ಸಮಗ್ರ ನ್ಯೂಸ್: ಭಾರತ ಮತ್ತು ಪಾಕಿಸ್ತಾನದ ನಡುವೆ ಮಾತುಕತೆ ನಡೆದರೆ, ಅದು ಭಯೋತ್ಪಾದನೆ ಮತ್ತು ಪಾಕ್ ಆಕ್ರಮಿತ ಕಾಶ್ಮೀರ (ಪಿಒಕೆ) ಬಗ್ಗೆ ಮಾತ್ರ…” ಎಂದು ರಾಷ್ಟ್ರವನ್ನುದ್ದೇಶಿಸಿ ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಭಾಷಣದಲ್ಲಿ ಹೇಳಿದರು.
ಪಾಕಿಸ್ತಾನದ ಅಣು ಬಾಂಬ್ ಬೆದರಿಕೆ ಬ್ಲಾಕ್ ಮೇಲ್ ಗೆ ಹೆದರೋದಿಲ್ಲ. ನಮ್ಮ ಸಹೋದರಿಯರ ಸಿಂಧೂರ ತೆಗೆದ ಭಯೋತ್ಪಾದಕರಿಗೆ ಪರಿಣಾಮದ ಎಚ್ಚರಿಕೆ ಸಂದೇಶ ರವಾನಿಸಿದ್ದೇವೆ. ಆಪರೇಷನ್ ಸಿಂಧೂರ್ ಪ್ರತಿಯೊಬ್ಬ ಭಾರತೀಯರ ಭಾವನೆಯ ಸಂಕೇತ ಎಂಬುದಾಗಿ ಖಡಕ್ ಸಂದೇಶ ನೀಡಿದರು.
ಪ್ರಧಾನಿ ನರೇಂದ್ರ ಮೋದಿಯವರು ಆಪರೇಷನ್ ಸಿಂಧೂರ್ ಬಗ್ಗೆ ದೇಶವನ್ನುದ್ದೇಶಿಸಿ ಮಾತನಾಡಿದರು. ಪಾಕಿಸ್ತಾನದೊಂದಿಗೆ ಮಾತುಕತೆ ಏನಿದ್ದರೂ ಪಿಒಕೆ ಹಾಗೂ ಭಯೋತ್ಪಾದನೆ ನಿಯಂತ್ರಣದ ಬಗ್ಗೆ ಮಾತ್ರವೇ ಆಗಿದೆ. ಅದರ ಹೊರತಾಗಿ ಬೇರೆ ಏನೂ ಇಲ್ಲ. ಯಾವತ್ತೂ ರಕ್ತ ಮತ್ತು ನೀರು ಒಟ್ಟಿಗೆ ಹರಿಯೋದಕ್ಕೆ ಸಾಧ್ಯವಿಲ್ಲ ಎಂಬುದಾಗಿ ಪಾಕಿಸ್ತಾನಕ್ಕೆ ಖಡಕ್ ಸಂದೇಶ ನೀಡಿದರು.
ಪ್ರಧಾನಿ ಮೋದಿ ಭಾಷಣದ ಸ್ವಲ್ಪ ಸಮಯದ ನಂತರ ಪಾಕ್ ಡ್ರೋನ್‌ಗಳು ಹಿಂತಿರುಗಿದ್ದರಿಂದ ಜೆ-ಕೆ ಸಾಂಬಾದಲ್ಲಿ ಕೆಂಪು ಗೆರೆಗಳ ರೀತಿಯಲ್ಲಿ ಕಂಡು ಬಂದಿದ್ದಾವೆ. ಭಾರತದ ಗಡಿಯಲ್ಲಿದ್ದಂತ ಪಾಕಿಸ್ತಾನದ ಡ್ರೋನ್ ಗಳು ಸಾಲುಗಟ್ಟಿ ಪಾಕ್ ಗೆ ವಾಪಾಸ್ ಹೋಗಿರೋ ವೀಡಿಯೋ ವೈರಲ್ ಕೂಡ ಆಗಿದೆ.