ಅತ್ಯಾಚಾರ ಆರೋಪದಲ್ಲಿ ಕಾಮಿಡಿ ಕಿಲಾಡಿಗಳು ಖ್ಯಾತಿಯ ಮಡೆನೂರು ಮನು ಅರೆಸ್ಟ್

ಸಮಗ್ರ ನ್ಯೂಸ್: ಅತ್ಯಾಚಾರ ಆರೋಪದಡಿ ಕಾಮಿಡಿ ಕಿಲಾಡಿಗಳು ಖ್ಯಾತಿಯ ನಟ ಮಡೆನೂರು ಮನು ಅವರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ʼಕಾಮಿಡಿ ಕಿಲಾಡಿಗಳು’ ಖ್ಯಾತಿಯ ಕಲಾವಿದ, ಕಿರುತೆರೆ ನಟ ಮಡೆನೂರು ಮನು ವಿರುದ್ಧ ಯುವತಿಯೊಬ್ಬಳು ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ಅತ್ಯಾಚಾರ ಆರೋಪವನ್ನು ಮಾಡಿ ಎಫ್‌ಐಆರ್‌ ದಾಖಲಿಸಿದ್ದರು.

Ad Widget . Ad Widget . Ad Widget .

ಆರೋಪ ಕೇಳಿ ಬರುತ್ತಿದ್ದಂತೆ ನಟ ಮೊಬೈಲ್‌ ಸ್ವಿಚ್ಡ್‌ ಆಫ್‌ ಮಾಡಿಕೊಂಡು ತಲೆಮರೆಸಿಕೊಂಡಿದ್ದ. ಇದೀಗ ಪೊಲೀಸರು ಮನು ಅವರನ್ನು ವಶಕ್ಕೆ ಪಡೆದುಕೊಂಡಿದ್ದಾರೆ ಎಂದು ತಿಳಿದು ಬಂದಿದೆ. ಹಾಸನದ ಶಾಂತಿಗ್ರಾಮದಲ್ಲಿ ಬೆಂಗಳೂರಿನ ಪೊಲೀಸರು ನಟನನ್ನು ವಶಕ್ಕೆ ಪಡೆದಿದ್ದಾರೆ ಎಂದು ತಿಳಿದು ಬಂದಿದೆ.

Ad Widget .

ದೂರಿನಲ್ಲಿ ಏನಿದೆ?:
2018ರಲ್ಲಿ ಮನು ಹಾಗೂ ಸಂತ್ರಸ್ತೆ ನಡುವೆ ಪರಿಚಯವಾಗಿತ್ತು. ಯುವತಿಗೆ ಬಾಡಿಗೆ ಮನೆಯನ್ನು ಮನುವೇ ಹುಡುಕಿಕೊಟ್ಟಿದ್ದ. ಮನುಗೆ ಈಗಾಗಲೇ ಮದುವೆಯಾಗಿದ್ದು, ಒಂದು ಹೆಣ್ಣು ಮಗು ಕೂಡ ಇದೆ. 2022ರ ನವೆಂಬರ್ 29ರಂದು ಶಿವಮೊಗ್ಗದ ಶಿಕಾರಿಪುರದ ಕಾರ್ಯಕ್ರಮಕ್ಕೆ ತೆರಳಿದ್ದ ವೇಳೆ ಮನು ಯುವತಿಯನ್ನು ಕಾರ್ಯಕ್ರಮದ ಬಳಿಕ ಸಂಭಾವನೆ ನೀಡುವ ನೆಪದಲ್ಲಿ ರೂಮ್‌ಗೆ ಕರೆದು ಅತ್ಯಾಚಾರ ಮಾಡಿದ್ದ.

ಅತ್ಯಾಚಾರವಾದ ಬಳಿಕ ಮನು 2022ರ ಡಿಸೆಂಬರ್‌ 3 ರಂದು ನನ್ನ ವಿರೋಧದ ನಡುವೆಯೂ ಬಲವಂತವಾಗಿ ತಾಳಿ ಕಟ್ಟಿದ್ದಾನೆ. ಆದಾದ ಬಳಿಕ ಹಲವು ಬಾರಿ ದೈಹಿಕವಾಗಿ ಬಳಸಿಕೊಂಡಿದ್ದಾನೆ. ಅತ್ಯಾಚಾರದ ಬಳಿಕ ನಾನು ಪ್ರೆಗ್ನೆಂಟ್ ಆಗಿದ್ದು, ಮನು ಗರ್ಭಪಾತ ಆಗುವ ಮಾತ್ರೆ ನೀಡಿದ್ದರು. ಇದಾದ ಬಳಿಕವೂ ಸಂತ್ರಸ್ತೆ ಮತ್ತೊಮ್ಮೆ ಗರ್ಭಿಣಿ ಆಗಿದ್ದೆ. ಆ ಬಳಿಕ ಎರಡನೇ ಬಾರಿಯೂ ಮನು ಗರ್ಭಪಾತ ಮಾಡಿಸಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಬಾಡಿಗೆ ಮನೆಯಲ್ಲಿ ಮನು ನನ್ನನ್ನು ಮೇಲೆ ಹಲವು ಬಾರಿ ದೈಹಿಕವಾಗಿ ಬಳಿಸಿಕೊಂಡಿದ್ದಾನೆ. ಇದೆಲ್ಲವನ್ನು ಆತ ತನ್ನ ಫೋನಿನಲ್ಲಿ ಸೆರೆ ಹಿಡಿದುಕೊಂಡಿದ್ದಾನೆ. ಒಂದು ವೇಳೆ ವಿಚಾರ ಯಾರಿಗಾದ್ರೂ ಹೇಳಿದರೆ ಕೊ*ಲೆ ಮಾಡೋದಾಗಿ ಬೆದರಿಕೆ ಹಾಕಿದ್ದಾನೆ. ನನ್ನಿಂದ ಲಕ್ಷಾಂತರ ರೂಪಾಯಿ ರೂಪಾಯಿ ಹಣ ಕೂಡ ಪಡೆದಿದ್ದಾನೆ. ಈತನ ವಿರುದ್ದ ಕಾನೂನು ಕ್ರಮ ಜರುಗಿಸಿ ಅಂತ ದೂರಿನಲ್ಲಿ ತಿಳಿಸಲಾಗಿದೆ.

Leave a Comment

Your email address will not be published. Required fields are marked *