ಸಮಗ್ರ ನ್ಯೂಸ್: ಭಾರತೀಯ ಸೇನೆಯು ಆಪರೇಷನ್ ಸಿಂಧೂರ ಕಾರ್ಯಾಚರಣೆಯನ್ನು ನಡೆಸಿದ ಮೇಲೆ ಗೂಗಲ್‌ನಲ್ಲಿ ಪಾಕಿಸ್ತಾನಿಗಳು ಏನು ಹುಡುಕಿದ್ದಾರೆ ಎನ್ನುವುದು ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗುತ್ತಿದೆ.
ಭಾರತದ ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದಿದ್ದ ಉಗ್ರರ ದಾಳಿಗೆ ಸಂಬಂಧಿಸಿದಂತೆ ಭಾರತವು ಮೊದಲಿನಿಂದಲೂ ಎಚ್ಚರಿಕೆಯ ಸಂದೇಶವನ್ನು ನೀಡುತ್ತಲ್ಲೇ ಬಂದಿದೆ.
ಭಾರತವು ಪಾಕ್‌ನ ಮೇಲೆ ಪ್ರತೀಕಾರವನ್ನು ತೆಗದುಕೊಳ್ಳುತ್ತಿದ್ದಂತೆಯೇ ಪಾಕಿಸ್ತಾನಿಗಳು ಗೂಗಲ್‌ನಲ್ಲಿ ಭಾರತದ ಆ ಒಂದು ಪದವನ್ನು ಸಿಕ್ಕಾಪಟ್ಟೆ ಹುಡುಕಾಡಿದ್ದಾರೆ. ದೇಶದಲ್ಲಿ ಏನಾಗುತ್ತಿದೆ ಹಾಗೂ ಭಾರತವು ಏನು ಮಾಡಿದೆ ಎನ್ನುವುದನ್ನು ಪಾಕಿಸ್ತಾನಿ ಜನ ಗೂಗಲ್‌ನಲ್ಲಿ ಸರ್ಚ್ ಮಾಡಿದ್ದಾರೆ. ಇದೇ ಸಂದರ್ಭದಲ್ಲಿ ಪಾಕಿಸ್ತಾನಿಗಳು ಸಿಂಧೂರ ಎಂದರೇನು ಅಂತ ಹುಡುಕಾಡಿದ್ದಾರೆ.
ಭಾರತವು ಆಪರೇಷನ್ ಸಿಂಧೂರ ಎನ್ನುವ ಕ್ಷಿಪಣಿ ದಾಳಿಯನ್ನು ನಡೆಸಿತ್ತು. ಇದರ ಅರ್ಥ ಕುಂಕುಮ ಎಂದಾಗುತ್ತದೆ. ಭಾರತೀಯ ಮಹಿಳೆಯ ಸಿಂಧೂರವನ್ನು ತೆಗೆದವರಿಗೆ ಅದೇ ಹೆಸರಿನ ಪ್ರತ್ಯುತ್ತರ ನೀಡಲಾಗಿದೆ. ಪಾಕಿಸ್ತಾನಿಯರು ಗೂಗಲ್‌ನಲ್ಲಿ ಭಾರತದ ಕ್ಷಿಪಣಿ ದಾಳಿಗೆ ಸಂಬಂಧಿಸಿದಂತೆ ವಿವಿಧ ವಿಷಯಗಳನ್ನು ಸರ್ಚ್ ಮಾಡಿದ್ದಾರೆ.
ಇದರಲ್ಲಿ ಪ್ರಮುಖವಾಗಿ ಆಪರೇಷನ್ ಸಿಂಧೂರ್, ಇಂಡಿಯಾ ಆಪರೇಷನ್ ಸಿಂಧೂರ್, ಸಿಂಧೂರ್ ಅಟ್ಯಾಕ್, ಭಾರತದ ಕ್ಷಿಪಣಿ ದಾಳಿ ಡೀಟೆಲ್ಸ್, ಆಪರೇಷನ್ ಸಿಂಧೂರ್ ಎಂದರೇನು? ,ಬಿಳಿಧ್ವಜ, ಪಾಕಿಸ್ತಾನದ ಮೇಲೆ ಭಾರತದ ದಾಳಿ, ವಾಯುದಾಳಿ, ಏರ್‌ಸ್ಟ್ರೇಕ್ ಹಾಗೂ ಭಾರತೀಯ ಸೇನೆ ಎನ್ನುವುದು ಸೇರಿದಂತೆ ಹಲವು ವಿಷಯಗಳನ್ನು ಗೂಗಲ್‌ನಲ್ಲಿ ಹುಡುಕಿರುವುದು ಭಾರೀ ಟ್ರೆಂಡ್ ಆಗಿದೆ.