May 2025

ರಾಜ್ಯದಲ್ಲಿ ಮತ್ತೆ ಕಾಣಿಸಿಕೊಂಡ ಕೊರೊನಾ ಹೊಸ ಅಲೆ| 8 ಪ್ರಕರಣಗಳು ಪತ್ತೆ

ಸಮಗ್ರ ನ್ಯೂಸ್: ಸಿಂಗಾಪುರ್ ಮತ್ತು ಹಾಂಕಾಂಗ್ ನಲ್ಲಿ ಕೊರೋನಾ ಹೊಸ ತಳಿ ಸೋಂಕು ಹೆಚ್ಚಾಗಿದ್ದು, ಈ ಒಂದು ಕೊರೋನಾ ಸೋಂಕು ಭಾರತಕ್ಕೂ ಕಾಲಿಟ್ಟಿದ್ದು, ಕರ್ನಾಟಕದಲ್ಲಿ ಇದೀಗ 8 ಪ್ರಕರಣಗಳು ಪತ್ತೆಯಾಗಿವೆ ಎಂದು ಬಲ್ಲ ಮೂಲಗಳಿಂದ ತಿಳಿದು ಬಂದಿದೆ. ಕೋವಿಡ್ ಹೊಸ ಅಲೆ ಶುರುವಾಗಿದ್ದು, ಕರ್ನಾಟದಲ್ಲಿ 8 ಪ್ರಕರಣ ಸೇರಿ ದೇಶಾದ್ಯಂತ 257 ಕೇಸ್ ಪತ್ತೆಯಾಗಿವೆ. ಇದುವರೆಗೂ ಭಾರತದಲ್ಲಿ 257 ಪ್ರಕರಣಗಳು ಹಾಗೂ ಕರ್ನಾಟಕದಲ್ಲಿ 8 ಕೇಸ್ ಪತ್ತೆಯಾಗಿದ್ದು, ಕೇರಳದಲ್ಲಿ 69, ಮಹಾರಾಷ್ಟ್ರ 44, ತಮಿಳುನಾಡು 34, ಗುಜರಾತ್, […]

ರಾಜ್ಯದಲ್ಲಿ ಮತ್ತೆ ಕಾಣಿಸಿಕೊಂಡ ಕೊರೊನಾ ಹೊಸ ಅಲೆ| 8 ಪ್ರಕರಣಗಳು ಪತ್ತೆ Read More »

ಬೆಳ್ತಂಗಡಿ: ಆಕಾಂಕ್ಷ ಆತ್ಮಹತ್ಯೆ ಪ್ರಕರಣ| ಆರೋಪಿ ಬಿಜಿಲ್ ಮ್ಯಾಥ್ಯೂ ಬಂಧನ

ಸಮಗ್ರ ನ್ಯೂಸ್: ಆಕಾಂಕ್ಷ ಎಸ್‌. ನಾಯರ್ ಅವರ ಆತ್ಮಹತ್ಯೆಗೆ ಪ್ರೇರಣೆ ನೀಡಿದ ಆರೋಪದಲ್ಲಿ ಕೇರಳ ಮೂಲದ ಪ್ರೊಫೆಸರ್ ಬಿಜಿಲ್ ಸಿ. ಮ್ಯಾಥ್ಯೂ ಅವರನ್ನು ಸೋಮವಾರ ರಾತ್ರಿ ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ. ಆಕಾಂಕ್ಷ ಅವರ ಮೃತದೇಹ ಬುಧವಾರ ಧರ್ಮಸ್ಥಳ ತಲುಪಲಿದ್ದು, ಬೊಳಿಯಾರ್ ನ ಅವರ ಮನೆಯ ಬಳಿ ಅಂತ್ಯಸಂಸ್ಕಾರ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ. ಸೋಮವಾರ ಮರಣೋತ್ತರ ಪರೀಕ್ಷೆ ನಡೆಸಿದ ಸಿವಿಲ್ ಸರ್ಕಾರಿ ಆಸ್ಪತ್ರೆ ವೈದ್ಯರು, ಶವವನ್ನು ಮನೆಯವರಿಗೆ ಹಸ್ತಾಂತರಿಸಿದ್ದಾರೆ. ದೆಹಲಿ

ಬೆಳ್ತಂಗಡಿ: ಆಕಾಂಕ್ಷ ಆತ್ಮಹತ್ಯೆ ಪ್ರಕರಣ| ಆರೋಪಿ ಬಿಜಿಲ್ ಮ್ಯಾಥ್ಯೂ ಬಂಧನ Read More »

ಕರಾವಳಿಯಲ್ಲಿ ಜೂ.1ರಿಂದ ಎರಡು ತಿಂಗಳು ಸಮುದ್ರ ಮೀನುಗಾರಿಕೆ ನಿಷೇಧ

ಸಮಗ್ರ ನ್ಯೂಸ್: ಕರ್ನಾಟಕದ ಕರಾವಳಿ ತೀರದಲ್ಲಿ ಯಾವುದೇ ಬಲೆ ಅಥವಾ ಸಾಧನಗಳನ್ನು ಉಪಯೋಗಿಸಿ ಎಲ್ಲಾ ರೀತಿಯ ಯಾಂತ್ರೀಕೃತ ದೋಣಿಗಳ ಮೂಲಕ ಹಾಗೂ 10 ಹಾರ್ಸ್ ಪವರ್ ಸಾಮರ್ಥ್ಯಕ್ಕಿಂತ ಮೇಲ್ಪಟ್ಟ ಮೋಟಾರೀಕೃತ ದೋಣಿ ಹಾಗೂ ಸಾಂಪ್ರದಾಯಿಕ ದೋಣಿಗಳ ಮೂಲಕ ನಡೆಸುವ ಮೀನುಗಾರಿಕಾ ಚಟುವಟಿಕೆಯನ್ನು ಜೂನ್‌ 1ರಿಂದ ಜುಲೈ 31ರವರೆಗೆ ನಿಷೇಧಿಸಲಾಗಿದೆ. ದೋಣಿಯನ್ನು ಸಾಗಿಸುವ ಉದ್ದೇಶಕ್ಕಾಗಿ 10 ಅಶ್ವಶಕ್ತಿಯವರೆಗಿನ ಸಾಮರ್ಥ್ಯದ ಮೋಟಾರ್ ಇಂಜಿನ್ ಹಾಗೂ ನಾಡದೋಣಿಗಳ ಮೂಲಕ ಮೀನುಗಾರಿಕೆ ನಡೆಸಲು ಅನುಮತಿ ನೀಡಲಾಗಿದೆ. ಮೀನುಗಾರಿಕೆ ನಿಷೇಧಿಸಿರುವ ಸರ್ಕಾರದ ಆದೇಶವನ್ನು ಉಲ್ಲಂಘಿಸಿದರೆ

ಕರಾವಳಿಯಲ್ಲಿ ಜೂ.1ರಿಂದ ಎರಡು ತಿಂಗಳು ಸಮುದ್ರ ಮೀನುಗಾರಿಕೆ ನಿಷೇಧ Read More »

ಚುನಾವಣಾ ವೇಳೆ ಕೊಟ್ಟಿದ್ದ ಭರವಸೆಗಳನ್ನು ಎರಡು ವರ್ಷದಲ್ಲಿ ಈಡೇರಿಸಿದ್ದೇವೆ – ಸಿಎಂ

ಸಮಗ್ರ ನ್ಯೂಸ್: ಚುನಾವಣೆ ವೇಳೆ ನಾವು ಕೊಟ್ಟಿದ್ದ ಭರವಸೆಗಳಲ್ಲಿ ಐದು ಗ್ಯಾರಂಟಿಗಳ ಜೊತೆಗೆ 142 ಭರವಸೆಗಳನ್ನು ಎರಡು ವರ್ಷಗಳಲ್ಲಿ ಪೂರೈಸಿದ್ದೇವೆ. ಮುಂದಿನ ಮೂರು ವರ್ಷಗಳಲ್ಲಿ ಉಳಿದ ಭರವಸೆ ಈಡೇರಿಸುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭರವಸೆ ನೀಡಿದರು. ಸರ್ಕಾರ ಎರಡು ವರ್ಷ ಪೂರೈಸಿದ ಸಂದರ್ಭಕ್ಕೆ ಕಂದಾಯ ಇಲಾಖೆ ಆಯೋಜಿಸಿದ್ದ “ಸಮರ್ಪಣೆ ಸಂಕಲ್ಪ” ಸಮಾವೇಶದಲ್ಲಿ 1,11,111 ಮಂದಿಗೆ ಹಕ್ಕುಪತ್ರ ವಿತರಣೆ ಮಾತನಾಡಿದರು. ಮೊದಲ ಬಾರಿ ಮುಖ್ಯಮಂತ್ರಿಯಾಗಿ ನಾವು ನೀಡಿದ್ದ 165 ಭರವಸೆಗಳಲ್ಲಿ 158 ಭರವಸೆಗಳನ್ನು ಈಡೇರಿಸಿದ್ದಲ್ಲದೆ, ಹೊಸದಾದ 30

ಚುನಾವಣಾ ವೇಳೆ ಕೊಟ್ಟಿದ್ದ ಭರವಸೆಗಳನ್ನು ಎರಡು ವರ್ಷದಲ್ಲಿ ಈಡೇರಿಸಿದ್ದೇವೆ – ಸಿಎಂ Read More »

ಕನ್ನಡದ ಹಿರಿಯ ಸಾಹಿತಿ ಬಾನು ಮುಷ್ತಾಕ್ ರ ”ಹಾರ್ಟ್ ಲ್ಯಾಂಪ್” ಕೃತಿಗೆ ಪ್ರತಿಷ್ಠಿತ ಅಂತರಾಷ್ಟ್ರೀಯ ಬೂಕರ್ ಪ್ರಶಸ್ತಿ

ಸಮಗ್ರ ನ್ಯೂಸ್: ಕನ್ನಡದ ಖ್ಯಾತ ಹಿರಿಯ ಸಾಹಿತಿ ಬಾನು ಮುಷ್ತಾಕ್‌ ಅವರ ಸಣ್ಣ ಕಥಾ ಸಂಕಲನ ‘ಹಾರ್ಟ್ ಲ್ಯಾಂಪ್’ ಕೃತಿಯು 2025ರ ಪ್ರತಿಷ್ಠಿತ ಅಂತಾರಾಷ್ಟ್ರೀಯ ಬೂಕರ್ ಪ್ರಶಸ್ತಿಗೆ ಆಯ್ಕೆಯಾಗಿದೆ. ಅನುವಾದಿತ ಕಾದಂಬರಿ ವಿಭಾಗದ ಅಡಿಯಲ್ಲಿ ಈ ಗೌರವಕ್ಕೆ ಭಾಜನವಾಗಿದ್ದು, ಈ ಪ್ರಶಸ್ತಿಯನ್ನು ಪಡೆದ ಮೊದಲ ಸಣ್ಣ ಕಥೆಯಾಗಿದೆ. ಮುಷ್ತಾಕ್ ಅವರ ಹಾರ್ಟ್​ ಲ್ಯಾಂಪ್​ ಕೃತಿಯು ದಕ್ಷಿಣ ಭಾರತದ ಪಿತೃಪ್ರಧಾನ ಸಮುದಾಯಗಳಲ್ಲಿನ ಮಹಿಳೆಯರ ಜೀವನವನ್ನು ನಿರೂಪಿಸುವ 12 ಕಥೆಗಳನ್ನು ಹೊಂದಿದೆ. ತೀರ್ಪುಗಾರರ ಅಧ್ಯಕ್ಷರಾದ ಮ್ಯಾಕ್ಸ್ ಪೋರ್ಟರ್ ಅವರು ಈ

ಕನ್ನಡದ ಹಿರಿಯ ಸಾಹಿತಿ ಬಾನು ಮುಷ್ತಾಕ್ ರ ”ಹಾರ್ಟ್ ಲ್ಯಾಂಪ್” ಕೃತಿಗೆ ಪ್ರತಿಷ್ಠಿತ ಅಂತರಾಷ್ಟ್ರೀಯ ಬೂಕರ್ ಪ್ರಶಸ್ತಿ Read More »

ಗೋಲ್ಡ್ ಸ್ಮಗ್ಲಿಂಗ್ ಪ್ರಕರಣ| ನಟಿ ರನ್ಯಾ ರಾವ್ ಗೆ ಜಾಮೀನು

ಸಮಗ್ರ ನ್ಯೂಸ್: ಗೋಲ್ಡ್ ಸ್ಮಗ್ಲಿಂಗ್ ಪ್ರಕರಣದಲ್ಲಿ ಅರೆಸ್ಟ್ ಆಗಿದ್ದ ನಟಿ ರನ್ಯಾರಾವ್‌ಗೆ ಆರ್ಥಿಕ ವ್ಯವಹಾರಗಳ ವಿಶೇಷ ನ್ಯಾಯಾಲಯ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ. ದುಬೈನಿಂದ 12 ಕೋಟಿ ಮೌಲ್ಯದ 14 ಕೆ.ಜಿ ಚಿನ್ನ ಕಳ್ಳ ಸಾಗಣೆ ಆರೋಪದಲ್ಲಿ ಕಂದಾಯ ಗುಪ್ತಚರ ನಿರ್ದೇಶನಾಲಯದ(ಡಿಆರ್‌ಐ) ಅಧಿಕಾರಿಗಳಿಂದ ಅರಸ್ಟ್ ಆಗಿದ್ದ ನಟಿ ರನ್ಯಾರಾವ್‌ ಸೇರಿ ಮೂವರು ಆರೋಪಿಗಳಿಗೆ ಆರ್ಥಿಕ ವ್ಯವಹಾರಗಳ ವಿಶೇಷ ನ್ಯಾಯಾಲಯ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ. ಮಾರ್ಚ್ 3ರಂದು ಬೆಂಗಳೂರಿಗೆ ಆಗಮಿಸಿದ್ದ ರನ್ಯಾರಾವ್​ರನ್ನು ಕಂದಾಯ ಗುಪ್ತಚರ ಅಧಿಕಾರಿಗಳು (ಡಿಆರ್‌ಐ)

ಗೋಲ್ಡ್ ಸ್ಮಗ್ಲಿಂಗ್ ಪ್ರಕರಣ| ನಟಿ ರನ್ಯಾ ರಾವ್ ಗೆ ಜಾಮೀನು Read More »

ಮಳೆ‌ ಅವಾಂತರಕ್ಕೆ ಮಣಿಪಾಲದಲ್ಲಿ‌ ನದಿಯಂತಾದ ರಸ್ತೆ

ಸಮಗ್ರ ನ್ಯೂಸ್: ಉಡುಪಿ ಜಿಲ್ಲೆಯ ಪ್ರಮುಖ ಶೈಕ್ಷಣಿಕ ಮತ್ತು ಆರೋಗ್ಯದ ಹಬ್ ಆಗಿರುವ ಮಣಿಪಾಲದಲ್ಲಿ ಮಳೆಯಿಂದಾಗಿ ಉಡುಪಿ-ಮಣಿಪಾಲ ರಸ್ತೆಯುದ್ದಕ್ಕೂ ಕೃತಕ ಪ್ರವಾಹ ನಿರ್ಮಾಣವಾಗಿದ್ದು, ವಾಹನ ಸವಾರರು ತೀವ್ರ ತೊಂದರೆ ಅನುಭವಿಸಿದ್ದಾರೆ. ಮಣಿಪಾಲದ ಐನಾಕ್ಸ್ ಬಳಿಯ ರಸ್ತೆ ಸಂಪೂರ್ಣವಾಗಿ ಮುಳುಗಿ, ನದಿಯಂತೆ ನೀರು ಹರಿದಿದ್ದು, ನೀರಿನ ಜೊತೆಗೆ ಕಲ್ಲು ಮಣ್ಣುಗಳು ರಸ್ತೆ ಮೇಲೆ ಹರಿದ ಪರಿಣಾಮ ವಾಹನ ಸಂಚಾರಕ್ಕೆ ತೊಂದರೆಯುಂಟಾಗಿದೆ. ಉಡುಪಿಯ ಪ್ರಮುಖ ರಸ್ತೆಯಾಗಿರುವ ಇಲ್ಲಿ ಸರಿಯಾದ ಚರಂಡಿ ವ್ಯವಸ್ಥೆ ಇಲ್ಲದ ಕಾರಣ ಮಳೆ ನೀರು ರಸ್ತೆ ಮೇಲೆ

ಮಳೆ‌ ಅವಾಂತರಕ್ಕೆ ಮಣಿಪಾಲದಲ್ಲಿ‌ ನದಿಯಂತಾದ ರಸ್ತೆ Read More »

ರೇಣುಕಾಸ್ವಾಮಿ ಕೊಲೆ ಪ್ರಕರಣ| ವಿಚಾರಣೆ ಮುಗಿಸಿ ಮರಳುವ ವೇಳೆ ದರ್ಶನ್ ನ ಹೊಸ ನಂಬರ್ ಕೇಳಿ ಪಡಕೊಂಡ ಪವಿತ್ರಾ

ಸಮಗ್ರ ನ್ಯೂಸ್: ರೇಣುಕಾಸ್ವಾಮಿ ಕೊಲೆ ಪ್ರಕರಣ ಸಂಬಂಧ ಇಂದು 57ನೇ ಸಿಸಿಹೆಚ್ ಕೋರ್ಟ್‌ನಲ್ಲಿ ನಡೆದ ವಿಚಾರಣೆಗೆ ನಟ ದರ್ಶನ್ ಹಾಗೂ ಪವಿತ್ರಾ ಗೌಡ ಸೇರಿದಂತೆ 16 ಜನ ಆರೋಪಿಗಳು ಕೋರ್ಟ್‌ಗೆ ಹಾಜರಾದರು. ಈ ವೇಳೆ ಕೋರ್ಟ್ ವಿಚಾರಣೆ ಮುಗಿಯುವವರೆಗೆ ಗಪ್ ಚುಪ್ ಆಗಿದ್ದ ದರ್ಶನ್ ಮತ್ತು ಪವಿತ್ರಾ ಗೌಡ ಅವರು, ಕೊನೆಗೆ ವಿಚಾರಣೆ ಮುಗಿಸಿ ಹೊರಗೆ ಹೋಗುವಾಗ ನಟಿ ಪವಿತ್ರಾ ಕೈ ಹಿಡಿದು ಕೇಳಿದ್ದಕ್ಕೆ ತನ್ನ ಹೊಸ ನಂಬರ್ ಕೊಟ್ಟಿದ್ದಾರೆ. ರೇಣುಕಾಸ್ವಾಮಿ ಕೊಲೆ ಕೇಸ್​ನಲ್ಲಿ 17 ಜನರನ್ನು

ರೇಣುಕಾಸ್ವಾಮಿ ಕೊಲೆ ಪ್ರಕರಣ| ವಿಚಾರಣೆ ಮುಗಿಸಿ ಮರಳುವ ವೇಳೆ ದರ್ಶನ್ ನ ಹೊಸ ನಂಬರ್ ಕೇಳಿ ಪಡಕೊಂಡ ಪವಿತ್ರಾ Read More »

ಉಪ್ಪಿನಂಗಡಿ ದೇವಸ್ಥಾನದ ಬಸವ ಹೃದಯಾಘಾತದಿಂದ ಸಾವು

ಸಮಗ್ರ ನ್ಯೂಸ್: ಉಪ್ಪಿನಂಗಡಿಯ ಸಹಸ್ರಲಿಂಗೇಶ್ವರ ದೇವಾಲಯದ ಉತ್ಸವಗಳಲ್ಲಿ ಭಾಗವಹಿಸುತ್ತಿದ್ದ, ಲವಲವಿಕೆಯಲ್ಲಿದ್ದ ಬಸವ ಶನಿವಾರ(ಮೇ.17) ಸಂಜೆ ಹೃದಯಾಘಾತದಿಂದ ಮೃತಪಟ್ಟಿದೆ. ದೇವಾಲಯದ ಉತ್ಸವಗಳಲ್ಲಿ ಬೆಳ್ಳಿ ಆಭರಣಗಳನ್ನು ಧರಿಸಿ ದೇವರ ಮುಂದೆ ಸಾಗುತ್ತ ಭಕ್ತರ ಆಕರ್ಷಣೆಗೆ ಒಳಗಾಗಿತ್ತು. ಬಸವನ ಮೃತ ದೇಹವನ್ನು ಕ್ರೇನ್ ಸಹಾಯದಿಂದ ಸ್ಥಳಾಂತರಿಸಿ ಅಂತ್ಯ ಸಂಸ್ಕಾರ ಮಾಡಲಾಯಿತು. ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ರಾಧಾಕೃಷ್ಣ ನಾಯಕ್ ನೇತೃತ್ವದಲ್ಲಿ ವ್ಯವಸ್ಥಾಪನಾ ಸಮಿತಿ ಸದಸ್ಯರು, ಭಕ್ತರು ಅಂತಿಮ ವಿಧಿಯನ್ನು ನೆರವೇರಿಸಿದರು.

ಉಪ್ಪಿನಂಗಡಿ ದೇವಸ್ಥಾನದ ಬಸವ ಹೃದಯಾಘಾತದಿಂದ ಸಾವು Read More »

ನಾಳೆ(ಮೇ.21) ಮದ್ಯದಂಗಡಿ ಬಂದ್

ಸಮಗ್ರ ನ್ಯೂಸ್: ಅಬಕಾರಿ ಸುಂಕ ಹಾಗೂ ಪರವಾನಗಿ ಶುಲ್ಕ ಹೆಚ್ಚಳಕ್ಕೆ ಮದ್ಯದಂಗಡಿ ಮಾಲೀಕರಿಂದ ತೀವ್ರ ವಿರೋಧ ವ್ಯಕ್ತವಾಗಿದೆ. ಶುಲ್ಕ ಹೆಚ್ಚಿಸಿರುವ ಸರ್ಕಾರದ ಕ್ರಮ ಖಂಡಿಸಿ ರಾಜ್ಯದ ಸುಮಾರು 5000 ಮದ್ಯದಂಗಡಿಗಳ ಮಾಲೀಕರು ಮೇ 21 ರಂದು ಮದ್ಯದಂಗಡಿ ವ್ಯಾಪಾರ, ಡಿಪೊಗಳಿಂದ ಮದ್ಯ ಖರೀದಿ ಬಂದ್ ಮಾಡಲು ನಿರ್ಧರಿಸಿದ್ದಾರೆ. ಮದ್ಯದಂಗಡಿ ಮಾರಾಟ ಸ್ಥಗಿತಕ್ಕೂ ಮುನ್ನ ಅಂದರೆ ಮೇ 20 ರಂದು ಸಾಂಕೇತಿಕ ಪ್ರತಿಭಟನೆ ನಡೆಸಲಿದ್ದಾರೆ. ಮೇ 15 ರಂದು ರಾಜ್ಯ ಸರ್ಕಾರವು ದೇಶಿಯ ಮದ್ಯ (ಐಎಂಎಲ್‌) ಹಾಗೂ ಬಿಯರ್

ನಾಳೆ(ಮೇ.21) ಮದ್ಯದಂಗಡಿ ಬಂದ್ Read More »