ಮಡೆನೂರು ಮನು ವಿರುದ್ದ ಅತ್ಯಾಚಾರ ಆರೋಪ ಪ್ರಕರಣ| ಉಲ್ಟಾ ಹೊಡೆದ ಸಂತ್ರಸ್ತೆ

ಸಮಗ್ರ ನ್ಯೂಸ್: ತನ್ನ ಮೇಲೆ ಮಡೆನೂರು ಮನು ಅತ್ಯಾಚಾರವೆಸಗಿದ್ದಾನೆ, ಗರ್ಭಪಾತ ಮಾಡಿಸಿದ್ದಾನೆ ಎಂದೆಲ್ಲಾ ಪೊಲೀಸ್ ಠಾಣೆ ಮಟ್ಟಿಲೇರಿದ್ದ ಕಿರುತೆರೆ ನಟಿ ಈಗ ಉಲ್ಟಾ ಹೊಡೆದಿದ್ದಾಳೆ. ಇದೀಗ ನಟಿ ಹೊಸ ವಿಡಿಯೋವೊಂದನ್ನು ಬಿಡುಗಡೆ ಮಾಡಿದ್ದಾಳೆ.

Ad Widget . Ad Widget . Ad Widget .

ಮಡೆನೂರು ಮನು ತನ್ನ ಮೇಲೆ ಅತ್ಯಾಚಾರವೆಸಗಿದ್ದಾನೆ, ಬಲವಂತದಿಂದ ತಾಳಿ ಕಟ್ಟಿದ್ದಾನೆ, ಎರಡು ಬಾರಿ ಗರ್ಭಪಾತ ಮಾಡಿಸಿದ್ದಾನೆ ಎಂದು ನಟಿ ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಳು. ಅದರಂತೆ ಪೊಲೀಸರು ಮಡೆನೂರು ಮನುವನ್ನು ವಶಕ್ಕೆ ಪಡೆದಿದ್ದರು. ಇಂದು ಮಡೆನೂರು ಅಭಿನಯದ ಚೊಚ್ಚಲ ಸಿನಿಮಾ ಕುಲದಲ್ಲಿ ಕೀಳ್ಯಾವುದೋ ಸಿನಿಮಾ ಬಿಡುಗಡೆಯಾಗಿದೆ. ಇದರ ಬೆನ್ನಲ್ಲೇ ಮನು ಅರೆಸ್ಟ್ ಆಗಿರುವುದು ಚಿತ್ರತಂಡಕ್ಕೂ ತೊಂದರೆ ಮಾಡಿದೆ.

Ad Widget .

ಇದರ ಬೆನ್ನಲ್ಲೇ ಇದೀಗ ಸಂತ್ರಸ್ತ ನಟಿ ವಿಡಿಯೋವೊಂದು ಬಿಡುಗಡೆ ಮಾಡಿದ್ದು, ‘ನನ್ನ ಮನು ನಡುವೆ ಒಂದಷ್ಟು ಗೊಂದಲಗಳಿತ್ತು. ಹಾಗಾಗಿ ಜಗಳಗಳೆಲ್ಲಾ ಆಗಿ ಪ್ರೊಡ್ಯೂಸರ್ ಗೆ ಮೆಸೇಜ್ ಮಾಡಿದ್ದೆ. ಮೆಸೇಜ್ ಮಾಡಿದ್ದು ತಪ್ಪು. ನನ್ನ ಅವನ ನಡುವೆ ಏನಾಗಿದ್ಯೋ ಅದು ನನ್ನ ಅವನ ಮಧ್ಯೆಯೇ ಇರಬೇಕಿತ್ತು. ಸಿನಿಮಾಗೆ ತೊಂದರೆ ಕೊಡುವ ಉದ್ದೇಶದಿಂದ ಮೆಸೇಜ್ ಮಾಡಿರಲಿಲ್ಲ. ಹಾಗಿದ್ದರೂ ಸಿನಿಮಾಗೆ ಇದರಿಂದ ತೊಂದರೆಯಾಗುತ್ತದೆ ಎಂದು ನನಗೆ ಗೊತ್ತಾಯ್ತು. ಹಾಗಾಗಿ ಸಿನಿಮಾ ಪ್ರೊಡ್ಯೂಸರ್ ಎಲ್ಲಾ ಸೇರಿ ಒಬ್ಬ ಲಾಯರ್ ನ ಕರೆಸಿ ಮಾತನಾಡಿಸಿದ್ರು. ನಮ್ಮ ತಪ್ಪನ್ನು ಅರ್ಥ ಮಾಡಿಸಿದ್ರು. ಹೀಗಾಗಿ ನಾನು ಸತ್ರೂ ಇದಕ್ಕೆ ಯಾರೂ ಕಾರಣ ಅಲ್ಲ. ಇದು ನನ್ನ ಸ್ವಂತ ನಿರ್ಧಾರ. ಮನು, ಸಿನಿಮಾ ತಂಡ ಆಗಲೀ ನನ್ನ ಸ್ನೇಹಿತರೂ ಕಾರಣ ಅಲ್ಲ. ಹಾಗೆಯೇ ಕುಲದಲ್ಲಿ ಕೀಳ್ಯಾವುದೋ ಸಿನಿಮಾಗೆ ಒಳ್ಳೆಯದಾಗಲಿ’ ಎಂದಿದ್ದಾಳೆ.

Leave a Comment

Your email address will not be published. Required fields are marked *