ಗೋಲ್ಡ್ ಸ್ಮಗ್ಲಿಂಗ್ ಪ್ರಕರಣ| ನಟಿ ರನ್ಯಾ ರಾವ್ ಗೆ ಜಾಮೀನು

ಸಮಗ್ರ ನ್ಯೂಸ್: ಗೋಲ್ಡ್ ಸ್ಮಗ್ಲಿಂಗ್ ಪ್ರಕರಣದಲ್ಲಿ ಅರೆಸ್ಟ್ ಆಗಿದ್ದ ನಟಿ ರನ್ಯಾರಾವ್‌ಗೆ ಆರ್ಥಿಕ ವ್ಯವಹಾರಗಳ ವಿಶೇಷ ನ್ಯಾಯಾಲಯ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ.

Ad Widget .

ದುಬೈನಿಂದ 12 ಕೋಟಿ ಮೌಲ್ಯದ 14 ಕೆ.ಜಿ ಚಿನ್ನ ಕಳ್ಳ ಸಾಗಣೆ ಆರೋಪದಲ್ಲಿ ಕಂದಾಯ ಗುಪ್ತಚರ ನಿರ್ದೇಶನಾಲಯದ(ಡಿಆರ್‌ಐ) ಅಧಿಕಾರಿಗಳಿಂದ ಅರಸ್ಟ್ ಆಗಿದ್ದ ನಟಿ ರನ್ಯಾರಾವ್‌ ಸೇರಿ ಮೂವರು ಆರೋಪಿಗಳಿಗೆ ಆರ್ಥಿಕ ವ್ಯವಹಾರಗಳ ವಿಶೇಷ ನ್ಯಾಯಾಲಯ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ.

Ad Widget . Ad Widget .

ಮಾರ್ಚ್ 3ರಂದು ಬೆಂಗಳೂರಿಗೆ ಆಗಮಿಸಿದ್ದ ರನ್ಯಾರಾವ್​ರನ್ನು ಕಂದಾಯ ಗುಪ್ತಚರ ಅಧಿಕಾರಿಗಳು (ಡಿಆರ್‌ಐ) ವಶಕ್ಕೆ ಪಡೆದು ತಪಾಸಣೆ ನಡೆಸಿದ್ದರು. ರನ್ಯಾ ತನ್ನ ದೇಹದ ಭಾಗಗಳಲ್ಲಿ ಅಂಟಿಸಿಕೊಂಡಿದ್ದ 12.56 ಕೋಟಿ ಮೌಲ್ಯದ 14.21 ಕೆ.ಜಿ ಚಿನ್ನದ ಬಿಸ್ಕತ್‌ಗಳು ಪತ್ತೆಯಾಗಿದ್ದವು. ಹೀಗಾಗಿ, ರನ್ಯಾಳನ್ನು ಡಿಆರ್‌ಐ ಅಧಿಕಾರಿಗಳು ಬಂಧಿಸಿದ್ದರು. ಆರೋಪಿ ರನ್ಯಾ ಕಳೆದ ಎರಡು ತಿಂಗಳಿಂದ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾರೆ.

Leave a Comment

Your email address will not be published. Required fields are marked *