ಸಮಗ್ರ ನ್ಯೂಸ್: ಪಾಕಿಸ್ತಾನ ಇನ್ನೆಂದು ಭಾರತದತ್ತ ಕಣ್ಣೆಟ್ಟಿ ನೋಡದಂತ ಮಾಡಲು ಭಾರತ ಸಜ್ಜಾಗಿದೆ. ಮೂರು ಸೇನೆಗಳು ಏಕಕಾಲಕ್ಕೆ ಪಾಕಿಸ್ತಾನ ಮೇಲೆ ಮುಗಿಬಿದ್ದಿದೆ. ಪಾಕಿಸ್ತಾನ ದಾಳಿ ವಿಫಲಗೊಳಿರುವ ಸೇನೆ ಪ್ರತಿದಾಳಿ ನಡೆಸುತ್ತಿದೆ. 1971ರಲ್ಲಿ ಪಾಕಿಸ್ತಾನ ಮೇಲಿನ ಯುದ್ಧದ ಬಳಿಕ ಇದೇ ಮೊದಲ ಬಾರಿಗೆ ಕರಾಚಿ ಬಂದರು ಮೇಲೆ ಭಾರತೀಯ ನೌಕಾ ಪಡೆ ದಾಳಿ ಮಾಡಿದೆ.
ಐಎನ್‌ಎಸ್ ವಿಕ್ರಾಂತ್ ಇದೀಗ ಕರಾಚಿ ಬಂದರು ಮೇಲೆ ದಾಳಿ ಮಾಡಿದೆ. ಈ ದಾಳಿಯಲ್ಲಿ ಕರಾಚಿ ಬಂದಿನ ಬಹುತೇಕ ಭಾಗ ಧ್ವಂಸಗೊಂಡಿದೆ. ಭಾರತದ ಮೇಲೆ ಪಾಕಿಸ್ತಾನ ನಡೆಸಿದ 8 ಮಿಸೈಲ್ ದಾಳಿಗೆ ಪ್ರತಿಯಾಗಿ ಇದೀಗ ಭಾರತ ಎಲ್ಲಾ ದಿಕ್ಕಿನಿಂದ ಪಾಕಿಸ್ತಾನದ ಮೇಲೆ ಮುಗಿಬಿದ್ದಿದೆ.
ಐಎನ್‌ಎಸ್ ವಿಕ್ರಾಂತ್ 1971ರಲ್ಲಿ ಪಾಕಿಸ್ತಾನ ವಿರುದ್ದದ ಯುದ್ಧದಲ್ಲಿ ಕರಾಚಿ ಬಂದರಿನ ಮೇಲೆ ದಾಳಿ ಮಾಡಿತ್ತು. ಈ ವೇಳೆ ಕರಾಚಿ ಬಂದರು ಸಂಪೂರ್ಣ ನಾಶವಾಗಿತ್ತು. 1971ರ ಬಳಿಕ ಇದೇ ಮೊದಲ ಬಾರಿಗೆ ವಿಕ್ರಾಂತ್ ಕರಾಚಿ ಬಂದರಿನ ಮೇಲೆ ದಾಳಿ ಮಾಡಿದೆ. ಭಾರತದ ದಾಳಿಯಿಂದ ಕರಾಚಿ ಬಂದರು ಹೊತ್ತಿ ಉರಿದಿದೆ. ಕರಾಚಿ ಬಂದರು ಪಾಕಿಸ್ತಾನಕ್ಕೆ ಇಂಧನ ಪೂರೈಕೆ ಮಾಡುವ ಪ್ರಮುಖ ಬಂದರಾಗಿದೆ. ಇದರ ಮೇಲೆ ದಾಳಿ ಮಾಡಿರುವ ಕಾರಣ ಪಾಕಿಸ್ತಾನ ತೀವ್ರ ಆತಂಕಗೊಂಡಿದೆ. ಕರಾಚಿ ದಾಳಿಯಿಂದ ಪಾಕಿಸ್ತಾನದಲ್ಲಿ ಲಾಕ್‌ಡೌನ್ ಪರಿಸ್ಥಿತಿ ಎದುರಾಗಿದೆ.