ಬಂಟ್ವಾಳ: ಯುವಕರ ಮೇಲೆ ತಲ್ವಾರ್ ದಾಳಿ ಪ್ರಕರಣ| ಓರ್ವ ಸಾವು, ಮತ್ತೋರ್ವ ಗಂಭೀರ

ಸಮಗ್ರ ನ್ಯೂಸ್: ದುಷ್ಕರ್ಮಿಗಳ ತಂಡವೊಂದು ಇಬ್ಬರ‌ ಮೇಲೆ ತಲವಾರು ಮಾಡಿದ ಪರಿಣಾಮ ಓರ್ವ ಮೃತಪಟ್ಟು ಇನ್ನೋರ್ವ ಗಾಯಗೊಂಡಿರುವ ಘಟನೆ ಅಡ್ಡೂರು ಕೊಲ್ತಮಜಲು ಎಂಬಲ್ಲಿ ಮಂಗಳವಾರ ವರದಿಯಾಗಿದೆ.

Ad Widget ... ..

ಘಟನೆಯಲ್ಲಿ ಮೃತಪಟ್ಟವರನ್ನು‌ ಇಮ್ತಿಯಾಝ್ ಎಂದು ಗುರುತಿಸಲಾಗಿದೆ. ಕೊಲ್ತಮಜಲು ಬೆಲ್ಲೂರು ನಿವಾಸಿ ಅಬ್ದುಲ್ ಖಾದರ್ ಎಂಬವರ ಮಗ ಅಬ್ದುಲ್ ರಹಿಮಾನ್ ಗಾಯಗೊಂಡ ಯುವಕ ಎಂದು ತಿಳಿದು ಬಂದಿದೆ.

Ad Widget

ಇಬ್ಬರೂ ಕೊಲ್ತಮಜಲು ಎಂಬಲ್ಲಿ ಪಿಕ್ ಅಪ್ ವಾಹನದಲ್ಲಿ ಮರಳು ಅನ್ ಲೋಡ್ ಮಾಡುತ್ತಿದ್ದ ವೇಳೆ ದುಷ್ಕರ್ಮಿಗಳು ತಲವಾರು ದಾಳಿ ಮಾಡಿದ್ದಾರೆ ಎನ್ನಲಾಗಿದೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

Leave a Comment

Your email address will not be published. Required fields are marked *