ಸಮಗ್ರ ನ್ಯೂಸ್: ಪಾಕಿಸ್ತಾನ ರೇಂಜರ್‌ಗಳಿಂದ ಏಪ್ರಿಲ್ 23 ರಂದು ಬಂಧಿಸಲ್ಪಟ್ಟ ಬಿಎಸ್‌ಎಫ್ ಸೈನಿಕನನ್ನು ಭಾರತಕ್ಕೆ ಹಸ್ತಾಂತರಿಸಲಾಗಿದೆ.
ಕಳೆದ ತಿಂಗಳು ಅಂತರರಾಷ್ಟ್ರೀಯ ಗಡಿಯನ್ನು ಆಕಸ್ಮಿಕವಾಗಿ ದಾಟಿದ ನಂತರ ಬಿಎಸ್ಎಫ್ ಯೋಧ ಪೂರ್ಣಮ್ ಕುಮಾರ್ ಶಾ ಅವರನ್ನು ಪಾಕಿಸ್ತಾನ ರೇಂಜರ್ ಗಳು ಬಂಧಿಸಿದ್ದರು. ಬುಧವಾರ ಅಟ್ಟಾರಿಯ ಚೆಕ್‌ಪೋಸ್ಟ್ ನಲ್ಲಿ ಪಾಕಿಸ್ತಾನ ಸೇನೆಯು ಶಾ ಅವರನ್ನು ಭಾರತೀಯ ಅಧಿಕಾರಿಗಳಿಗೆ ಹಸ್ತಾಂತರಿಸಿದರು.
ಪೂರ್ಣಂ ಬಂಧನದ ಬೆನ್ನಲ್ಲೇ ಭಾರತವೂ ಸಹ ಪಾಕಿಸ್ತಾನದ ಯೋಧನೊಬ್ಬನನ್ನು ಜೀವಂತವಾಗಿ ಸೆರೆಹಿಡಿದಿತ್ತು. ಕೂಡಲೇ ಎಚ್ಚೆತ್ತುಕೊಂಡ ಪಾಕಿಸ್ತಾನವು ಈಗ ತನ್ನ ಯೋಧನ ಬಿಡುಗಡೆಗಾಗಿ ಭಾರತದ ಯೋಧನನ್ನು ಬಿಡುಗಡೆ ಮಾಡಲು ಒಪ್ಪಿಕೊಂಡಿದೆ.
ಪಾಕಿಸ್ತಾನ – ಭಾರತ ನಡುವಿನ ಜೀನಿವಾ ಒಪ್ಪಂದಂತೆ ಪರಸ್ಪರ ದೇಶಗಳು ಯೋಧರು ಸೆರೆಸಿಕ್ಕರೆ ಚಿತ್ರಹಿಂಸೆ ನೀಡದೇ ವಾಪಸ್ ಮರಳಿಸಬೇಕಿದೆ.