನ್ನು ಯುದ್ಧಕ್ಕೆ ಬಳಸಬಾರದು ಎನ್ನುವ ಷರತ್ತನ್ನು ಹಾಕಿದ್ದರೂ ಅದನ್ನು ಧಿಕ್ಕರಿಸಿದ ಪಾಕ್‌ಗೆ ಚೀನಾ ಸಮನ್ಸ್‌ ನೀಡಿದೆ. ಮತ್ತೊಂದೆಡೆ ಎಫ್‌-16 ವಿಮಾನ ಬಳಕೆಯಲ್ಲಿಯೂ ಪಾಕ್ ಅಮೆರಿಕದ ನಿಯಮ ಉಲ್ಲಂಘಿಸಿದೆ ಎಂಬ ಆರೋಪ ಕೇಳಿಬಂದಿದೆ. ಪಾಕಿಸ್ತಾನದ ಹಾರಿಸಿಬಿಟ್ಟ ಪಿಎಸ್‌15 ಕ್ಷಿಪಣಿಗಳನ್ನು ಭಾರತ ಹೊಡೆದುರುಳಿಸಿತ್ತು. ಜೊತೆಗೆ ಜೆ17 ಯುದ್ಧ ವಿಮಾನಗಳು, ಪಿಎಲ್‌15 ಕ್ಷಿಪಣಿಗಳು, ಜೆ 17 ವಿಮಾನಗಳನ್ನು ಭಾರತ ಹೊಡೆದುರುಳಿಸಿತ್ತು. ಇದರಿಂದಾಗಿ ಜಾಗತಿಕ ಮಟ್ಟದಲ್ಲಿ ಚೀನಾದ ಶಸ್ತ್ರಾಸ್ತ್ರಗಳ ಘನತೆಗೆ ಧಕ್ಕೆ

ಪಾಕ್ ಗೆ ಸಮನ್ಸ್ ನೀಡಿದ ಚೀನಾ? ಭಾರತದ ಮೇಲೆ ತನ ದೇಶದ ಕ್ಷಿಪಣಿ ಬಳಸಿದ್ದಕ್ಕೆ ಕಿವಿ ಹಿಂಡಿದ ಡ್ಯ್ರಾಗನ್ Read More »

ಆಪರೇಷನ್ ಸಿಂಧೂರ ಇನ್ನೂ ಮುಗಿದಿಲ್ಲ.. IAF ಮಹತ್ವದ ಹೇಳಿಕೆ..!

ಸಮಗ್ರ ನ್ಯೂಸ್: ಭಾರತ ಮತ್ತು ಪಾಕಿಸ್ತಾನ ಮಧ್ಯೆ ದಾಳಿಗಳು ನಡೆಯುತ್ತಿದ್ದು. ಇದೀಗ ಕದನವಿರಾಮ ಸಿಕ್ಕಿದೆ. ಆದರೆ ಕದನ ವಿರಾಮ ಉಲ್ಲಂಘಿಸಿದ ಪಾಕಿಸ್ತಾನ ನಿನ್ನೆ ರಾತ್ರಿ ಜಮ್ಮು ಕಾಶ್ಮೀರ ಮತ್ತು ಗಡಿ ರಾಜ್ಯಗಳ ಮೇಲೆ ಡ್ರೋನ್ ದಾಳಿ ಮಾಡಿದೆ. ಇದೇ ವಿಚಾರವಾಗಿ ಭಾರತೀಯ ವಾಯುಪಡೆ( IAF) ಟ್ವೀಟ್ ಮಾಡಿದ್ದು ಆಪರೇಷನ್ ಸಿಂಧೂರ್(Operation Sindoor) ಮುಂದುವರೆದಿದೆ, ಸರಿಯಾದ ಸಮಯದಲ್ಲಿ ಸೂಕ್ತ ಮಾಹಿತಿಗಳನ್ನು ಹಂಚಿಕೊಳ್ಳಲಾಗುವುದು ಎಂದು ಭಾರತೀಯ ವಾಯುಪಡೆ(ಐಎಎಫ್) ಮಾಹಿತಿ ನೀಡಿದೆ. ಭಾರತೀಯ ವಾಯುಪಡೆ (ಐಎಎಫ್) ಆಪರೇಷನ್ ಸಿಂಧೂರ್ ಅಡಿಯಲ್ಲಿ ನಿಯೋಜಿಸಲಾದ

ಆಪರೇಷನ್ ಸಿಂಧೂರ ಇನ್ನೂ ಮುಗಿದಿಲ್ಲ.. IAF ಮಹತ್ವದ ಹೇಳಿಕೆ..! Read More »

‘ಕಾಮಿಡಿ ಕಿಲಾಡಿಗಳು’ ಖ್ಯಾತಿಯ ರಾಕೇಶ್ ಪೂಜಾರಿ ಇನ್ನಿಲ್ಲ

ಸಮಗ್ರ ನ್ಯೂಸ್: ಝೀಕನ್ನಡ ವಾಹಿನಿಯ ಜನಪ್ರಿಯ ಕಾಮಿಡಿ ಕಾರ್ಯಕ್ರಮ ‘ಕಾಮಿಡಿ ಕಿಲಾಡಿ’ ಸೀಸನ್-3ರ ವಿಜೇತ, ಪ್ರತಿಭಾನ್ವಿತ ಕಲಾವಿದ ರಾಕೇಶ್ ಪೂಜಾರಿ ಅವರು ನಿಧನರಾಗಿದ್ದಾರೆ. ರಾಕೇಶ್ ಅವರ ಆಕಸ್ಮಿಕ ಸಾವು ಅವರ ಅಭಿಮಾನಿಗಳಿಗೆ ಮಾತ್ರವಲ್ಲ, ಕಿರುತೆರೆಯ ಸಹ ಕಲಾವಿದರಿಗೂ ಆಘಾತವನ್ನುಂಟು ಮಾಡಿದೆ. ರಾಕೇಶ್ ಪೂಜಾರಿ ಅವರು ಕಾಮಿಡಿ ಕಿಲಾಡಿ ಕಾರ್ಯಕ್ರಮದ ಮೂಲಕ ಕರ್ನಾಟಕದ ಮನೆಮಾತಾಗಿದ್ದರು. ಅವರ ಹಾಸ್ಯ, ಸಹಜತೆ, ಮತ್ತು ಜನರನ್ನು ನಗಿಸುವ ವಿಶಿಷ್ಟ ಶೈಲಿಯಿಂದಾಗಿ ಎಲ್ಲರ ಮನಗೆದ್ದಿದ್ದರು. ಕಾರ್ಯಕ್ರಮದ ಸೀಸನ್-3ರಲ್ಲಿ ತಮ್ಮ ಅದ್ಭುತ ಪ್ರದರ್ಶನದಿಂದ ವಿಜೇತರಾಗಿ ಹೊರಹೊಮ್ಮಿದ್ದ

‘ಕಾಮಿಡಿ ಕಿಲಾಡಿಗಳು’ ಖ್ಯಾತಿಯ ರಾಕೇಶ್ ಪೂಜಾರಿ ಇನ್ನಿಲ್ಲ Read More »

ಯಾವುದೇ ಉಗ್ರದಾಳಿಯನ್ನು ಯುದ್ಧವೆಂದು ಪರಿಗಣಿಸಲು ಭಾರತ ತೀರ್ಮಾನ

ಸಮಗ್ರ ನ್ಯೂಸ್: ಭವಿಷ್ಯದಲ್ಲಿ ಯಾವುದೇ ಭಯೋತ್ಪಾದಕ ದಾಳಿಯನ್ನು ಯುದ್ಧ ಕೃತ್ಯವೆಂದು ಪರಿಗಣಿಸಲು ಭಾರತ ನಿರ್ಧರಿಸಿದೆ. ಈ ಮೂಲಕ ಪಾಕಿಸ್ತಾನಕ್ಕೆ ಭಾರತ ಮತ್ತೊಂದು ಶಾಕ್ ನೀಡಿದೆ. ಭಾರತದ ಆಪರೇಷನ್ ಸಿಂಧೂರ್ ನಂತರ ಪಾಕಿಸ್ತಾನ ಅಪ್ರಚೋದಿತ ಆಕ್ರಮಣದಿಂದಾಗಿ ಉಭಯ ರಾಷ್ಟ್ರಗಳ ನಡುವೆ ಉದ್ವಿಗ್ನತೆ ಗಗನಕ್ಕೇರಿರುವಂತೆಯೇ, ದೇಶದಲ್ಲಿ ಭವಿಷ್ಯದಲ್ಲಿ ಯಾವುದೇ ಭಯೋತ್ಪಾದಕ ದಾಳಿಯನ್ನು ಯುದ್ಧದ ಕೃತ್ಯವೆಂದು ಪರಿಗಣಿಸಲಾಗುವುದು ಎಂದು ಭಾರತ ಪಾಕಿಸ್ತಾನಕ್ಕೆ ಕಠಿಣ ಎಚ್ಚರಿಕೆ ನೀಡಿದೆ ಎಂದು ಮೂಲಗಳು ಶನಿವಾರ ತಿಳಿಸಿವೆ. ಮೇ 7 ರಿಂದ ಸತತ ಮೂರು ರಾತ್ರಿ ಇಸ್ಲಾಮಾಬಾದ್

ಯಾವುದೇ ಉಗ್ರದಾಳಿಯನ್ನು ಯುದ್ಧವೆಂದು ಪರಿಗಣಿಸಲು ಭಾರತ ತೀರ್ಮಾನ Read More »

ಕದನ ವಿರಾಮದ ಬಳಿಕ ನರಿಬುದ್ದಿ ತೋರಿದ ಪಾಕ್| ಜಮ್ಮು ಕಾಶ್ಮೀರದ ಹಲವೆಡೆ ಡ್ರೋಣ್ ದಾಳಿ

ಸಮಗ್ರ ನ್ಯೂಸ್: ಕದನ ವಿರಾಮ ಘೋಷಣೆ ಬೆನ್ನಲ್ಲೇ‌ ಮತ್ತೆ ನರಿ ಬುದ್ದಿ ತೋರಿರುವ ಪಾಕ್ ಜಮ್ಮು ಕಾಶ್ಮೀರದ ಹಲವು ನಗರಗಳನ್ನು ಗುರಿಯಾಗಿರಿಸಿ ಡ್ರೋಣ್ ದಾಳಿ ನಡೆಸಿದೆ. ಇದೀಗ ಬಂದ ಮಾಹಿತಿಗಳ ಶ್ರೀನಗರದ ಲಾಲ್ ಚೌಕ್, ಉದಂಪುರ ಸೇರಿದಂತೆ ಹಲವು ನಗರಗಳಲ್ಲಿ ಪಾಕ್ ಕದನ ವಿರಾಮ ಉಲ್ಲಂಘಿಸಿದ್ದು, ಡ್ರೋಣ್ ದಾಳಿ ನಡೆಸಿರುವುದಾಗಿ ತಿಳಿದುಬಂದಿದೆ. ಉಳಿದಂತೆ ಗುಜರಾತ್ ನ ಕಚ್, ರಾಜಸ್ಥಾನದ ಜೈಸ್ಮೇರ್ ನಲ್ಲಿ ಪಾಕಿಸ್ತಾನ ಡ್ರೋಣ್ ದಾಳಿ ನಡೆಸಿದ್ದು ಕದನ ವಿರಾಮ ಉಲ್ಲಂಘನೆಯಾಗಿದೆ.

ಕದನ ವಿರಾಮದ ಬಳಿಕ ನರಿಬುದ್ದಿ ತೋರಿದ ಪಾಕ್| ಜಮ್ಮು ಕಾಶ್ಮೀರದ ಹಲವೆಡೆ ಡ್ರೋಣ್ ದಾಳಿ Read More »

ಭಾರತ – ಪಾಕ್ ನಡುವೆ ಕದನ ವಿರಾಮ| ಅಮೇರಿಕಾ ಅಧ್ಯಕ್ಷ ಟ್ರಂಪ್ ಘೋಷಣೆ

ಸಮಗ್ರ ನ್ಯೂಸ್: ಗಡಿಯಲ್ಲಿ ಉದ್ವಿಗ್ನತೆ ಹೆಚ್ಚುತ್ತಿರುವ ನಡುವೆ, ಭಾರತ ಮತ್ತು ಪಾಕಿಸ್ತಾನ ಪೂರ್ಣ ಮತ್ತು ತಕ್ಷಣದ ಕದನ ವಿರಾಮಕ್ಕೆ ಒಪ್ಪಿಕೊಂಡಿವೆ ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ ಎಂದು ಎಎನ್‌ಐ ಸುದ್ದಿ ಸಂಸ್ಥೆ ರಾಯಿಟರ್ಸ್ ಉಲ್ಲೇಖಿಸಿ ವರದಿ ಮಾಡಿದೆ. ಡೊನಾಲ್ಡ್ ಟ್ರಂಪ್ ಸಹ ಟ್ವೀಟ್ ಮಾಡುವ ಮೂಲಕ ಮಾಹಿತಿಯನ್ನು ನೀಡಿದ್ದಾರೆ. ಎರಡು ದೇಶಗಳು ಬುದ್ಧಿವಂತಿಕೆಯನ್ನು ಪ್ರದರ್ಶಿಸಿವೆ. ಎರಡು ದೇಶಗಳು ಕದನ ವಿರಾಮಕ್ಕೆ ಒಪ್ಪಿಕೊಂಡಿರೋದಕ್ಕೆ ಸಂತೋಷವಾಗಿದೆ ಎಂದು ಟ್ರಂಪ್ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ಇತ್ತ ಅಮೆರಿಕ ವಿದೇಶಾಂಗ

ಭಾರತ – ಪಾಕ್ ನಡುವೆ ಕದನ ವಿರಾಮ| ಅಮೇರಿಕಾ ಅಧ್ಯಕ್ಷ ಟ್ರಂಪ್ ಘೋಷಣೆ Read More »

2025 ರ ಐಪಿಎಲ್ ಸಂಪೂರ್ಣವಾಗಿ ರದ್ದಾಗಿಲ್ಲ..! ಶೀಘ್ರದಲ್ಲೇ ಮರು ನಿಗದಿ

ಸಮಗ್ರ ನ್ಯೂಸ್: ಭಾರತ ಮತ್ತು ಪಾಕಿಸ್ತಾನ ನಡುವೆ ಉದ್ವಿಗ್ನ ಪರಿಸ್ಥಿತಿ ಎದುರಾಗಿದ್ದು ಇದೀಗ ಈ ವಿಚಾರಕ್ಕೆ ಸಂಬಂಧಿಸಿದಂತೆ ಬಿಸಿಸಿಐ (BCCI), ಒಂದು ದೊಡ್ಡ ನಿರ್ಧಾರವನ್ನು ತೆಗೆದುಕೊಂಡಿದೆ. 2025 ರ ಐಪಿಎಲ್ (IPL 2025) ಅನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ. ಪಾಕಿಸ್ತಾನ ಭಾರತದ ಹಲವಾರು ನಗರಗಳ ಮೇಲೆ ಡ್ರೋನ್ ದಾಳಿ ನಡೆಸಿತು. ಆದರೆ, ಭಾರತ ಪಾಕಿಸ್ತಾನಕ್ಕೆ ಸೂಕ್ತ ಪ್ರತ್ಯುತ್ತರ ನೀಡಿ ಅದರ ಕ್ಷಿಪಣಿಗಳು ಮತ್ತು ಡ್ರೋನ್‌ಗಳನ್ನು ಹೊಡೆದುರುಳಿಸಿತು. ಆದರೆ ಈ ದಾಳಿಯ ಪರಿಣಾಮದಿಂದಾಗಿ ಧರ್ಮಶಾಲಾದಲ್ಲಿ ನಡೆಯುತ್ತಿದ್ದ ಪಂಜಾಬ್ ಕಿಂಗ್ಸ್ ಮತ್ತು

2025 ರ ಐಪಿಎಲ್ ಸಂಪೂರ್ಣವಾಗಿ ರದ್ದಾಗಿಲ್ಲ..! ಶೀಘ್ರದಲ್ಲೇ ಮರು ನಿಗದಿ Read More »

ಮತ್ತೆ ಭಾರತದ ಮೇಲೆ ಪಾಕ್ ಡ್ರೋನ್ ದಾಳಿ.. ಗಡಿ ರಾಜ್ಯಗಳು ಬ್ಲಾಕ್ ಔಟ್..!

ಸಮಗ್ರ ನ್ಯೂಸ್: ಭಾರತದ ಮೇಲೆ ಪಾಕಿಸ್ತಾನ ಮತ್ತೋಮ್ಮೆ ಬಾಲ ಬಿಚ್ಚಿದೆ. ಜಮ್ಮು ಕಾಶ್ಮೀರ, ರಾಜಸ್ಥಾನ, ಪಂಜಾಬ್ ಗಡಿ ಪ್ರದೇಶಗಳ ಮೇಲೆ ಪಾಕ್ ಡ್ರೋನ್ ದಾಳಿ ನಡೆಸಿದೆ. ಇಂದು (ಮೇ 09) ಬೆಳಗ್ಗೆಯಿಂದ ಯಾವುದೇ ಡ್ರೋನ್ ದಾಳಿಗಳು ಆಗಿರಲಿಲ್ಲ. ಬದಲಿಗೆ ಪಾಕ್ ಆಗಾಗ ಬಾರ್ಡರ್ನಲ್ಲಿ ಶೆಲ್ ಹಾಗೂ ಗುಂಡಿನ ದಾಳಿ ನಡೆಸಿತ್ತು. ಇದಕ್ಕೆ ಭಾರತ ಸಹ ತಿರುಗೇಟು ನೀಡಿತ್ತು. ಆದ್ರೆ, ಇದೀಗ ರಾತ್ರಿಯಾಗುತ್ತಿದ್ದಂತೆಯೇ ಪಾಕಿಸ್ತಾನ ಮತ್ತೆ ಡ್ರೋನ್ ದಾಳಿಗೆ ಯತ್ನಿಸಿದೆ. ಪಾಕ್ ದಾಳಿ ನಡೆಸುತ್ತಿದ್ದಂತೆಯೇ ಜಮ್ಮು -ಕಾಶ್ಮೀರದಲ್ಲಿ ಸೈರನ್

ಮತ್ತೆ ಭಾರತದ ಮೇಲೆ ಪಾಕ್ ಡ್ರೋನ್ ದಾಳಿ.. ಗಡಿ ರಾಜ್ಯಗಳು ಬ್ಲಾಕ್ ಔಟ್..! Read More »