ಸಮಗ್ರ ನ್ಯೂಸ್: ರೇಣುಕಾಸ್ವಾಮಿ ಕೊಲೆ ಪ್ರಕರಣ ಸಂಬಂಧ ಇಂದು 57ನೇ ಸಿಸಿಹೆಚ್ ಕೋರ್ಟ್ನಲ್ಲಿ ನಡೆದ ವಿಚಾರಣೆಗೆ ನಟ ದರ್ಶನ್ ಹಾಗೂ ಪವಿತ್ರಾ ಗೌಡ ಸೇರಿದಂತೆ 16 ಜನ ಆರೋಪಿಗಳು ಕೋರ್ಟ್ಗೆ ಹಾಜರಾದರು. ಈ ವೇಳೆ ಕೋರ್ಟ್ ವಿಚಾರಣೆ ಮುಗಿಯುವವರೆಗೆ ಗಪ್ ಚುಪ್ ಆಗಿದ್ದ ದರ್ಶನ್ ಮತ್ತು ಪವಿತ್ರಾ ಗೌಡ ಅವರು, ಕೊನೆಗೆ ವಿಚಾರಣೆ ಮುಗಿಸಿ ಹೊರಗೆ ಹೋಗುವಾಗ ನಟಿ ಪವಿತ್ರಾ ಕೈ ಹಿಡಿದು ಕೇಳಿದ್ದಕ್ಕೆ ತನ್ನ ಹೊಸ ನಂಬರ್ ಕೊಟ್ಟಿದ್ದಾರೆ.
ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ 17 ಜನರನ್ನು ಪೊಲೀಸರು ಬಂಧಿಸಿದ್ದರು. ಈಗಾಗಲೇ ಎಲ್ಲಾ ಆರೋಪಿಗಳಿಗೆ ಜಾಮೀನು ಸಿಕ್ಕಿದೆ. ಜಾಮೀನು ನೀಡುವಾಗ ಕೋರ್ಟ್ ಕೆಲವು ಷರತ್ತುಗಳನ್ನು ವಿಧಿಸಿತ್ತು. ಅವುಗಳ ಪೈಕಿ ಕೋರ್ಟ್ಗೆ ಹಾಜರಿ ಹಾಕಬೇಕು ಎಂಬುದು ಕೂಡ ಪ್ರಮುಖ ಷರತ್ತಾಗಿತ್ತು. ಅದರಂತೆ ಪವನ್ ಹೊರತುಪಡಿಸಿ ಮತ್ತೆಲ್ಲಾ ಆರೋಪಿಗಳು ಕೋರ್ಟ್ಗೆ ಹಾಜರಿ ಹಾಕಿದ್ದಾರೆ.
ಕೋರ್ಟ್ನಲ್ಲಿ ದರ್ಶನ್ ಹಾಗೂ ಪವಿತ್ರಾ ಅಕ್ಕ-ಪಕ್ಕ ಇದ್ದರು. ಕೋರ್ಟ್ನಿಂದ ಹೊರಹೋಗುವಾಗ ಜನ ಜಂಗುಳಿ ಇತ್ತು. ಈ ಕಾರಣಕ್ಕೆ ದರ್ಶನ್ ಹಾಗೂ ಪವಿತ್ರಾ ಕೈ ಕೈ ಹಿಡಿದು ಬಂದ ಬಗ್ಗೆ ವರದಿ ಆಗಿದೆ. ಇನ್ನು, ಪವಿತ್ರಾ ಹಠ ಮಾಡಿದ್ದಕ್ಕೆ ದರ್ಶನ್ ಅವರು ತಮ್ಮ ಮೊಬೈಲ್ ಸಂಖ್ಯೆಯನ್ನೂ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ. ಜುಲೈ 10ಕ್ಕೆ ವಿಚಾರಣೆ ಮುಂದೂಡಲಾಗಿದೆ. ಅಂದು ಎಲ್ಲ ಆರೋಪಿಗಳು ಹಾಜರಿ ಹಾಕಲು ಕೋರ್ಟ್ ಸೂಚಿಸಿದೆ.







