ಮಂಗಳೂರು: ಸೇನೆಯನ್ನು ಅವಮಾನಿಸಿ ವಿದ್ಯಾರ್ಥಿನಿ ಪೋಸ್ಟ್| ಸೋಶಿಯಲ್ ಮೀಡಿಯಾದಲ್ಲಿ ಆಪರೇಶನ್ ಸಿಂಧೂರಕ್ಕೆ ದಿಕ್ಕಾರ

ಸಮಗ್ರ ನ್ಯೂಸ್: ವಿದ್ಯಾರ್ಥಿನಿಯೊಬ್ಬಳು ಭಾರತೀಯ ಸೇನೆ ಪಾಕಿಸ್ತಾನದ ಮೇಲೆ ನಡೆಸುತ್ತಿರುವಂತ ಆಪರೇಷನ್ ಸಿಂಧೂರ್ ಕುರಿತಂತೆ ವಿವಾದಾತ್ಮಕ ಪೋಸ್ಟ್ ಹಾಕಿದ್ದಾರೆ. ಧಿಕ್ಕಾರ ಆಪರೇಷನ್ ಸಿಂಧೂರ್ ಎಂಬುದಾಗಿ ದೇಶ ವಿರೋಧಿ ಪೋಸ್ಟ್ ಮಾಡಿದ್ದು, ವ್ಯಾಪಕ ಆಕ್ರೋಶಕ್ಕೂ ಕಾರಣವಾಗಿದೆ.

Ad Widget ... ..

ಮಂಗಳೂರಿನ ಪ್ರತಿಷ್ಠಿತ ಕಾಲೇಜೊಂದರಲ್ಲಿ ಸ್ನಾತಕೋತ್ತರ ಪದವಿ ವ್ಯಾಸಂಗ ಮಾಡುತ್ತಿರುವಂತ ರೇಷ್ಮಾ ಎಂಬ ವಿದ್ಯಾರ್ಥಿನಿಯೇ ಹೀಗೊಂದು ದೇಶ ವಿರೋಧಿ ಪೋಸ್ಟ್ ನ್ನು ತಮ್ಮ ಇನ್ ಸ್ಟಾಗ್ರಾಂ ಖಾತೆಯಲ್ಲಿ ಹಾಕಿರೋದು.

Ad Widget

ನನ್ನ ಮನೆಯ ದೀಪಕ್ಕೆ ಅವನ ಮನೆಯ ದೀಪಕ್ಕೆ ಅವನ ಮನೆಯ ಹಣತೆಯ ತಂದೆ. ಅಲ್ಲಿ ನಂದಿ ಹೋಯಿತು ಬೆಳಕು. ಅವನ ಮನೆಯ ಬೆಳಕಿಗೆ ನನ್ನೊಳಗಿನ ದೀಪ ಬೆಳಕಿನ ವಿಜೃಂಭಣೆಗಾಗಿ ಹೋರಾಟ. ಜಯಸಿದ್ದು ಕತ್ತಲು, ಎಲ್ಲೆಲ್ಲೂ ಕತ್ತಲು ಎಂಬುದಾಗಿ ಹೇಳಿದ್ದಾರೆ. ಕೊನೆಗೆ #dikkaraoperationsindurua ಎಂಬುದಾಗಿ ಹ್ಯಾಷ್ ಟ್ಯಾಗ್ ಹಾಕಿದ್ದಾರೆ.

ಇದೀಗ ವಿದ್ಯಾರ್ಥಿನಿ ರೇಷ್ಮಾ ಪೋಸ್ಟ್ ಗೆ ಭಾರೀ ಆಕ್ರೋಶ ವ್ಯಕ್ತವಾಗಿದೆ. ಅಲ್ಲದೇ ದೇಶ ವಿರೋಧಿ ಪೋಸ್ಟ್ ಹಾಕಿದಂತ ರೇಷ್ಮಾ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆಯೂ ಒತ್ತಾಯ ಕೇಳಿ ಬಂದಿದೆ. ಈ ವ್ಯಾಪಕ ಟೀಕೆ, ಆಕ್ರೋಶದ ಬೆನ್ನಲ್ಲೇ ರೇಷ್ಮಾ ಎನ್ ಬಾರಿಗಾ ಅವರು ತಮ್ಮ ಇನ್ ಸ್ಟಾಗ್ರಾಂ ಪೋಸ್ಟ್ ಡಿಲೀಟ್ ಮಾಡಿದ್ದಾರೆ.

Leave a Comment

Your email address will not be published. Required fields are marked *