ಸಮಗ್ರ ನ್ಯೂಸ್: ಕೋಡಿಮಠದ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಮತ್ತೊಮ್ಮೆ ಭವಿಷ್ಯ ನುಡಿದಿದ್ದಾರೆ. ಸದ್ಯದಲ್ಲಿ ರಾಜಕಾರಣದಲ್ಲಿ ಯಾವುದೇ ಬದಲಾವಣೆ ಇಲ್ಲ. ಸಂಕ್ರಾಂತಿವರೆಗೂ ರಾಜ್ಯ ರಾಜಕೀಯದಲ್ಲಿ ಏನೂ ಬದಲಾವಣೆ ಆಗೋದಿಲ್ಲ ಎಂದಿದ್ದಾರೆ.
ರಾಷ್ಟ್ರ ರಾಜಕಾರಣದಲ್ಲಿ ಬದಲಾವಣೆ ಆಗುತ್ತಾ ಎಂಬ ಪ್ರಶ್ನೆಗೆ ಉತ್ತರಿಸಿದ ಶ್ರೀಗಳು, ಅರಸನ ಅರಮನೆಗೆ ಕಾರ್ಮೋಡ ಕವಿದೀತು ಎಂದು ಉತ್ತರಿಸಿದ್ದಾರೆ. ಅಂದ್ರೆ ರಾಷ್ಟ್ರ ರಾಜಕಾರಣದಲ್ಲಿ ಮಹ್ವತದ ಬೆಳವಣಿಗೆ ನಡೆಯಲಿದೆ ಎಂಬುದನ್ನು ಹೇಳಿಂದತಿದೆ.
ಪ್ರಳಯ ಏನಾದ್ರೂ ಆಗುತ್ತಾ ಎಂಬ ಪ್ರಶ್ನೆಗೆ ಉತ್ತರಿಸಿದ ಶ್ರೀಗಳು, ಈ ವರ್ಷ ವಾಯು ಸುನಾಮಿ, ಜಲ ಸುನಾಮಿ, ಭೂ ಸುನಾಮಿ, ಅಗ್ನಿ ಸುನಾಮಿ ಉಂಟಾಗುತ್ತದೆ. ಹಿಮಾಲಯ ಗೌರಿಶಂಕರ ಶಿಖರ ಶಿವ ಶಿವ ಎಂದೀತು. ಹಿಮಾಲಯದಲ್ಲಿ ಸುನಾಮಿ ಆದೀತು ಅಲ್ಲಿಂದ ಬಂದು ಡೆಲ್ಲಿಗೆ ತಲುಪುತ್ತದೆ. ಹಿಮಾಲಯ ಸುನಾಮಿಯಿಂದ ಡೆಲ್ಲಿಗೂ ಅಪಾಯವಿದೆ. ಉತ್ತರ ರಾಷ್ಟ್ರಗಳಿಗೆ ಅಪಾಯವಿದೆ, ಜಲಬಾಧೆ ಇದೆ. ದೊಡ್ಡ ದೊಡ್ಡ ನಾಯಕರಿಗೆ ಅಪಾಯವಿದೆ. ಜಗತ್ತಿನ ಎರಡ್ಮೂರು ಜನ ಮಹಾನ್ ನಾಯಕರಿಗೆ ಅಪಮೃತ್ಯುವಿದೆ. ಟಾಪ್ ಪೊಲಿಟಿಕಲ್ ಪೀಪಲ್ಸ್ ಗೆ ಅಪಮೃತ್ಯುವಿದೆ ಎಂದು ಭವಿಷ್ಯ ನುಡಿದ್ದಾರೆ.
ಪಹಲ್ಗಾಮ್ ದಾಳಿ ವಿಚಾರವಾಗಿ ಮಾತನಾಡಿದ ಅವರು, ಯುಗಾದಿ ಸಮಯದ ಭವಿಷ್ಯದಲ್ಲಿ ನಾವು ಹೇಳಿದ್ದೆವು. ಉತ್ತರದ ನಾಡಿನಲ್ಲಿ ಹಗೆಯ ಹೆಬ್ಬೇಗೆ ಹಬ್ಬೀತು, ಹುಟ್ಟೀತು. ಸುತ್ತುವರೆದು ಬರುವಾಗ ಜಗವೆಲ್ಲ ಕೋಳಾದೀತು ಸಾಮೂಹಿಕ ಹತ್ಯೆಯಾಗುತ್ತದೆ ಅಂತ. ಅದು ಹೇಳಿದ ಕೆಲ ದಿನಗಳಲ್ಲಿ ಕಾಶ್ಮೀರದಲ್ಲಿ ಹತ್ಯೆ ಆಯ್ತು. ಅದು ಜಗತ್ತಿನಾದ್ಯಂತ ಪ್ರಸಾರ ಆಗ್ತದೆ ಆಗಲೇ ಶುರುವಾಗಿದೆ. ಮತಾಂಧತೆ ಹೆಚ್ಚಾಗಲಿದೆ, ದೊಡ್ಡ ಕಾಯಿಲೆ ಬರುತ್ತೆ ಅದು ಐದು ವರ್ಷ ಇರುತ್ತೆ. ಶಾಂತಿ ಇಲ್ಲ, ನೆಮ್ಮದಿ ಇಲ್ಲ ಎಂದಿದ್ದಾರೆ.