ಸಮಗ್ರ ನ್ಯೂಸ್: ದೇಶಾದ್ಯಂತ ಕರ್ನಾಟಕ ಸೇರಿದಂತೆ ಕೆಲ ರಾಜ್ಯಗಳಲ್ಲಿ ಕೋವಿಡ್ ಪಾಸಿಟಿವ್ ಪ್ರಕರಣಗಳ ಸಂಖ್ಯೆಯಲ್ಲಿ ತೀವ್ರ ಏರಿಕೆಯಾಗುತ್ತಿದ್ದು, ಆತಂಕದ ವಾತಾವರಣ ನಿರ್ಮಾಣವಾಗಿದೆ. ಇತ್ತ ನಮ್ಮ ರಾಜ್ಯದಲ್ಲೂ ಈಗಾಗಲೇ ಅದರಲ್ಲೂ ಬೆಂಗಳೂರಿನಲ್ಲಿ ಕೋವಿಡ್ಗೆ ಓರ್ವ ನಿನ್ನೆಯಷ್ಟೇ ಮೃತಪಟ್ಟಿದ್ದು, ಕೊರೊನಾ ಪಾಸಿಟಿವ್ ಪ್ರಕರಣಗಳ ಸಂಖ್ಯೆ 38ಕ್ಕೇರಿಕೆಯಾಗಿವೆ.
ಈ ಕುರಿತು ಮಾತನಾಡಿರುವ ಆರೋಗ್ಯ ಇಲಾಖೆ ಸಚಿವ ದಿನೇಶ್ ಗುಂಡೂರಾವ್ ಅವರು, ರಾಜ್ಯದಲ್ಲಿನ ಪರಿಸ್ಥಿತಿಯನ್ನು ಅವಲೋಕಿಸಿ ಕಠಿಣ ನಿಮಯಗಳು ಜಾರಿ ಹಾಗೂ ಲಾಕ್ಡೌನ್ ಜಾರಿ ಬಗ್ಗೆ ಸೂಕ್ಷ್ಮ ಸುಳಿವನ್ನು ನೀಡಿದ್ದಾರೆ.
ಕೋವಿಡ್ ಪ್ರಕರಣಗಳ ಹೆಚ್ಚಳ ಬಗ್ಗೆ ವಿವರಿಸಿದ ಸಚಿವರು, ಈಗಾಗಲೇ ಕೋವಿಡ್ ಪರೀಕ್ಷೆ ಮಾಡುವಂತೆ ಆರೋಗ್ಯ ಇಲಾಖೆಗೆ ಸೂಚನೆ ನೀಡಲಾಗಿದೆ. ಅಗತ್ಯವಿರುವ ಕಡೆಯಲ್ಲಾ ವಯೋವೃದ್ಧರು, ಮಕ್ಕಳಿಗೆ ಕೊರೊನಾ ಪರೀಕ್ಷೆ ಮಾಡಲು ಹೇಳಿದ್ದೇವೆ ಎಂದಿದ್ದಾರೆ.
ಪ್ರತಿವಾರ ಸಭೆ ಮಾಡಲು ಆರೋಗ್ಯ ಅಧಿಕಾರಿಗಳಿಗೆ ತಿಳಿಸಲಾಗಿದ್ದು, ನಿನ್ನೆ ಓರ್ವ ವೃದ್ಧ ಸೋಂಕಿಗೆ ಮೃತಪಟ್ಟಿದ್ದಾರೆ. ಮೃತ ವೃದ್ಧನಿಗೆ ತೀವ್ರ ಆರೋಗ್ಯ ಸಮಸ್ಯೆ ಇತ್ತು. ಇನ್ನೂ ಸ್ಪಷ್ಟ ವರದಿ ಬರಬೇಕಿದೆ. ವಸ್ತು ಸ್ಥಿತಿ ನೋಡಿಕೊಂಡು ಲಾಕ್ಡೌನ್ ಬಗ್ಗೆ ವಿಚಾರ ಮಾಡಲಾಗುವುದು. ಎಲ್ಲರೂ ಜವಾಬ್ದಾರಿಯಿಂದ ಇರಬೇಕು ಎಂದು ಹೇಳಿದ್ದಾರೆ.
ನಿನ್ನೆ ಒಟ್ಟಾರೆ ಬೆಂಗಳೂರು ನಗರದಲ್ಲಿ 32, ಮೈಸೂರಲ್ಲಿ 2, ಬಳ್ಳಾರಿ, ವಿಜಯನಗರ, ಬೆಂಗಳೂರು ಗ್ರಾಮಾಂತರದಲ್ಲಿ, ದಕ್ಷಿಣ ಕನ್ನಡದಲ್ಲಿ ತಲಾ 1 ಕೋವಿಡ್ ಪ್ರಕರಣಗಳು ವರದಿಯಾಗಿದ್ದವು.