April 2025

ನಾಲಿಗೆ ಹರಿಬಿಟ್ಟು ಶಾಸಕ ಸ್ಥಾನ ಕಳೆದುಕೊಳ್ಳುವ ಭೀತಿಯಲ್ಲಿ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ!!

ಸಮಗ್ರ ನ್ಯೂಸ್: 18 ಬಿಜೆಪಿ ಶಾಸಕರ ಅಮಾನತಿನೊಂದಿಗೆ ಇದೀಗ ಮತ್ತೊಂದು ಶಾಸಕರ ಎಂಎಲ್‌ಎ ಸ್ಥಾನವನ್ನೇ ಕಳೆದುಕೊಳ್ಳುವ ಸಾಧ್ಯತೆ ಇದೆ. ಸ್ಪೀಕರ್ ವಿರುದ್ದ ನಾಲಿಗೆ ಹರಿಬಿಟ್ಟು ಶಾಸಕ‌ ಸ್ಥಾನವನ್ನೇ ಕಳೆದುಕೊಳ್ಳುವ ಭೀತಿ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾರಿಗೆ ಎದುರಾಗಿದೆ. ಕಳೆದ ವಿಧಾನಸಭಾ ಅಧಿವೇಶನದಲ್ಲಿ ಸ್ಪೀಕರ್ ಯು.ಟಿ ಖಾದರ್ 18 ಬಿಜೆಪಿ ಶಾಸಕರನ್ನು ಅಮಾನತು ಮಾಡಿದ್ದರು. ಆದರೆ ತಮ್ಮ ಪಕ್ಷದ ಶಾಸಕರ ಅಮಾನತು ಆದೇಶ ವಾಪಸ್ ಪಡೆಯಬೇಕು ಎಂಬ ಹೋರಾಟವನ್ನು ಬಿಜೆಪಿ ಮುಂದುವರೆಸಿದ್ದು ಈ ಅಮಾನತು ಆದೇಶದ ಮಧ್ಯೆ ಬಿಜೆಪಿ […]

ನಾಲಿಗೆ ಹರಿಬಿಟ್ಟು ಶಾಸಕ ಸ್ಥಾನ ಕಳೆದುಕೊಳ್ಳುವ ಭೀತಿಯಲ್ಲಿ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ!! Read More »

ಪಹಲ್ಗಾಮ್ ಉಗ್ರ ದಾಳಿ ಪ್ರಕರಣ| ಮೃತರ ಸಂಖ್ಯೆ 27ಕ್ಕೆ ಏರಿಕೆ

ಸಮಗ್ರ ನ್ಯೂಸ್: ಜಮ್ಮು-ಕಾಶ್ಮೀರದ ಪಹಲ್ಗಮ್‌ ಬೈಸರನ್ ಕಣಿವೆಯ ಬಳಿ ಇಂದು ಉಗ್ರರು ದಾಳಿ ನಡೆಸಿದ್ದು, ಅಡಗಿ ಕುಳಿತಿರುವ ಉಗ್ರರು ಪ್ರವಾಸಿಗರ ಮೇಲೆ ಗುಂಡು ಹಾರಿಸಿದ್ದಾರೆ. ಈ ದಾಳಿಯಲ್ಲಿ ಶಿವಮ್ಮೊಗದ ಉದ್ಯಮಿ ಸೇರಿ 27ಕ್ಕೂ ಹೆಚ್ಚು ಪ್ರವಾಸಿಗರು ಸಾವನ್ನಪ್ಪಿದ್ದಾರೆ. ರಿಯಲ್ ಎಸ್ಟೇಟ್ ಉದ್ಯಮಿಯಾಗಿದ್ದ ಶಿವಮೊಗ್ಗದ ಮಂಜುನಾಥ್ ಎಂಬುವವರು, ಉಗ್ರರ ದಾಳಿಗೆ ಬಲಿಯಾಗಿದ್ದಾರೆ. ಆದರೆ ಇವರೊಂದಿಗೆ ಪ್ರವಾಸಕ್ಕೆ ತೆರಳಿದ ಇವರ ಪತ್ನಿ ಪಲ್ಲವಿ ಮತ್ತು ಮಗ ಸುರಕ್ಷಿತವಾಗಿದ್ದಾರೆ. ಕಾಶ್ಮೀರಕ್ಕೆ ಭೇಟಿ ನೀಡಿದ್ದ 27ಕ್ಕೂ ಹೆಚ್ಚು ಪ್ರವಾಸಿಗರು ಸಾಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ.

ಪಹಲ್ಗಾಮ್ ಉಗ್ರ ದಾಳಿ ಪ್ರಕರಣ| ಮೃತರ ಸಂಖ್ಯೆ 27ಕ್ಕೆ ಏರಿಕೆ Read More »

‘ಉಪ್ಪು ತಿಂದವರು ನೀರು ಕುಡಿಯಲೇ ಬೇಕು’ | ಪಹಲ್ಗಾಮ್ ದಾಳಿ ನಡೆಸಿರೋರನ್ನು ಸುಮ್ಮನೆ ಬಿಡೋ ಮಾತೇ ಇಲ್ಲ – ಅಮಿತ್ ಶಾ ಕಿಡಿ

ಸಮಗ್ರ ನ್ಯೂಸ್: ಜಮ್ಮು ಕಾಶ್ಮೀರದ ಪಹಲ್ಗಾಮ್ ಭಯೋತ್ಪಾದಕ ದಾಳಿಯ ಕುರಿತು ಪ್ರಧಾನಿ ನರೇಂದ್ರ ಮೋದಿ ಗೃಹ ಸಚಿವ ಅಮಿತ್ ಶಾ ಅವರಿಗೆ ದೂರವಾಣಿಯಲ್ಲಿ ಕರೆ ಮಾಡಿ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳುವಂತೆ ಸೂಚಿಸಿದ್ದಾರೆ. ಇಂದು ನಡೆದ ಉಗ್ರರ ದಾಳಿಯಲ್ಲಿ ಪ್ರವಾಸಕ್ಕೆ ತೆರಳಿದ್ದ 12 ಜನರಿಗೆ ಗಾಯಗಳಾಗಿದ್ದು, ಓರ್ವ ಪ್ರವಾಸಿಗ ಮೃತಪಟ್ಟಿದ್ದಾರೆ. ಮೃತರಾದ ವ್ಯಕ್ತಿ ಶಿವಮೊಗ್ಗದವರು ಎಂದು ತಿಳಿದುಬಂದಿದೆ. ಕಾಶ್ಮೀರದ ಸೌಂದರ್ಯ ಸವಿಯಲು ತೆರಳಿದವರಿಗೆ ಈ ದಿನ ಅವರ ಜೀವನದ ಅತ್ಯಂತ ಕೆಟ್ಟ ದಿನವಾಗಿ ಪರಿವರ್ತನೆಯಾಗಿದೆ. ಈ ಘಟನೆಯ ಬಗ್ಗೆ

‘ಉಪ್ಪು ತಿಂದವರು ನೀರು ಕುಡಿಯಲೇ ಬೇಕು’ | ಪಹಲ್ಗಾಮ್ ದಾಳಿ ನಡೆಸಿರೋರನ್ನು ಸುಮ್ಮನೆ ಬಿಡೋ ಮಾತೇ ಇಲ್ಲ – ಅಮಿತ್ ಶಾ ಕಿಡಿ Read More »

ಲಕ್ಷ ದಾಟಿ ಸಾರ್ವಕಾಲಿಕ ದಾಖಲೆ ಬರೆದ ಚಿನ್ನದ ದರ| ಬಂಗಾರ ಕೊಳ್ಳುವ ಆಸೆ ಬಿಟ್ಬಿಡಿ…

ಸಮಗ್ರ ನ್ಯೂಸ್: ಚೀನಿವಾರ ಪೇಟೆಯಲ್ಲಿ ಇಂದು ಸಾರ್ವಕಾಲಿಕ ದಾಖಲೆ ನಿರ್ಮಾಣವಾಗಿದೆ. 10 ಗ್ರಾಂ ಚಿನ್ನದ ದರ ಬರೋಬ್ಬರಿ 1 ಲಕ್ಷ ರೂ. ತಲುಪುವ ಮೂಲಕ ಐತಿಹಾಸಿಕ ದಾಖಲೆ ಬರೆದಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ತೆರಿಗೆ ಸಮರ ಬಂಗಾರದ ಬೆಲೆಯನ್ನು ಹಿಂದೆಂದಿಗಿಂತಲೂ ಹೆಚ್ಚಿನ ಮೌಲ್ಯ ದಾಖಲಿಸುವಂತೆ ಮಾಡಿದೆ. ಹೂಡಿಕೆದಾರರು ಬಂಗಾರದ ಮೇಲೆ ಅಪಾರ ಒಲವು ತೋರುತ್ತಿರುವುದೇ ಈ ದಾಖಲೆಯ ದರ ಏರಿಕೆಗೆ ಕಾರಣ ಎನ್ನಲಾಗುತ್ತಿದೆ. ಇದರೊಟ್ಟಿಗೆ ಅಕ್ಷಯ ತೃತೀಯ, ಮದುವೆ ಸೇರಿದಂತೆ ಶುಭಸಮಾರಂಬಗಳಿಗೆ ಬಂಗಾರ ಖರೀದಿ

ಲಕ್ಷ ದಾಟಿ ಸಾರ್ವಕಾಲಿಕ ದಾಖಲೆ ಬರೆದ ಚಿನ್ನದ ದರ| ಬಂಗಾರ ಕೊಳ್ಳುವ ಆಸೆ ಬಿಟ್ಬಿಡಿ… Read More »

ಜಮ್ಮುವಿನಲ್ಲಿ ಪ್ರವಾಸಿಗರ ಮೇಲೆ ಉಗ್ರರಿಂದ ಗುಂಡಿನ ದಾಳಿ| ಕನ್ನಡಿಗ ಸೇರಿ ಇಬ್ಬರು ‌ಹತ; ಹಲವರಿಗೆ ಗಾಯ

ಸಮಗ್ರ ನ್ಯೂಸ್: ಜಮ್ಮು-ಕಾಶ್ಮೀರದಲ್ಲಿ ಮತ್ತೆ ಭಯೋತ್ಪಾದಕರು ಅಟ್ಟಹಾಸ ಮೆರೆದಿದ್ದಾರೆ. ಪ್ರವಾಸಿಗರನ್ನು ಗುರಿಯಾಗಿಸಿಕೊಂಡು ಉಗ್ರರು ಗುಂಡಿನ ದಾಳಿ ನಡೆಸಿದ್ದು, ಪಹಲ್ಗಾಮ್ ನಲ್ಲಿ ನಡೆದಿದೆ. ಕಾಲ್ನಡಿಗೆ ಮೂಲಕ ಪಹಲ್ಗಾಮ್ ಪ್ರದೇಶಕ್ಕೆ ತೆರಳುತ್ತಿದ್ದ ಪ್ರವಾಸಿಗರ ಮೇಲೆ ನಾಲ್ವರು ಭಯೋತ್ಪಾದಕರು ದಾಳಿ ನಡೆಸಿದ್ದಾರೆ. ಸೇನೆ ಸಮವಸ್ತ್ರದಲ್ಲಿ ಬಂದು ಈ ದಾಳಿ ನಡೆಸಿದ್ದಾರೆ ಎಂದು ತಿಳಿದುಬಂದಿದೆ. ಉಗ್ರರ ದಾಳಿಯಲ್ಲಿ ಇಬ್ಬರು ಪ್ರವಾಸಿಗರು ಸಾವನ್ನಪ್ಪಿದ್ದಾರೆ. ೧೨ ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಉಗ್ರರ ದಾಳಿ ಬೆನ್ನಲ್ಲೇ ಪಹಲ್ಗಾಮ್ ಪ್ರದೆಶವನ್ನು ಸೇನೆ ಸುತ್ತುವರೆದಿದ್ದು, ಉಗ್ರರ

ಜಮ್ಮುವಿನಲ್ಲಿ ಪ್ರವಾಸಿಗರ ಮೇಲೆ ಉಗ್ರರಿಂದ ಗುಂಡಿನ ದಾಳಿ| ಕನ್ನಡಿಗ ಸೇರಿ ಇಬ್ಬರು ‌ಹತ; ಹಲವರಿಗೆ ಗಾಯ Read More »

10ಜಿ ಪರಿಚಯಿಸಿದ ಚೀನಾ/ ಒಂದು ನಿಮಿಷದಲ್ಲಿಯೇ ಡೌನ್‌ಲೋಡ್ ಆಗಲಿದೆ ಎರಡು ಗಂಟೆಯ ಸಿನಿಮಾ

ಸಮಗ್ರ ನ್ಯೂಸ್‌: ವಿಶ್ವದ ಮೊದಲ 10ಜಿ ಬ್ರಾಡ್‌ಬ್ಯಾಂಡ್ ನೆಟ್‌ವರ್ಕ್ ಅನ್ನು ಚೀನಾವು ಪರಿಚಯಿಸಿದ್ದು, ಇದರಿಂದಾಗಿ ಬರೀ ಒಂದು ನಿಮಿಷದಲ್ಲಿಯೇ ಎರಡು ಗಂಟೆ ಅವಧಿಯ ಸಿನಿಮಾವನ್ನು ಡೌನ್‌ಲೋಡ್ ಮಾಡಬಹುದಾಗಿದೆ. ಚೀನಾ ಹಾಗೂ ಹುವೈ ಯುನಿಕಾರ್ನ್ ಜೊತೆ ಜಂಟಿಯಾಗಿ 10ಜಿ 10ಜಿ ಬ್ರಾಡ್‌ಬ್ಯಾಂಡ್‌ ನೆಟ್ವರ್ಕ್ ಅನ್ನು ಚೀನಾದ ಹೆಬ್ಬೆ ಪ್ರಾಂತ್ಯದ ಸುನನ್ ಕೌಂಟಿಯಲ್ಲಿ ಕಾರ್ಯಗತಗೊಳಿಸಿದೆ.ಭಾರತ ಸೇರಿ ಇತರೆ ದೇಶಗಳು 100 ಎಂಬಿಪಿಎಸ್ ವೇಗದಲ್ಲಿರುವಾಗ, ಚೀನಾ ಕಂಪನಿಗಳು ಇದರಿಂದ 10 ಪಟ್ಟು ವೇಗವನ್ನು ಹೊಂದಿರುವ ಬ್ರಾಡ್‌ಬ್ಯಾಂಡ್ ನೆಟ್ವರ್ಕ್ ಅನ್ನು ಜಾರಿಗೊಳಿಸಿದೆ. 2

10ಜಿ ಪರಿಚಯಿಸಿದ ಚೀನಾ/ ಒಂದು ನಿಮಿಷದಲ್ಲಿಯೇ ಡೌನ್‌ಲೋಡ್ ಆಗಲಿದೆ ಎರಡು ಗಂಟೆಯ ಸಿನಿಮಾ Read More »

ಕ್ರೈಸ್ತ ಧರ್ಮಗುರು ಪೋಪ್ ಫ್ರಾನ್ಸಿಸ್ ಇನ್ನಿಲ್ಲ

ಸಮಗ್ರ ನ್ಯೂಸ್: ಕೆಲ ತಿಂಗಳುಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ರೋಮನ್ ಕ್ಯಾಥೋಲಿಕ್ ಚರ್ಚ್‌ನ ಮುಖ್ಯಸ್ಥ , ಕ್ರೈಸ್ತ ಧರ್ಮದ ಪರಮೋಚ್ಚ ನಾಯಕ ಪೋಪ್ ಫ್ರಾನ್ಸಿಸ್ ಅವರು ನಿಧನರಾಗಿದ್ದಾರೆ. ಅವರಿಗೆ 88 ವರ್ಷ ವಯಸ್ಸಾಗಿತ್ತು. ಪೋಪ್ ಫ್ರಾನ್ಸಿಸ್ ಅವರು ಈಸ್ಟರ್ ಸೋಮವಾರವಾಗಿರುವ ಇಂದು ವ್ಯಾಟಿಕನ್‌ನ ಕಾಸಾ ಸಾಂತಾ ಮಾರ್ಟಾದಲ್ಲಿರುವ ತಮ್ಮ ನಿವಾಸದಲ್ಲಿ ನಿಧನರಾಗಿದ್ದಾರೆ. ವ್ಯಾಟಿಕನ್ ನ್ಯೂಸ್ ಟ್ವಿಟ್ಟರ್‌ ಪೇಜ್ ಈ ವಿಚಾರವನ್ನು ಖಚಿತಪಡಿಸಿದೆ. ಪೋಪ್ ಫ್ರಾನ್ಸಿಸ್ ಅವರು ಈಸ್ಟರ್ ಸೋಮವಾರ, ಏಪ್ರಿಲ್ 21, 2025 ರಂದು ತಮ್ಮ 88 ನೇ

ಕ್ರೈಸ್ತ ಧರ್ಮಗುರು ಪೋಪ್ ಫ್ರಾನ್ಸಿಸ್ ಇನ್ನಿಲ್ಲ Read More »

ಜಮ್ಮು – ಕಾಶ್ಮೀರದಲ್ಲಿ ಮೇಘ ಸ್ಪೋಟ| 3 ಸಾವು; 100ಕ್ಕೂ ಅಧಿಕ ಮಂದಿಯ ರಕ್ಷಣೆ

ಸಮಗ್ರ ನ್ಯೂಸ್:;ಜಮ್ಮು-ಕಾಶ್ಮೀರದ ರಾಂಬನ್‌ ಜಿಲ್ಲೆಯಲ್ಲಿ ಮೇಘಸ್ಫೋಟದ ಪರಿಣಾಮ ಭಾನುವಾರ ಸುರಿದ ಭಾರೀ ಮಳೆಯಿಂದ ಪ್ರವಾಹದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಪರಿಣಾಮವಾಗಿ 3 ಜನ ಸಾವನ್ನಪ್ಪಿದ್ದು, 100ಕ್ಕೂ ಅಧಿಕ ಜನರನ್ನು ರಕ್ಷಿಸಲಾಗಿದೆ. ಶನಿವಾರವೂ ಸಿಡಿಲು ಬಡಿದು ಓರ್ವ ಮಹಿಳೆ ಸೇರಿ 2 ಸಾವನ್ನಪ್ಪಿದ್ದು, ಕಳೆದೆರಡು ದಿನದಲ್ಲಿ ಜಮ್ಮುವಿನಲ್ಲಿ ಮಳೆಯಿಂದಾಗಿ ಮೃತಪಟ್ಟವರ ಸಂಖ್ಯೆ 5ಕ್ಕೆ ಏರಿಕೆಯಾಗಿದೆ. ಮೇಘಸ್ಫೋಟದೊಂದಿಗೆ ವೇಗವಾಗಿ ಬೀಸುವ ಗಾಳಿ, ಭೂಕುಸಿತ, ಆಲಿಕಲ್ಲು ಮಳೆಯೂ ಸಂಭವಿಸಿದ್ದು, ಧರಂ ಕುಂಡ್‌ ಗ್ರಾಮದಲ್ಲಿ 10 ಮನೆಗಳು ಸಂಪೂರ್ಣವಾಗಿ ಹಾನಿಗೊಳಗಾಗಿದೆ. 40ಕ್ಕೂ ಅಧಿಕ ಮನೆಗಳಿಗೆ

ಜಮ್ಮು – ಕಾಶ್ಮೀರದಲ್ಲಿ ಮೇಘ ಸ್ಪೋಟ| 3 ಸಾವು; 100ಕ್ಕೂ ಅಧಿಕ ಮಂದಿಯ ರಕ್ಷಣೆ Read More »

ಕರಾವಳಿ ಎಲ್ಲಾ ಧರ್ಮಗಳ ಭದ್ರಕೋಟೆ – ಡಿ.ಕೆ ಶಿವಕುಮಾರ್

ಸಮಗ್ರ ನ್ಯೂಸ್: ಕರಾವಳಿ ಕರ್ನಾಟಕ ಹಿಂದುತ್ವದ ಭದ್ರಕೋಟೆಯಲ್ಲ, ಎಲ್ಲ ಧರ್ಮಗಳನ್ನು ಒಳಗೊಳ್ಳುವ ಸ್ಥಳ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ಕರಾವಳಿ ಜಿಲ್ಲೆ ಹಿಂದುತ್ವದ ಭದ್ರಕೋಟೆ ಎಂದು ಯಾರು ಹೇಳಿದರು? ಇದು ಎಲ್ಲಾ ಧರ್ಮಗಳ ಭದ್ರಕೋಟೆಯಾಗಿದೆ. ಇಲ್ಲಿನ ನೀರು, ದೇವಾಲಯಗಳು, ದರ್ಗಾಗಳು, ಪ್ರಕೃತಿ, ಸಮುದ್ರ, ದಡಗಳು – ಅವು ಜಾತಿ ಅಥವಾ ಧರ್ಮವನ್ನು ಆಧರಿಸಿವೆಯೇ? ಇಲ್ಲಿ ಯಾವುದೂ ಜಾತಿಯನ್ನು ಆಧರಿಸಿಲ್ಲ – ಎಲ್ಲವೂ ನೈತಿಕತೆಯನ್ನು ಆಧರಿಸಿದೆ. ಇದೆಲ್ಲವೂ ಎಲ್ಲಾ ಜಾತಿ ಮತ್ತು ಧರ್ಮಗಳಿಗೆ ಸೇರಿದೆ” ಎಂದು ಡಿಕೆಎಸ್ ಹೇಳಿದರು.

ಕರಾವಳಿ ಎಲ್ಲಾ ಧರ್ಮಗಳ ಭದ್ರಕೋಟೆ – ಡಿ.ಕೆ ಶಿವಕುಮಾರ್ Read More »

ಬೆಳ್ತಂಗಡಿ: ಧಾರ್ಮಿಕ ಆಚರಣೆಗೆ ಅಡ್ಡಿಪಡಿಸಿದರೆ ಶಿಕ್ಷೆ – ಡಿಸಿಎಂ

ಸಮಗ್ರ ನ್ಯೂಸ್: ಧಾರ್ಮಿಕ ಆಚರಣೆಗಳಿಗೆ ಅಡ್ಡಿಪಡಿಸಿದರೆ ಶಿಕ್ಷೆ ನೀಡುವುದಾಗಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿಯಲ್ಲಿ ಜನಿವಾರ ಪ್ರಕರಣ ಕುರಿತಾಗಿ ಪ್ರತಿಕ್ರಿಯೆ ನೀಡಿದ ಡಿಸಿಎಂ, ಧರ್ಮಾಚಾರಣೆಗೆ ಯಾರೂ ಅಡ್ಡಿಪಡಿಸುವಂತಿಲ್ಲ. ಹಿರಿಯರು ಮಾಡಿರುವ ಆಚರಣೆಗಳಿಗೆ ಅಡ್ಡಿ ಮಾಡಿದಲ್ಲಿ ತಪ್ಪಿತಸ್ಥರಿಗೆ ಶಿಕ್ಷೆ ನೀಡಲು ಸರ್ಕಾರ ಬದ್ಧವಾಗಿದೆ. ಆಚರಣೆಗಳನ್ನು ಅನುಸರಿಸಲು ಕಾಂಗ್ರೆಸ್ ಸರ್ಕಾರ ಎಲ್ಲರಿಗೂ ಮುಕ್ತ ಅವಕಾಶ ನೀಡುತ್ತದೆ ಎಂದು ಸ್ಪಷ್ಟಪಡಿಸಿದ್ದಾರೆ. ಧರ್ಮ, ಧರ್ಮಾಚರಣೆ ಉಳಿಸಲು ಸರ್ಕಾರ ಬದ್ಧವಾಗಿದ್ದು, ಇದನ್ನು ಶೃಂಗೇರಿ ಶ್ರೀಗಳ ಪಾದಾರವಿಂದಗಳಲ್ಲಿ ಹೇಳುತ್ತಿದ್ದೇನೆ ಎಂದು

ಬೆಳ್ತಂಗಡಿ: ಧಾರ್ಮಿಕ ಆಚರಣೆಗೆ ಅಡ್ಡಿಪಡಿಸಿದರೆ ಶಿಕ್ಷೆ – ಡಿಸಿಎಂ Read More »