ಸಮಗ್ರ ನ್ಯೂಸ್: ರಾಜ್ಯದಲ್ಲಿ ಒಬ್ಬ ನಾಲಾಯಕ್ ಗೃಹಸಚಿವರಿದ್ದು, ಅವರಿಗೆ ಪೊಲೀಸ್ ಇಲಾಖೆಯ ಮೇಲೆ ನಿಯಂತ್ರಣವೇ ಇಲ್ಲ ಎಂದು ಮುಸ್ಲಿಂ ಯುವಜನ ಒಕ್ಕೂಟದ ಅಶ್ರಫ್ ಕಲ್ಲೇಗ ಆರೋಪಿಸಿದ್ದಾರೆ.
ಪುತ್ತೂರಿನಲ್ಲಿ ಮಾತನಾಡಿದ ಅವರು ಬಂಟ್ವಾಳದಲ್ಲಿ ರಹೀಂ ಕೊಲೆ ಪ್ರಕರಣದಲ್ಲಿ ಸರಕಾರ ಮತ್ತು ಪೋಲೀಸ್ ಇಲಾಖೆ ವೈಫಲ್ಯವಿದ್ದು, ರಾಜ್ಯದಲ್ಲಿ ಒಬ್ಬ ನಾಲಾಯಕ್ ಗೃಹಸಚಿವರಿದ್ದಾರೆ ಆದರೆ ಅವರಿಗೆ ಪೋಲೀಸ್ ಇಲಾಖೆಯ ಮೇಲೆ ನಿಯಂತ್ರಣವೇ ಇಲ್ಲ. ಇನ್ನೊಬ್ಬರು ಅತಿಥಿ ಉಸ್ತುವಾರಿ ಸಚಿವರು, ಅವರು ಜಿಲ್ಲೆಗೆ ಅತಿಥಿ ಉಪನ್ಯಾಸಕರ ರೀತಿಯಲ್ಲಿ ಜಿಲ್ಲೆಗೆ ಆಗಮಿಸುತ್ತಾರೆ.
ರೌಡಿಶೀಟರ್ ಸುಹಾಸ್ ಶೆಟ್ಟಿ ಕೊಲೆಯಾದ ಬಳಿಕ ಹಲವು ಕಡೆಗಳಲ್ಲಿ ದ್ವೇಷ ಭಾಷಣವನ್ನು ಮಾಡಲಾಗಿದೆ. ಈ ದ್ವೇಷ ಭಾಷಣವನ್ನು ಮಾಡಿದವರ ಮೇಲೆ ಶಿಸ್ತು ಕ್ರಮ ಮತ್ತು ಬಂಧಿಸುವ ಕಾರ್ಯ ನಡೆದಿಲ್ಲ. ಸ್ಪೀಕರ್ ಯು.ಟಿ.ಖಾದರ್ ಜಿಲ್ಲೆಯಲ್ಲಿ ಎಡ್ಜೆಸ್ಟ್ಮೆಂಟ್ ರಾಜಕಾರಣ ಮಾಡುತ್ತಿದ್ದಾರೆ. ಜಿಲ್ಲೆಯಲ್ಲಿ ಯಾವುದೇ ಘಟನೆ ನಡೆದರೂ ಗಡಿಬಿಡಿ ಆಕಂಡ ಎನ್ನುತ್ತಾರೆ. ಸ್ಪೀಕರ್ ಇದ್ದೂ ಜಿಲ್ಲೆಯಲ್ಲಿ ಕೊಲೆಯಂತಹ ಘಟನೆಗಳು ಹೆಚ್ಚಾಗುತ್ತಿದೆ. ಸರಕಾರ ಈ ಕೋಮುವಾದಿಗಳ ಜೊತೆಗೆ ಸೇರಿಕೊಂಡಿದೆಯೋ ಎನ್ನುವ ಅನುಮಾನ ಮೂಡುತ್ತಿದೆ ಎಂದು ಆರೋಪಿಸಿದರು.
ಸರಕಾರ ಮುಸ್ಲಿಮರಿಗೆ ನೀಡಿದ ಎಲ್ಲಾ ಬಿಟ್ಟಿ ಭಾಗ್ಯ ಹಿಂಪಡೆದು,ಮುಸ್ಲಿಮರನ್ನು ನೆಮ್ಮದಿಯಾಗಿ ಬದುಕಲು ಮಾತ್ರ ಅವಕಾಶ ಮಾಡಿಕೊಡಲಿ ಎಂದರು.