ಸಮಗ್ರ ನ್ಯೂಸ್: ಮೇ ತಿಂಗಳ ಎರಡನೇ ವಾರ ಶುರುವಾಗಲಿದೆ. ಈ ವಾರ ಹೇಗಿರಲಿದೆ ಎಂದು ತಿಳಿದುಕೊಳ್ಳುವ ಕುತೂಹಲ ಪ್ರತಿಯೊಬ್ಬರಿಗೂ ಇರುತ್ತದೆ. ಹಾಗಾದರೆ ಮುಂಬರುವ ವಾರ ದ್ವಾದಶಿ ರಾಶಿಗಳ ಆರ್ಥಿಕ, ಪ್ರೇಮ, ಕೌಟುಂಬಿಕ, ಸಾಮಾಜಿಕ, ಆರೋಗ್ಯ, ವೃತ್ತಿ ಜೀವನ ಹೇಗಿರಲಿದೆ ಎಂದು ಈಗ ತಿಳಿಯೋಣ.
ಮೇಷ ರಾಶಿ:
ಮೇ ತಿಂಗಳ ಎರಡನೇ ವಾರದಲ್ಲಿ ನಿಮಗೆ ಅಶುಭ ಫಲ. ರಾಹುವು ದ್ವಾದಶ ಸ್ಥಾನದಲ್ಲಿ ಇದ್ದು ಸಂಬಂಧ ನಾಶ, ಆರ್ಥಿಕ ನಾಶ, ಉದ್ಯೋಗ ನಾಶ, ಆರೋಗ್ಯ ನಾಶ ಎಲ್ಲವೂ ಆಗುವ ಭೀತಿ. ಆರ್ಥಿಕವಾದ ತೊಂದರೆಯಲ್ಲಿ ಇರುವಾಗ ಇನ್ನಷ್ಟು ಬರೆ ಬೀಳಬಹುದು. ಎಲ್ಲಿಗಾದರೂ ದೂರ ಹೋಗಲು ಮನಸ್ಸು ಮಾಡುವಿರಿ. ತಾಯಿಯ ಕಡೆಯಿಂದ ನಿಮಗೆ ಸಹಾಯ ಸಿಗಬಹುದು. ಧಾರ್ಮಿಕ ಕಾರ್ಯದಲ್ಲಿ ನೀವಿಂದು ತೊಡಗಿಕೊಳ್ಳಬಹುದು. ನಿಮಗೆ ಬರಬೇಕಾದ ಆಸ್ತಿಯ ಬಗ್ಗೆ ಮಾತು ನಡೆಯುವುದು. ನೀವು ಎಣಿಸಿದಂತೆ ಆಯಿತು ಎಂಬ ಖುಷಿ ಇರಲಿದೆ.
ವೃಷಭ ರಾಶಿ:
ಮೇ ತಿಂಗಳ ಈ ವಾರದಲ್ಲಿ ಶುಭ. ಸಂಪತ್ತಿನ ಹರಿವು ಅಧಿಕವಾಗುವುದು. ಹಳೆಯ ಹೂಡಿಕೆಯಿಂದ ಹಣಕಾಸು ಸಿಗುವುದು. ನಿಮಗೆ ಹಣ ಬಾಕಿ ಇರುವ ಕೆಲಸಗಳನ್ನು ಮಾಡಿ ಮುಗಿಸುವಿರಿ. ಆರ್ಥಿಕ ನಿವರ್ಹಣೆ ಮಾಡುವ ಜವಾಬ್ದಾರಿ ಸಿಗಬಹುದು. ಓದಿನಲ್ಲಿ ಆಸಕ್ತಿಯು ಕಡಿಮೆಯಾದೀತು. ಹಾಳಾದ ವಸ್ತುವಿನ ರಿಪೈರಿಗೆ ಹಣವನ್ನು ವ್ಯಯಿಸಬಹುದು. ಅಪರೂಪದ ಸ್ನೇಹಿತನ ಜೊತೆ ಹರಟೆ ಹೊಡೆಯಬಹುದು. ತಂದೆಯ ಆರೋಗ್ಯವು ಹದ ತಪ್ಪಬಹುದು. ಹಿತಶತ್ರುಗಳ ಭೀತಿಯು ಇರಲಿದೆ. ಕಾನೂನಿನ ಸಮರದಲ್ಲಿ ಜಯದ ನಿರೀಕ್ಷೆಯಲ್ಲಿ ಇರುವಿರಿ.
ಮಿಥುನ ರಾಶಿ:
ರಾಶಿ ಚಕ್ರದ ಮೂರನೇ ರಾಶಿಯವರಿಗೆ ಈ ವಾರ ಶುಭ. ರಾಹುವು ದಶಮದಲ್ಲಿ ಇದ್ದು ಅಧಿಕ ಶ್ರಮದಿಂದ ಲಾಭವಾಗಲಿದೆ. ಉನ್ನತ ಸ್ಥಾನವನ್ನು ಪ್ರವೇಶಿಸಬಹುದು. ನೀವು ಇಷ್ಟಪಡುವ ಜನರು ನಿಮಗೆ ಸಹಾಯ ಮಾಡುವರು. ಸಾಲವನ್ನು ಮಾಡಲು ಹಿಂಜರಿದರೂ ಅನಿವಾರ್ಯವಾಗಿ ಮಾಡಬೇಕಾಗಬಹುದು. ಬೇಕಾದ ವಸ್ತುಗಳ ಖರೀದಿಯನ್ನು ನೀವು ಮಾಡಲಿದ್ದೀರಿ. ಮಕ್ಕಳು ನಿಮ್ಮಿಂದ ಪ್ರೀತಿಯನ್ನು ಬಯಸಿಯಾರು. ಅವರು ಕೇಳಿದ ವಸ್ತುಗಳನ್ನು ಇಲ್ಲ ಎನ್ನದೇ ಕೊಡಿಸಿ. ಆಯುಧಗಳಿಂದ ಅಥವಾ ಯಂತ್ರಗಳಿಂದ ದೇಹಕ್ಕೆ ನೋವಾದೀತು.
ಕರ್ಕಾಟಕ ರಾಶಿ:
ಈ ವಾರ ನಿಮಗೆ ಮುಟ್ಟಿದ್ದೆಲ್ಲ ಹಾನಿ. ಸುಖ ಸಿಗುವ ವಸ್ತು ಅಥವಾ ವ್ಯಕ್ತಿಗಳನ್ನು ಕಳೆದುಕೊಳ್ಳುವಿರಿ. ತಂದೆಯಿಂದ ಬರುವ ಆಸ್ತಿಯ ನಷ್ಟವಾಗಬಹುದು. ಉದ್ಯಮದ ಒಪ್ಪಂದವೂ ಮುರಿದುಬೀಳಬಹುದು. ಸಾಮಾಜಿಕ ಕಾರ್ಯಗಳಲ್ಲಿ ತೊಡಗಿದ್ದರೆ ನಿಮಗೆ ಹಿನ್ನಡೆಯಾಗಬಹುದು. ವಿದ್ಯಾರ್ಥಿಗಳು ಸಂತೋಷದಿಂದ ಈ ದಿನವನ್ನು ಕಳೆಯುವರು. ನಿಮಗೆ ಯಾರಾದರೂ ಕೆಟ್ಟವರು ಎಂದು ಅನಿಸಿದರೆ ಅವರ ಸಹವಾಸದಿಂದ ದೂರವಿರಿ. ಇಲ್ಲವಾದರೆ ಅಪತ್ತು ತಂದುಕೊಳ್ಳಬಹುದು. ನಿಮ್ಮ ಕೆಲಸಗಳಲ್ಲಿ ನೀವು ನಿಷ್ಠೆಯಿಂದ ತೊಡಗಿಕೊಳ್ಳಿ. ಅತಿಯಾದ ಆಯಾಸವೂ ಆದೀತು. ತಂದೆಯ ಆರೋಗ್ಯವೂ ದೃಢವಾಗುವುದು. ಆಕಸ್ಮಿಕವಾದ ಅಶುಭವಾರ್ತೆ ಬರಬಹುದು.
ಸಿಂಹ ರಾಶಿ:
ಈ ವಾರ ನೀವು ಬಹಳ ಜಾಗರೂಕತೆಯಿಂದ ಪ್ರಯಾಣ, ಓಡಾಟ ಆಹಾರ ಸ್ವೀಕಾರವನ್ನು ಮಾಡಬೇಕು. ಮಿತಿಮೀರಿದರೆ ಮತ್ಯುವಿಗೆ ಆಹ್ವಾನ ಕೊಟ್ಟಂತೆ. ರಾಹುವುದು ಅಷ್ಟಮದಲ್ಲಿ ಇದ್ದು ನಿಮಗೆ ಮರಣವನ್ನೂ ಅಥವಾ ಮರಣ ಭಯವನ್ನೂ ಕೊಡುವನು. ಕಂಡಿದ್ದನ್ನು ಕಂಡಂತೆ ಹೇಳುವವರಾದರೂ ತಾಳ್ಮೆ ಇಟ್ಟುಕೊಳ್ಳುವು ಒಳ್ಳೆಯದು. ಕಂಡಿದ್ದು ಮಾತ್ರ ಸತ್ಯವೆನ್ನಲು ಬಾರದು. ಉದ್ಯೋಗದ ನಿಮಿತ್ತ ದೂರ ಇದ್ದವರಿಗೆ ತೊಂದರೆಗಳು ಬರಬಹುದು. ನಿಮ್ಮ ತಿಳಿವಳಿಕೆಯ ಹಂತವು ಗೊತ್ತಾದೀತು. ನಿಮ್ಮನ್ನು ಗುಂಪಿನಿಂದ ಹೊರಗಿಡುವ ಯೋಚನೆಯನ್ನು ಮಾಡಿಯಾರು. ಪಿತೃಗಳ ಪ್ರೀತಿಗೆ ಸುವಸ್ತುಗಳನ್ನು ದಾನ ಮಾಡಿ.
ಕನ್ಯಾ ರಾಶಿ:
ರಾಶಿ ಚಕ್ರದ ಆರನೇ ರಾಶಿಯವರಿಗೆ ಈ ವಾರ ಅಶುಭ. ರಾಹುವು ಸಪ್ತಮದಲ್ಲಿ ಇದ್ದು ಸಂಗಾತಿಯ ಜೊತೆ ಕಲಹವಾಗಲಿದೆ. ಪರಸ್ಪರ ಘರ್ಷಣೆಯಾಗಿ ನ್ಯಾಯಾಲಯಕ್ಕೂ ಹೋಗಬಹುದು. ಉದ್ಯಮದಲ್ಲಿ ನಕಾರತ್ಮಕ ಆಲೋಚನೆಗಳೇ ಹೆಚ್ಚಾಗಲಿವೆ. ನಿಮಗೆ ಅನ್ನಿಸಿದ್ದನ್ನು ಮಾಡುವುದಾದರೂ ಹಿರಿಯರ ಒಪ್ಪಿಗೆ ಪಡೆಯಿರಿ. ಕೃಷಿಗೆ ಸಂಬಂಧಪಟ್ಟ ಚಟುವಟಿಯಲ್ಲಿ ಭಾಗವಹಿಸುವಿರಿ. ದಿನಚರಿಯಲ್ಲಿ ಬದಲಾವಣೆಯನ್ನು ಬಯಸುವಿರಿ. ಭವಿಷ್ಯದ ಕುರಿತು ನಿಮಗಿರುವ ಕಲ್ಪನೆಯನ್ನು ಸಂಗಾತಿಯ ಜೊತೆ ಹಂಚಿಕೊಳ್ಳುವಿರಿ. ನಿಮ್ಮವರ ಮೇಲೆ ಅನುಮಾನ ಬೇಡ. ನಂಬಿಕೆಯಿಂದಲೇ ಮಾತನಾಡಿ.
ತುಲಾ ರಾಶಿ:
ಈ ತಿಂಗಳಲ್ಲಿ ನಿಮಗೆ ಶುಭ. ರಾಹುವು ಷಷ್ಠದಲ್ಲಿ ಇದ್ದು ಶತ್ರುಗಳಿಂದ ಗೆಲವಿನ ಸುಖ ನೀಡುವನು. ರೋಗ ನಾಶವಾಗಿ ನೆಮ್ಮದಿ ನಿಮ್ಮದಾಗಲಿದೆ. ಧಾರ್ಮಿಕ ಕಾರ್ಯಗಳನ್ನು ಮಾಡಲು ಮನಸ್ಸಾಗಲಿದೆ. ಅಪರಿಚಿತ ಕರೆಗೆ ನೀವು ಸ್ಪಂದಿಸಬೇಕಾಗಿಲ್ಲ. ನಿಮ್ಮ ಇಷ್ಟದವರನ್ನು ನೀವು ಭೇಟಿಯಾಗಲಿದ್ದೀರಿ. ಅಶಿಸ್ತಿನ ವಿಚಾರಕ್ಕೆ ಕೋಪಗೊಳ್ಳುವಿರಿ. ಸ್ವಂತ ಉದ್ಯಮವನ್ನು ನಡೆಸುತ್ತಿದ್ದರೆ ಸರ್ಕಾರದಿಂದ ಒತ್ತಡವು ಬರಬಹುದು. ವೈದ್ಯರನ್ನು ಭೇಟಿ ಮಾಡಿ ನಿಮಗೆ ಆಗುತ್ತಿರುವ ನಿಮ್ಮ ಮೇಲೆ ತಪ್ಪು ತಿಳಿವಳಿಕೆಯು ಬರಬಹುದು. ಆಪ್ತರ ಜೊತೆ ದೂರದ ಊರಿಗೆ ಪ್ರಯಾಣ.
ವೃಶ್ಚಿಕ ರಾಶಿ:
ರಾಶಿ ಚಕ್ರದ ಎಂಟನೇ ರಾಶಿಯವರಿಗೆ ಈ ವಾರ ಅಶುಭ. ರಾಹುವು ನಿಮ್ಮ ರಾಶಿಯಿಂದ ಪಂಚಮದಲ್ಲಿ ಇದ್ದು ಮಕ್ಕಳಿಂದ ಅಸಂತೋಷ, ಧನಹಾನಿ ಮಾಡಿಸುವನು. ಕೊಟ್ಟ ಹಣವು ಮರಳಿ ಸಿಗದೇ ಪಡೆಯಲೂ ಆಗದೇ ದುಃಖಿಸುವಿರಿ. ಎಲ್ಲ ಕೆಲಸಗಳನ್ನೂ ನೀವು ಒಬ್ಬರೇ ಮಾಡಬೇಕು ಎನ್ನುವ ನಿರ್ಧಾರವನ್ನು ಮಾಡಿಕೊಂಡು ಕೆಲಸಗಳು ಅಪೂರ್ಣವಾಗಲಿದೆ. ಉದ್ಯೋಗದಲ್ಲಿ ನಿಮ್ಮ ಸಮೂಹದ ಜೊತೆ ಕಲಹ ಮಾಡಿಕೊಳ್ಳುವಿರಿ. ವಾಹನ ಚಲಿಸುವಾಗ ಎಚ್ಚರಿಕೆ ಇರಲಿ. ಅಪಘಾತವಾಗುವ ಸಾಧ್ಯತೆ ಇದೆ. ಕಲೆಗಳನ್ನು ಅಭ್ಯಾಸ ಮಾಡುತ್ತಿದ್ದರೆ ನಿಮಗೆ ಅದು ಸಾಕು ಎನಿಸಬಹುದು. ಒಂದೇ ರೀತೀಯ ಕೆಲಸದಿಂದ ಬೇಸರವಾಗಿ ಸ್ವಲ್ಪ ವಿರಾಮವನ್ನು ತೆಗೆದುಕೊಂಡು ಸುತ್ತಾಟ ಮಾಡುವಿರಿ.
ಧನು ರಾಶಿ:
ಮೇ ತಿಂಗಳ ಎರಡನೇ ವಾರದಲ್ಲಿ ನಿಮಗೆ ಅಶುಭ. ರಾಹುವು ಚತುರ್ಥದಲ್ಲಿ ಇದ್ದು ನಿಮಗೆ ದುಃಖ ಕೊಡುವನು. ವಿದೇಶದಲ್ಲಿ ಇರುವವರಿಗೆ ಒತ್ತಡ, ನೆಮ್ಮದಿಯ ಕೊರತೆ. ಕುಟುಂಬದಿಂದ ಬೆಂಬಲ ಸಿಗದು. ತಾಯಿಯ ಅಸೌಖ್ಯದಿಂದ ಓಡಾಟ. ಸಮಯವನ್ನು ನಿರೀಕ್ಷಿಸಿ. ಗೃಹನಿರ್ಮಾಣವನ್ನು ಅರ್ಧಕ್ಕೆ ನಿಲ್ಲಿಸಬೇಕಾಗುವುದು. ಧಾರ್ಮಿಕ ಆಚರಣೆಯಲ್ಲಿ ಶ್ರದ್ಧೆ ಇರಲಿದೆ. ನೆಮ್ಮದಿಯನ್ನು ಪಡೆಯಲು ದೇವಾಲಯಕ್ಕೆ ಹೋಗಿ ಕುಳಿತುಕೊಳ್ಳಿ. ಮನಸ್ಸಿಗೆ ಸಮಾಧಾನವಾದೀತು. ವಿವಾಹ ನಿಶ್ಚಯವಾಗಿದ್ದು ಕಾರಣಾಂತರಗಳಿಂದ ರದ್ದಾಗಬಹುದು. ಪಿತ್ರಾರ್ಜಿತ ಆಸ್ತಿಯನ್ನು ಪಡೆಯಲು ಯಾರಾದರೂ ಕುಮ್ಮಕ್ಕು ಕೊಡಬಹುದು.
ಮಕರ ರಾಶಿ:
ಈ ರಾಶಿಯವರಿಗೆ ಶುಭ. ರಾಹು ತೃತೀಯದಲ್ಲಿ ಇರುವ ಕಾರಣ ಸಹೋದರಿಂದ ನಿಮಗೆ ಅನುಕೂಲ. ಮಿತ್ರರು ನಿಮ್ಮ ಜೊತೆಗಿದ್ದು ಧೈರ್ಯ ಕೊಡುವರು. ಕಲಹವು ಸಣ್ಣದೇ ಆಗಿರಬಹುದು ಆ ಸಮಯಕ್ಕೆ ಬಿರುಕು ಬರುವಷ್ಟು ಸಾಕು. ಮಾತಿನ ಮೇಲೆ ಎಚ್ಚರವಿರಲಿ. ಯಾರಾದರೂ ನಿಮ್ಮ ಬಳಿ ಇರುವ ವಸ್ತುವನ್ನು ಕೇಳಬಂದರೆ ಇಲ್ಲ ಎನಬೇಡಿ. ಇರುವುದನ್ನು ಕೊಟ್ಟು ಕಳುಹಿಸಿ. ಮಹಿಳೆಯರು ತಮ್ಮದೇ ಆದ ಉದ್ಯೋಗವನ್ನು ನಡೆಸಲು ಚಿಂತಿಸಬಹುದು. ದೂರದ ಸಂಬಂಧಿಗಳ ಮನೆಯಲ್ಲಿ ವಾಸಮಾಡುವಿರಿ. ಬೆನ್ನು ನೋವು ಉಂಟಾಗಬಹುದು. ಸೂಕ್ತ ಕ್ರಮಗಳನ್ನು ಮಾಡಿಕೊಳ್ಳಿ.
ಕುಂಭ ರಾಶಿ:
ಈ ರಾಶಿಯವರಿಗೆ ಎರಡನೇ ವಾರದಲ್ಲಿ ಅಶುಭ. ವಿತ್ತನಾಶದ ಲಕ್ಷಣವಿದೆ. ಬೇಡ ಕೆಲಸಗಳಿಗೆ ನೀವಾಗಿಯೇ ಖರ್ಚು ಮಾಡುವಿರಿ. ಯಾವುದರಿಂದಲಾದರೂ ಲಾಭವಿದೆ ಎಂದು ಹೂಡಿಕೆ ಮಾಡಿದರೆ ನಷ್ಟವಾಗಲಿದೆ. ಮೋಜಿಗಾಗಿ ಧನ ನಷ್ಟವಾಗುವುದು. ಅಧಿಕಾರಿವರ್ಗದಿಂದ ನಿಮ್ಮ ಮೇಲೆ ಒತ್ತಡ ಬರಬಹುದು. ಮಾತಿನಿಂದ ಸಿಗುವ ಹಣವೂ ಸಿಗದು. ನಿಮ್ಮ ಜನರು ಕಡೆಗಣಿಸುವ ಜನರೆದು ನೀವು ಎದ್ದು ನಿಲ್ಲಬೇಕು ಎನ್ನುವ ಹಠ ಇರಲಿದೆ. ಯಾವ ಕೆಲಸವು ಮುಕ್ತಾಯವಾಗದೇ ಅಸಮಾಧಾನವು ಇರಲಿದೆ. ಆಗಬೇಕಾದುದು ಆಗುತ್ತದೆ ಎಂದು ಕೊಂಡು ನಿಮ್ಮ ಕರ್ತವ್ಯವನ್ನು ಮಡುವಿರಿ.
ಮೀನ ರಾಶಿ:
ಮೇ ತಿಂಗಳ ಎರಡನೇ ವಾರದಲ್ಲಿ ನಿಮಗೆ ಅಶುಭ. ರಾಹುವು ನಿಮ್ಮ ರಾಶಿಯಲ್ಲಿ ಇದ್ದು ದೇಹಕ್ಕೆ ನಾನಾ ತೊಂದರೆಗಳು ಆಗಾಗ ಬರಲಿದೆ. ಗಾಯ, ನೋವುಗಳು ಹೆಚ್ಚಾಗಿ ಕಾಣಿಸಿಕೊಳ್ಳುವುದು. ಕಾಲಿನ ಪ್ರದೇಶದಲ್ಲಿ ನೋವು, ತುರಕೆ ಮೊದಲಾದವು ಕಾಣಿಸುವುದು. ಮನೋರಂಜನೆಯ ಕಾರ್ಯದಲ್ಲಿ ತೊಡಗುವಿರಿ. ಕೆಲಸವನ್ನು ಕಳೆದುಕೊಂಡಿದ್ದರೆ ಸ್ನೇಹಿತರಿಂದ ಸಹಾಯ ಪಡೆಯುವಿರಿ. ಅಮೂಲ್ಯ ವಸ್ತುಗಳನ್ನು ಕಳೆದುಕೊಳ್ಳುವಿರಿ. ಹೊಸತನ್ನು ಕಲಿಯಬೇಕು ಎನ್ನುವ ಬಯಕೆ ಇರಲಿದೆ. ಉದ್ಯೋಗದ ನಿಮಿತ್ತ ಮನೆಯಿಂದ ದೂರವಿರಬೇಕಾಗುದು. ಪತ್ನಿಗೆ ಸಹಾಯ ಮಾಡಲಿದ್ದೀರಿ. ಮಿತ್ರರರನ್ನು ದ್ವೇಷಿಸುವ ಸನ್ನಿವೇಶವು ಎದುರಾಗಬಹುದು.