ಸಮಗ್ರ ನ್ಯೂಸ್: ಭಾರತೀಯ ಏರ್ ಸ್ಟ್ರೈಕ್ ಗೆ ಪಾಪಿ ರಾಷ್ಟ್ರ ಪಾಕ್ ವಿಲ ವಿಲ ಅಂತ ಒದ್ದಾಡಿದ್ದು, ಉಗ್ರಪೋಷಿತ ಪಾಕಿಸ್ತಾನದ ಮಾನ ಜಗತ್ತಿನ ರಾಷ್ಟ್ರಗಳ ಮುಂದೆ ಹರಾಜಾಗಿದೆ.
ಪಾಕಿಸ್ತಾನ ಸುದ್ದಿ ವಾಹಿನಿಯ ನಿರೂಪಕಿ ಭಾರತದ ಅಕ್ರಮಣಕಾರಿ ಆಪರೇಷನ್ ಸಿಂಧೂರ್ ನೋಡಿ ಲೈವ್‌ನಲ್ಲೇ ಗಳಗಳನೇ ಕಣ್ಣೀರಿಟ್ಟಿದ್ದಾಳೆ.
ಪೆಹಲ್ಗಮ್ ಪಾಕ್ ನ್ಯೂಸ್ ನಿರೂಪಕರು ಭಾರತ ಪಾಕಿಸ್ತಾನದ ವಿರುದ್ಧ ಸುಳ್ಳು ಆರೋಪ ಮಾಡುತ್ತಿದೆ ಎಂದಿದ್ದರು. ಆದರೆ ಇದೀಗ ಸ್ಟುಡಿಯೋದಲ್ಲಿ ಕುಳಿತುಕೊಂಡಿದ್ದ ನ್ಯೂಸ್ ಆoಕರ್ ಆಪರೇಷನ್ ಸಿಂಧೂರ್ ಭೀಕರತೆ ಕಂಡು ಕಣ್ಣೀರು ಹಾಕಿದ್ದಾರೆ.
ಆಪರೇಷನ್ ಸಿಂಧೂರ್ ಸುದ್ದಿ ಓದುವಾಗಲೇ ನಿರೂಪಕಿ ಭಾವುಕಳಾಗಿದ್ದಾರೆ. ನಮ್ಮ ದೇಶದ ಮೇಲೆ ಭಾರತ ಪ್ರಹಾರ ಮಾಡ್ತಿದೆ. ನಮ್ಮವರು ಸಾಯುತ್ತಿದ್ದಾರೆ ಎಂದು ಬೇಜಾರಾಗಿದ್ದಾಳೆ. ಸದ್ಯ ನಿರೂಪಕಿ ಅಳುತ್ತಿರೋ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ.