ಸಮಗ್ರ ನ್ಯೂಸ್: ಪ್ರತಿಭಾ ಸೌನ್ಶಿಮಠ್ ಇನಿಶಿಯೇಟಿವ್, ಪಾತ್ ವೇ ಎಂಟರ್‌ಪ್ರೈಸಸ್ ಹಾಗೂ ಮರ್ಸಿ ಬ್ಯೂಟಿ ಅಕಾಡೆಮಿ ಹಾಗೂ ಲೇಡಿಸ್ ಸಲೂನ್ ಸಹಯೋಗದಲ್ಲಿ ಎಡ್ಜ್ 9 ಮಿಸ್ ಹಾಗೂ ಮಿಸೆಸ್ ಇಂಡಿಯಾ ಕರ್ನಾಟಕ ಮಂಗಳೂರು 6ನೇ ಆವೃತ್ತಿಯ ಸ್ಪರ್ಧೆಯ ಗ್ರ್ಯಾಂಡ್ ಫಿನಾಲೆ ಕಾರ್ಯಕ್ರಮ ಇತ್ತೀಚೆಗೆ ಉಳಾಯಿಬೆಟ್ಟು ಪೆರ್ಮಂಕಿಯ ಆಸ್ಕರ್ ಕ್ಲಬ್‌ನಲ್ಲಿ ನಡೆಯಿತು.
ಮಿಸೆಸ್ ವಿಭಾಗದಲ್ಲಿ ತಶ್ಮಾ ಚೇತನ್ ಗೆಲುವನ್ನು ಸಾಧಿಸಿ ಮಿಸೆಸ್ ಇಂಡಿಯಾ ಕರ್ನಾಟಕ ಮಂಗಳೂರು ಕಿರೀಟವನ್ನು ತಮ್ಮದಾಗಿಸಿಕೊಂಡರು. ಐಸಿರಿ ರೈ ಪ್ರಥಮ ರನ್ನರ್ ಅಪ್, ಶಕುಂತಲಾ ನಾಯಕ್ ಹಾಗೂ ಡಾ.ಫ್ಲಾರೆನ್ಸ್ ಅಂಜೆಲಿನ್ ದ್ವಿತೀಯ ರನ್ನರ್ ಅಪ್ ಆಗಿ ಕಿರೀಟವನ್ನು ಮುಡಿಗೇರಿಸಿಕೊಂಡರು.
ಮಿಸೆಸ್ ಕ್ಲಾಸಿಕ್ ವಿಭಾಗದಲ್ಲಿ ಯಶೋದಾ ರಾಜೇಶ್ ವಿಜೇತರಾಗಿದ್ದು, ಸುನೈನಾ ಮೆನನ್ ಪ್ರಥಮ ರನ್ನರ್ ಅಪ್, ಸಹನಾ ಶೆಟ್ಟಿ ದ್ವಿತೀಯ ರನ್ನರ್ ಅಪ್ ಕಿರೀಟ ಪಡೆದುಕೊಂಡರು. ಮಿಸೆಸ್ ಸೂಪರ್ ಕ್ಲಾಸಿಕ್ ವಿಭಾಗದಲ್ಲಿ ಅಮಲಾ ಎಂ. ಕ್ವಾಡ್ರೊಸ್ ವಿಜೇತರಾದರು.
ಪ್ರಥಮ ಬಾರಿಗೆ ನಡೆದ ಮಿಸ್ ಕ್ಯಾಟಗರಿ ಸ್ಪರ್ಧೆಯಲ್ಲಿ ಸಾನ್ವಿ ಮಣಿಪಾಲ ವಿಜೇತರಾಗಿದ್ದು, ಆಶ್ನಾ ಡಿಸೋಜಾ ಪ್ರಥಮ ರನ್ನರ್ ಅಪ್, ಡಿಯೋನಾ ರೇಗೋ ದ್ವಿತೀಯ ರನ್ನರ್ ಅಪ್ ಕಿರೀಟ ತಮ್ಮದಾಗಿಸಿಕೊಂಡರು.
ಮಿಸ್ ಲೇಡಿ ವಿಭಾಗದಲ್ಲಿ ಗಾನಶ್ರೀ ಜಿ. ವಿಜೇತರಾಗಿದ್ದು, ದಿವ್ಯಾ ಶ್ರೀನಿವಾಸ್ ಪ್ರಥಮ ರನ್ನರ್ ಅಪ್, ಶೀತಲ್ ಕುಂದರ್ ದ್ವಿತೀಯ ರನ್ನರ್ ಅಪ್ ಕಿರೀಟ ಪಡೆದುಕೊಂಡಿದ್ದಾರೆ.