ಸಮಗ್ರ ನ್ಯೂಸ್: ತಾಳಿ ಕಟ್ಟುವ ವೇಳೆ ವಧು ತಲೆ ಅಲ್ಲಾಡಿಸಿ ನನಗೆ ಈ ಮದುವೆ ಬೇಡ ಎಂದ ಘಟನೆ ಹಾಸನದ ಆದಿಚುಂಚನಗಿರಿ ಕಲ್ಯಾಣ ಮಂಟಪದಲ್ಲಿ ನಡೆದಿದೆ. ತಾಳಿ ಕಟ್ಟೋ ಮುಹೂರ್ತಕ್ಕೂ ಮುನ್ನ ಯುವತಿಗೆ ಒಂದು ಫೋನ್ ಕರೆ ಬಂದಿದೆ. ಆಗ ವಧು ತಕ್ಷಣವೇ ನನಗೆ ಈ ಮದುವೆ ಬೇಡ ಎಂದು ವಧು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.
ಹೆತ್ತವರು, ಸಂಬಂಧಿಕರು ಯಾರು ಏನೇ ಹೇಳಿದರು ಕೇಳದ ವಧು ರೂಂಗೆ ಹೋಗಿ ಮದುವೆ ಬೇಡವೇ ಬೇಡ ಎಂದು ಹಠ ಹಿಡಿದಿದ್ದಾರೆ. ತಾಳಿ ಕೈಯಲ್ಲಿ ಹಿಡಿದು ಮಧು ಮಗ ಮಾಡಿದ ಮನವೊಲಿಕೆಗೂ ಆಕೆ ಮನಸ್ಸು ಕರಗಲಿಲ್ಲ. ವಧು ಮದುವೆ ಬೇಡ ಎಂದಾಗ ಕೈಯಲ್ಲಿ ತಾಳಿ ಹಿಡಿದಿದ್ದ ವರ ಯಾಕೆ ಮದುವೆ ಬೇಡ ಎಂದು ಕೇಳಿದ್ದಾನೆ. ಕೊನೆಗೆ ಹಠ ಹಿಡಿದ ಬೆನ್ನಲ್ಲೇ ವರ ಕೂಡ ನನಗೂ ಮದುವೆ ಬೇಡ ಎನ್ನುತ್ತಾ ಕಣ್ಣೀರು ಹಾಕಿದ್ದಾನೆ. ಮಗಳು ಮದುವೆ ಬೇಡ ಎಂದಿದ್ದಕ್ಕೆ ಪೋಷಕರು ಸಹ ಕಣ್ಣೀರಿಟ್ಟಿದ್ದಾರೆ. ಇದರೊಂದಿಗೆ ಧಾರಾಮುಹೂರ್ತದ ಸಮಯದಲ್ಲಿ ಬಂದ ಅದೊಂದು ಫೋನ್ ಕರೆ ಮದುವೆಯನ್ನೇ ಮುರಿದು ಹಾಕಿದೆ.
ಮೂರು ತಿಂಗಳ ಹಿಂದೆ ನಿಶ್ಚಯವಾಗಿ ಇಂದು ಮುಹೂರ್ತ ನಡೆಸೋ ವೇಳೆಯಲ್ಲಿ ಮಧು ಮಗಳು ಮಾಡಿದ ಅವಾಂತರ ಪೋಷಕರಿಗೆ ಆಘಾತ ತಂದರೆ ಮದುವೆಗೆ ಬಂದವರು ಕಂಗೆಟ್ಟು ಹೋಗಿದ್ದಾರೆ. ಗದ್ದಲ ಗಲಾಟೆ ನಡುವೆ ಮದುವೆಯೇ ನಿಂತು ಹೋಗಿದೆ. ಇನ್ನು ಪೊಲೀಸರ ಮಧ್ಯಸ್ಥಿತಿಕೆಯಲ್ಲಿ ರಾಜಿ ಸಂಧಾನ ನಡೆದಿದ್ದು, ಪ್ರೀತಿಸಿದವನಿಗಾಗಿ ಕೊನೆಗಳಿಗೆಯಲ್ಲಿ ಮದುವೆ ಮುರಿದ ಯುವತಿ ವಿರುದ್ಧ ವರನ ಕಡೆಯವರು ಅಸಮಾಧಾನ ಹೊರ ಹಾಕಿದ್ದಾರೆ.
ತಾಳಿ ಕೈಯಲ್ಲೇ ಹಿಡಿದು ಪರಿಪರಿಯಾಗಿ ಕೇಳಿದ ವರ ಏನಾಯ್ತು ಎಂದು ಕೇಳಿದಾಗಲೇ ಬಯಲಾಗಿದ್ದು ಅದೊಂದು ಪ್ರಿತಿಯ ರಹಸ್ಯ, ಸ್ನಾತಕೋತ್ತರ ಪದವಿ ಮುಗಿಸಿರುವ ಯುವತಿಗೆ ಮತ್ಯಾರೋ ಯುವಕನ ಜೊತೆ ಲವ್ ಇತ್ತಂತೆ, ಇದನ್ನ ಮುಚ್ಚಿಟ್ಟಿದ್ದ ಆಕೆ ಮನೆಯವರ ಒತ್ತಾಯಕ್ಕೆ ಮಣಿದು ಶಿಕ್ಷಕನ ಜೊತೆಗೆ ಮದುವೆ ನಿಶ್ಚಯ ಮಾಡಿಕೊಂಡಿದ್ದಾಳೆ, ಆದ್ರೆ ,ಮುಹೂರ್ತದ ಸಮಯದಲ್ಲಿ ಬಂದ ಅದೊಂದು ಕರೆಯಿಂದ ಮದುವೆಯನ್ನ ಮುರಿದುಬಿದ್ದಿದೆ.