‘ಕಾಮಿಡಿ ಕಿಲಾಡಿಗಳು’ ಖ್ಯಾತಿಯ ರಾಕೇಶ್ ಪೂಜಾರಿ ಇನ್ನಿಲ್ಲ

ಸಮಗ್ರ ನ್ಯೂಸ್: ಝೀಕನ್ನಡ ವಾಹಿನಿಯ ಜನಪ್ರಿಯ ಕಾಮಿಡಿ ಕಾರ್ಯಕ್ರಮ ‘ಕಾಮಿಡಿ ಕಿಲಾಡಿ’ ಸೀಸನ್-3ರ ವಿಜೇತ, ಪ್ರತಿಭಾನ್ವಿತ ಕಲಾವಿದ ರಾಕೇಶ್ ಪೂಜಾರಿ ಅವರು ನಿಧನರಾಗಿದ್ದಾರೆ. ರಾಕೇಶ್ ಅವರ ಆಕಸ್ಮಿಕ ಸಾವು ಅವರ ಅಭಿಮಾನಿಗಳಿಗೆ ಮಾತ್ರವಲ್ಲ, ಕಿರುತೆರೆಯ ಸಹ ಕಲಾವಿದರಿಗೂ ಆಘಾತವನ್ನುಂಟು ಮಾಡಿದೆ.

Ad Widget .

ರಾಕೇಶ್ ಪೂಜಾರಿ ಅವರು ಕಾಮಿಡಿ ಕಿಲಾಡಿ ಕಾರ್ಯಕ್ರಮದ ಮೂಲಕ ಕರ್ನಾಟಕದ ಮನೆಮಾತಾಗಿದ್ದರು. ಅವರ ಹಾಸ್ಯ, ಸಹಜತೆ, ಮತ್ತು ಜನರನ್ನು ನಗಿಸುವ ವಿಶಿಷ್ಟ ಶೈಲಿಯಿಂದಾಗಿ ಎಲ್ಲರ ಮನಗೆದ್ದಿದ್ದರು. ಕಾರ್ಯಕ್ರಮದ ಸೀಸನ್-3ರಲ್ಲಿ ತಮ್ಮ ಅದ್ಭುತ ಪ್ರದರ್ಶನದಿಂದ ವಿಜೇತರಾಗಿ ಹೊರಹೊಮ್ಮಿದ್ದ ರಾಕೇಶ್, ಕಿರುತೆರೆಯ ಜೊತೆಗೆ ತುಳು ರಂಗಭೂಮಿಯಲ್ಲೂ ತಮ್ಮದೇ ಛಾಪು ಮೂಡಿಸಿದ್ದರು.

Ad Widget . Ad Widget .

ರಾಕೇಶ್ ಅವರ ಆಪ್ತರ ಪ್ರಕಾರ, ಅವರು ಆರೋಗ್ಯವಾಗಿದ್ದರು ಮತ್ತು ಯಾವುದೇ ಗಂಭೀರ ಅನಾರೋಗ್ಯದಿಂದ ಬಳಲುತ್ತಿರಲಿಲ್ಲ. ದಿನಾಂಕ 11 ಮೇ 2025ರಂದು ತಮ್ಮ ಊರಿನಲ್ಲಿ ನಡೆದ ಮದುವೆಯ ಮೆಹಂದಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ರಾಕೇಶ್, ಎಂದಿನಂತೆ ತಮ್ಮ ಉತ್ಸಾಹದಿಂದ ಡ್ಯಾನ್ಸ್ ಮಾಡಿ, ಎಲ್ಲರ ಜೊತೆ ಸಂತೋಷದ ಕ್ಷಣಗಳನ್ನು ಕಳೆದಿದ್ದರು. ಆದರೆ, ಕಾರ್ಯಕ್ರಮದ ಬಳಿಕ ರಾಕೇಶ್ ಅವರಿಗೆ ಆಕಸ್ಮಿಕವಾಗಿ ರಕ್ತದೊತ್ತಡ ಕಡಿಮೆಯಾಗಿದೆ ಎಂದು ತಿಳಿದುಬಂದಿದೆ. ಕೂಡಲೇ ಅವರನ್ನು ಸ್ಥಳೀಯ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ಚಿಕಿತ್ಸೆಗೆ ಸ್ಪಂದಿಸದೆ ಅವರು ಕೊನೆಯುಸಿರೆಳೆದರು ಎಂದು ವೈದ್ಯರು ದೃಢಪಡಿಸಿದ್ದಾರೆ.

ರಾಕೇಶ್ ಪೂಜಾರಿ ಸಾವಿನ ವಿಚಾರವನ್ನು ನಟ ಹಾಗೂ ಅವರ ಆಪ್ತ ಶಿವರಾಜ್ ಕೆಆರ್​ ಪೇಟೆ ಅವರು ಖಚಿತಪಡಿಸಿದ್ದಾರೆ. ಸಾವಿಗೆ ಅವರ ಆಪ್ತ ಬಳಗ ಶಾಕ್ ಆಗಿದೆ. ಅವರ ಸಾವಿಗೆ ಎಲ್ಲರೂ ಕಂಬನಿ ಮಿಡಿಯುತ್ತಿದ್ದಾರೆ. ಹೃದಯಾಘಾತದಿಂದ ಅವರು ನಿಧನ ಹೊಂದಿದ್ದು ಮತ್ತಷ್ಟು ಶಾಕಿಂಗ್ ಎನಿಸಿದೆ.

Leave a Comment

Your email address will not be published. Required fields are marked *