ಸುಳ್ಯ ಜೇನು ವ್ಯವಸಾಯಗಾರರ ನೂತನ ಕಟ್ಟಡ, ಆಧುನಿಕ ಸಂಸ್ಕರಣಾ ಘಟಕ, ಜೇನು ಚಾಕಲೇಟ್ ಇದರ ಲೋಕಾರ್ಪಣೆ| ಜಿಲ್ಲೆಯ ಉತ್ಪನ್ನಗಳು ವಿಶ್ವವ್ಯಾಪಿಯಾಗಲಿ – ಶೋಭಾ ಕರಂದ್ಲಾಜೆ

ಸುಳ್ಯ: ‘ಸುಳ್ಯದ ಪರಿಸರದಲ್ಲಿ ಭಾರಿ ದೊಡ್ಡ ಉದ್ಯಮ ಇಲ್ಲ, ಸುಮಾರು 50 ಕೋಟಿಗೂ ಹೆಚ್ಚಿನ ಜನರಿಗೆ ನಮ್ಮ ಕೃಷಿ ಕ್ಷೇತ್ರದಲ್ಲಿ ಉದ್ಯೋಗ ಸಿಗುತ್ತಿದೆ. ಮುಂದೆ ಕೃಷ್ಟಿ ನಂತರ ಭವಿಷ್ಯದ ಉದ್ಯಮವೆಂದರೆ ಅದು ಸಣ್ಣ ಮತ್ತು ಸೂಕ್ಷ್ಮ ಕೈಗಾರಿಕೆಗಳು. ಉತ್ತರ ಭಾಗದಲ್ಲಿ ವಿವಿಧ ರೀತಿಯ ಜೇನನ್ನು ಉತ್ಪಾದನೆ ಮಾಡುತ್ತಾರೆ ಹಾಗೂ ಅದು ವಿದೇಶಗಳಿಗೆ ರಫ್ತು ಆಗುತ್ತವೆ ಹಾಗೆಯೇ ಇಲ್ಲಿ ಉತ್ಪಾದನೆ ಆಗುವಂತಹ ಜೇನಿನ ಚಾಕಲೇಟ್ ವಿದೇಶಗಳಿಗೆ ರಫ್ತು ಆಗಬೇಕು. ಹಾಗೆಯೇ ದ.ಕ ಕನ್ನಡದಲ್ಲಿ ಒಂದು ಗುಣಮಟ್ಟದ ಫುಡ್ ಟೆಸ್ಟಿಂಗ್ ಲ್ಯಾಬ್ ಆಗಬೇಕು ಎಂದು ಭಾರತ ಸರಕಾರದ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಅಭಿಪ್ರಾಯಪಟ್ಟರು.

Ad Widget . Ad Widget . Ad Widget .

ಅವರು ಮೇ.23ರಂದು‌ ಸುಳ್ಯದಲ್ಲಿ ನಡೆದ ದ.ಕ ಜೇನು ವ್ಯವಾಸಾಯಗಾರರ ಸಹಕಾರಿ ಸಂಘ ಪುತ್ತೂರು ಇದರ ಆಶ್ರಯದಲ್ಲಿ ಸುಳ್ಯದ ಶಾಸ್ತ್ರಿ ವೃತ್ತದ ಬಳಿ ನೂತನ ಕಟ್ಟಡ ಹಾಗೂ ಆಧುನಿಕ ಸಂಸ್ಕರಣಾ ಘಟಕ ಮತ್ತು ಜೇನು ಚಾಕಲೇಟ್ ಇದರ ಲೋಕಾರ್ಪಣೆ ಸಮಾರಂಭದಲ್ಲಿ ಮಾತನಾಡಿದರು.

Ad Widget .

ಕಾರ್ಯಕ್ರಮವನ್ನು ಸಚಿವೆ ಶೋಭಾ ಕರಂದ್ಲಾಜೆ ಹಾಗೂ ದ.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಮಂಗಳೂರು ಇದರ ಅಧ್ಯಕ್ಷರಾದ ಡಾ. ಎಂ ಎನ್ ರಾಜೇಂದ್ರ ಕುಮಾರ್ ದೀಪಬೆಳಗಿಸುವುದರ ಮೂಲಕ ನೆರವೇರಿಸಿದರು.

ಡಾ. ಎಂ ಎನ್ ರಾಜೇಂದ್ರ ಕುಮಾರ್ ಮಾತನಾಡಿ, ಸುಳ್ಯದ ಪರಿಸರದಲ್ಲಿ ಜೇನು ತುಪ್ಪದ ಉದ್ಯಮ ಮತ್ತು ಮಾರಾಟ ಅಗುವುದರಿಂದ ಇದಕ್ಕೆ ವಿಶೇಷ ಸ್ಥಾನಮಾನವನ್ನು ನೀಡಬೇಕು, ಜೇನುತುಪ್ಪದ ಚಾಕಲೇಟು ಸೇವಿಸುವುದು ಆರೋಗ್ಯದ ದೃಷ್ಟಿಯಿಂದ ತುಂಬಾ ಒಳ್ಳೆಯದು, ಈ ಕೆಲಸವನ್ನು ಈ ಒಂದು ಉದ್ಯಮ ಪ್ರಾರಂಭಿಸುತ್ತಿದೆ. ಕೃಷಿಕರಿಗೆ ಸಹಾಯ ಆಗುವಂತೆ ಜೇನುತುಪ್ಪದ ಬೆಳೆಸಾಲ ಹಾಗೂ ವಿಮೆಮಾಡಿ ಇದಕ್ಕೆ ಸಂಪೂರ್ಣ ಬೆಂಬಲವನ್ನು ನಾವು ಕೊಡುತ್ತೇವೆ ಎಂದರು.

ವೇದಿಕೆಯಲ್ಲಿ ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ, ಡಿಸಿಸಿ ಬ್ಯಾಂಕಿನ ನಿರ್ದೇಶಕ ಶಶಿಧರ್ ಕುಮಾರ್ , ಸುಳ್ಯ ನಗರ ಪಂಚಾಯತ್ ಅಧ್ಯಕ್ಷರು ಶಶಿಕಲಾ ನೀರಬಿದಿರೆ , ಸುಳ್ಯ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರು ಮುಸ್ತಾಫ, ದ.ಕ ಜೇನು ವ್ಯವಾಸಾಯಗಾರರ ಸಹಕಾರಿ ಸಂಘದ ಅಧ್ಯಕ್ಷರು ಚಂದ್ರ ಕೊಲ್ಚಾರ್, ಹಾಗೂ ಪ್ರಮುಖರು ಉಪಸ್ಥಿತರಿದ್ದರು.

Leave a Comment

Your email address will not be published. Required fields are marked *