April 2025

ವಾಯುಭಾರ ಕುಸಿತ| ಎ.8ರವರೆಗೆ ರಾಜ್ಯದ ಈ ಜಿಲ್ಲೆಗಳಲ್ಲಿ ಭಾರೀ ಮಳೆ‌ ಸಾಧ್ಯತೆ| ಎಲ್ಲೊ ಅಲರ್ಟ್ ಘೋಷಣೆ

ಸಮಗ್ರ ನ್ಯೂಸ್: ಸಮುದ್ರದ ಎರಡು ಭಾಗದಲ್ಲಿ ವಾಯುಭಾರ ಕುಸಿತ ಉಂಟಾಗಿದ್ದು, ಸ್ಪಷ್ಟ ಚಂಡಮಾರುತ ಪರಿಚಲನೆ ದಾಖಲಾಗಿದೆ. ಈ ಕಾರಣದಿಂದ ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಮುಂದಿನ 05 ದಿನ ಏಪ್ರಿಲ್ 8ರವರೆಗೆ ಗುಡುಗು ಮಿಂಚು, ಬಿರುಗಾಳಿ ಸಹಿತ ಭಾರೀ ಮಳೆ ಅಬ್ಬರಿಸಲಿದೆ. ರಾಜ್ಯದಲ್ಲಿ ಕೆಲವೆಡೆ ಬಿಸಿಲಿನ ತಾಪ ಹೆಚ್ಚಾಗಿತ್ತು, ಈ ಮಧ್ಯೆ ಬದಲಾದ ಹವಾಮಾನ ವೈಪರಿತ್ಯಗಳ ಪ್ರಭಾವದಿಂದಾಗಿ ಸಾಧಾರಣದಿಂದ ಭಾರೀ ಮಳೆ ಆರ್ಭಟಿಸಲಿದೆ. ಪೂರ್ವ ಮುಂಗಾರು ಮಳೆ ಮತ್ತಷ್ಟು ಚುರುಕಾಗಲಿದೆ. ಕೆಲವೆಡೆ ಗುಡುಗು, ಮಿಂಚು ಸಹಿತ ಧಾರಾಕಾರ […]

ವಾಯುಭಾರ ಕುಸಿತ| ಎ.8ರವರೆಗೆ ರಾಜ್ಯದ ಈ ಜಿಲ್ಲೆಗಳಲ್ಲಿ ಭಾರೀ ಮಳೆ‌ ಸಾಧ್ಯತೆ| ಎಲ್ಲೊ ಅಲರ್ಟ್ ಘೋಷಣೆ Read More »

ಎ.4-6 ಮಂಗಳೂರು- ಮಧೂರು ದೇವಸ್ಥಾನಕ್ಕೆ KSRTCಯಿಂದ ವಿಶೇಷ ಬಸ್

ಸಮಗ್ರ ನ್ಯೂಸ್: ಮಧೂರು ಕ್ಷೇತ್ರದಲ್ಲಿ ಬ್ರಹ್ಮಕಲಶೋತ್ಸವ ವಿಜೃಂಭಣೆಯಿಂದ ನಡೆಯುತ್ತಿದ್ದು, ಸಾರ್ವಜನಿಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಮಂಗಳೂರು ಕೆಎಸ್ಸಾರ್ಟಿಸಿ ವಿಭಾಗದಿಂದ ಮಂಗಳೂರು-ಮಧೂರು ನಡುವೆ ವಿಶೇಷ ಬಸ್ ಸೇವೆಯನ್ನು ಆರಂಭಿಸಿದೆ. ಎ.4ರಿಂದ ಈ ಬಸ್ ಸೇವೆ ಲಭಿಸಲಿದ್ದು, ಬಸ್ ಮಂಗಳೂರಿನ ಬಿಜೈ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣದಿಂದ ಮಧೂರಿಗೆ ಬೆಳಗ್ಗೆ 10 ಗಂಟೆಗೆ ಮತ್ತು‌ 10.20ಕ್ಕೆ ಹೊರಡಲಿದೆ. ಮಧೂರಿನಿಂದ ಮಂಗಳೂರಿಗೆ 1.30 ಮತ್ತು 1.45ಕ್ಕೆ‌ ಹೊರಡಲಿದೆ ಎಂದು ಕೆಎಸ್ಸಾರ್ಟಿಸಿ ಅಧಿಕಾರಿಗಳು ತಿಳಿಸಿದ್ದಾರೆ.

ಎ.4-6 ಮಂಗಳೂರು- ಮಧೂರು ದೇವಸ್ಥಾನಕ್ಕೆ KSRTCಯಿಂದ ವಿಶೇಷ ಬಸ್ Read More »

ಸಿಎಂ ನಿವಾಸಕ್ಕೆ ಮುತ್ತಿಗೆ ಹಾಕಲು‌ ಯತ್ನ| ವಿಪಕ್ಷನಾಯಕ ಆರ್.ಅಶೋಕ್ ಸೇರಿ ಹಲವರ ಬಂಧನ

ಸಮಗ್ರ ನ್ಯೂಸ್: ರಾಜ್ಯದಲ್ಲಿ ಹಾಲಿನ ದರ, ವಿದ್ಯುತ್ ದರ ಸೇರಿ ಹಲವು ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡಿದ್ದು, ಬೆಲೆ ಏರಿಕೆ ಖಂಡಿಸಿ ಮುಖ್ಯಮಂತ್ರಿ ಅವರ ನಿವಾಸಕ್ಕೆ ಮುತ್ತಿಗೆ ಹಾಕಲು ಯತ್ನಿಸಿದ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ನಿನ್ನೆಯಿಂದ ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಬಿಜೆಪಿ ಪ್ರತಿಭಟನೆ ಮಾಡುತ್ತಿದ್ದು, ಇಂದು ಸಿಎಂ ಸಿದ್ದರಾಮಯ್ಯ ನಿವಾಸಕ್ಕೆ ಮುತ್ತಿಗೆ ಹಾಕಲು ಯತ್ನಿಸಿದರು.ಹೀಗಾಗಿ, ನೂರಾರು ಕಾರ್ಯಕರ್ತರೊಂದಿಗೆ ರಸ್ತೆಗಿಳಿದು ಸಿಎಂ ಮನೆ ಕಡೆ ತೆರಳಲು ಮುಂದಾದರು. ಅಷ್ಟರಲ್ಲೇ ಬ್ಯಾರಿಕೇಡ್

ಸಿಎಂ ನಿವಾಸಕ್ಕೆ ಮುತ್ತಿಗೆ ಹಾಕಲು‌ ಯತ್ನ| ವಿಪಕ್ಷನಾಯಕ ಆರ್.ಅಶೋಕ್ ಸೇರಿ ಹಲವರ ಬಂಧನ Read More »

ಬೆಳ್ತಂಗಡಿ: ಬೆಳಾಲು ಕಾಡಿನಲ್ಲಿ ಪತ್ತೆಯಾದ ಶಿಶು ಪತ್ತೆಯಾದ ಪ್ರಕರಣ| ಮಗುವಿನ ತಂದೆ – ತಾಯಿ ಗುರುತು ಪತ್ತೆ| ವಾರದೊಳಗೆ ಮದುವೆಗೆ ಮಾಡಿಸಲು ತೀರ್ಮಾನ

ಸಮಗ್ರ ನ್ಯೂಸ್: ಬೆಳ್ತಂಗಡಿ ತಾಲೂಕಿನ ಬೆಳಾಲು ಗ್ರಾಮದ ಕಾಡಿನಲ್ಲಿ ಪತ್ತೆಯಾದ ನವಜಾತ ಶಿಶುವಿನ ತಂದೆ ತಾಯಿಯನ್ನು ಪತ್ತೆಹಚ್ಚಲಾಗಿದೆ. ಬೆಳಾಲಿನ ಮಾಯದ ಯುವಕ ರಂಜಿತ್ ನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಯುವಕ, ಮತ್ತು ಧರ್ಮಸ್ಥಳ ಗ್ರಾಮದ ಯುವತಿಯ ಎರಡೂ ಮನೆಯವರು ಠಾಣೆಗೆ ಕರೆಸಿ ವಿಚಾರಿಸಿ ಒಂದು ವಾರದೊಳಗೆ ಇಬ್ಬರಿಗೂ ಮದುವೆ ಮಾಡುವುದಾಗಿ ಒಪ್ಪಿಕೊಂಡಿರುವುದಾಗಿ ತಿಳಿದುಬಂದಿದೆ. ಬೆಳಾಲು ಗ್ರಾಮದ ಯುವಕ ರಂಜಿತ್ ಮತ್ತು ಧರ್ಮಸ್ಥಳ ಗ್ರಾಮದ ಯುವತಿ ನಡುವೆ ಪ್ರೀತಿ ಏರ್ಪಟ್ಟು ಅಕ್ರಮ ಸಂಬಂಧಕ್ಕೆ ಕಾರಣವಾಗಿತ್ತು. ಹೀಗೆ

ಬೆಳ್ತಂಗಡಿ: ಬೆಳಾಲು ಕಾಡಿನಲ್ಲಿ ಪತ್ತೆಯಾದ ಶಿಶು ಪತ್ತೆಯಾದ ಪ್ರಕರಣ| ಮಗುವಿನ ತಂದೆ – ತಾಯಿ ಗುರುತು ಪತ್ತೆ| ವಾರದೊಳಗೆ ಮದುವೆಗೆ ಮಾಡಿಸಲು ತೀರ್ಮಾನ Read More »

ಮಾರುಕಟ್ಟೆ ಧಾರಣೆ| ಅಡಿಕೆ ಮಾರುಕಟ್ಟೆ ಏರುಗತಿಯತ್ತ

ಸಮಗ್ರ ನ್ಯೂಸ್: ಮಂಗಳೂರು ಚಾಲಿ ಅಡಿಕೆ ಮಾರುಕಟ್ಟೆಯಲ್ಲಿ ಹೊಸ ಅಡಿಕೆ, ಸಿಂಗಲ್‌ ಚೋಲ್‌ ಧಾರಣೆ ಏರುಮುಖದತ್ತ ಸಾಗಿದರೆ, ಕಾಳುಮೆಣಸು ಧಾರಣೆ 700 ರೂ. ಗಡಿ ದಾಟಿ ಮುನ್ನುಗಿದೆ. ರಬ್ಬರ್‌, ತೆಂಗಿನ ಕಾಯಿ ಧಾರಣೆಯು ಏರಿಕೆಯ ಸೂಚನೆ ನೀಡಿದೆ. ಕಾಳುಮೆಣಸು ಧಾರಣೆ ಏರಿಕೆಯತ್ತ ಸಾಗಿದ್ದು ಕೃಷಿಕರಿಗೆ ಖುಷಿ ತಂದಿದೆ. ಎ.2 ರಂದು ಹೊರ ಮಾರುಕಟ್ಟೆಯಲ್ಲಿ ಕೆ.ಜಿ.ಗೆ 710 ರೂ. ದಾಖಲಾಗಿತ್ತು. ಕ್ಯಾಂಪ್ಕೋ ಮಾರುಕಟ್ಟೆಯಲ್ಲಿ 695 ರೂ.ಇತ್ತು. ಒಂದು ವಾರದಲ್ಲಿ ಕೆ.ಜಿ.ಗೆ 20 ರೂ. ಏರಿಕೆ ಕಂಡಿದೆ. ಡಬ್ಬಲ್‌ ಚೋಲ್‌

ಮಾರುಕಟ್ಟೆ ಧಾರಣೆ| ಅಡಿಕೆ ಮಾರುಕಟ್ಟೆ ಏರುಗತಿಯತ್ತ Read More »

ವಿವಾದಾತ್ಮಕ ವಕ್ಫ್ ತಿದ್ದುಪಡಿ ಮಸೂದೆಗೆ ಲೋಕಸಭೆಯಲ್ಲಿ ಅಂಗೀಕಾರ| ರಾಜ್ಯ ಸಭೆಯಲ್ಲಿ ಇಂದು(ಎ. ೩) ಮಸೂದೆ ಮಂಡನೆ

ಸಮಗ್ರ ನ್ಯೂಸ್: 12 ಗಂಟೆಗಳ ಚರ್ಚೆಯ ನಂತರ ಲೋಕಸಭೆ ಐತಿಹಾಸಿಕ ವಕ್ಫ್ ತಿದ್ದುಪಡಿ ಮಸೂದೆಯನ್ನು ಅಂಗೀಕರಿಸಿದೆ. ಇಂದು ರಾಜ್ಯಸಭೆಯಲ್ಲಿ ಅದರ ಭವಿಷ್ಯ ನಿರ್ಧಾರವಾಗಲಿದೆ. ವಕ್ಫ್ ತಿದ್ದುಪಡಿ ಮಸೂದೆಯನ್ನು ಗುರುವಾರ ಲೋಕಸಭೆಯು ‘ಪರವಾಗಿ'(ಹೌದು) 288 ಮತಗಳು ಮತ್ತು ‘ವಿರುದ್ಧ'(ಇಲ್ಲ) 232 ಮತಗಳೊಂದಿಗೆ ಅಂಗೀಕರಿಸಿತು. ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅಧಿಕೃತವಾಗಿ ಘೋಷಣೆ ಮಾಡಿದ್ದಾರೆ. ಕೇಂದ್ರ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಬುಧವಾರ ಲೋಕಸಭೆಯಲ್ಲಿ ವಕ್ಫ್(ತಿದ್ದುಪಡಿ) ಮಸೂದೆ 2025 ಅನ್ನು ಮಂಡಿಸಿದರು. ಇದು ವಕ್ಫ್ ಆಸ್ತಿಗಳ ಕಾರ್ಯನಿರ್ವಹಣೆಯನ್ನು ಸುಧಾರಿಸಲು,

ವಿವಾದಾತ್ಮಕ ವಕ್ಫ್ ತಿದ್ದುಪಡಿ ಮಸೂದೆಗೆ ಲೋಕಸಭೆಯಲ್ಲಿ ಅಂಗೀಕಾರ| ರಾಜ್ಯ ಸಭೆಯಲ್ಲಿ ಇಂದು(ಎ. ೩) ಮಸೂದೆ ಮಂಡನೆ Read More »

ಐಪಿಎಲ್ ಕ್ರಿಕೆಟ್| RCB ಗೆ ತವರಲ್ಲಿ ಸೋಲುಣಿಸಿದ ಗುಜರಾತ್

ಸಮಗ್ರ ನ್ಯೂಸ್: ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಗುಜರಾತ್ ಟೈಟಾನ್ಸ್ 8 ವಿಕೆಟ್ ಗಳ ಜಯ ಸಾಧಿಸಿದೆ. ಹೊಸ ನಾಯಕ ರಜತ್ ಪಟಿದಾರ್ ನಾಯಕತ್ವದಲ್ಲಿ, ಬೆಂಗಳೂರು ತಂಡವು ಸತತ ಎರಡು ಗೆಲುವುಗಳೊಂದಿಗೆ ಋತುವನ್ನು ಅದ್ಭುತವಾಗಿ ಆರಂಭಿಸಿದೆ. ಆದರೆ, ಶುಭ್​ಮನ್ ಗಿಲ್ ನೇತೃತ್ವದ ಗುಜರಾತ್ ತಂಡ ಮೊದಲ ಪಂದ್ಯದಲ್ಲಿ ಸೋತ ನಂತರ ಎರಡನೇ ಪಂದ್ಯದಲ್ಲಿ ಅಮೋಘ ಗೆಲುವು ಸಾಧಿಸಿತು. ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಈ ಸೀಸನ್​ನ

ಐಪಿಎಲ್ ಕ್ರಿಕೆಟ್| RCB ಗೆ ತವರಲ್ಲಿ ಸೋಲುಣಿಸಿದ ಗುಜರಾತ್ Read More »

ಲೋಕಸಭೆಯಲ್ಲಿ ವಕ್ಫ್ ತಿದ್ದುಪಡಿ ಮಸೂದೆ ಮಂಡನೆ

ಸಮಗ್ರ ನ್ಯೂಸ್: ಲೋಕಸಭೆಯಲ್ಲಿ ವಕ್ಫ್ ತಿದ್ದುಪಡಿ ವಿಧೇಯಕ ಮಂಡನೆ ಆರಂಭಗೊಂಡಿದೆ. ಗೃಹಸಚಿವ ಅಮಿತ್ ಶಾ ಈ ಬಗ್ಗೆ ಮಾತನಾಡಿ ವಕ್ಫ್ ಮಸೂದೆ ಮಂಡನೆಗೆ ಕೇಂದ್ರ ಸಂಪುಟ ಅನುಮೋದನೆ ನೀಡಿದೆ ಎಂದು ತಿಳಿಸಿದರು. ಕೇಂದ್ರ ಸಂಸದೀಯ ವ್ಯವಹಾರಗಳು ಹಾಗೂ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಅವರು ಪ್ರಸ್ತಾವಿತ ವಕ್ಫ್ ತಿದ್ದುಪಡಿ ಮಸೂದೆಯನ್ನು ಲೋಕಸಭೆಯಲ್ಲಿ ಮಂಡಿಸಿದರು. ಮುಸ್ಲಿಂ ಸಂಘಟನೆಗಳು ಹಾಗೂ ವಿರೋಧ ಪಕ್ಷಗಳಿಂದ ತೀವ್ರ ಟೀಕೆಗೆ ಗುರಿಯಾಗಿರುವ ವಕ್ಫ್ ತಿದ್ದುಪಡಿ ಮಸೂದೆ ಕುರಿತ ಚರ್ಚೆಗೆ ಕಾರ್ಯಕಲಾಪಗಳ ಸಲಹಾ ಸಮಿತಿ

ಲೋಕಸಭೆಯಲ್ಲಿ ವಕ್ಫ್ ತಿದ್ದುಪಡಿ ಮಸೂದೆ ಮಂಡನೆ Read More »

ಲಕ್ಷದ ಸನಿಹಕ್ಕೆ ಬಂಗಾರದ ದರ| ಇಂದಿನ ಧಾರಣೆ ಎಷ್ಟಿದೆ ಗೊತ್ತಾ?

ಸಮಗ್ರ ನ್ಯೂಸ್: ಬಂಗಾರದ ದರ ಏ. 1ರಂದು ಹೊಸ ದಾಖಲೆಯ ಎತ್ತರಕ್ಕೇರಿದೆ. ಪ್ರತಿ 10 ಗ್ರಾಮ್‌ ಚಿನ್ನದ ದರ ಬರೋಬ್ಬರಿ 91,000 ರೂ.ಗೆ ಜಿಗಿದಿದೆ. ಬೆಂಗಳೂರಿನಲ್ಲಿ 24 ಕ್ಯಾರಟ್‌ನ ಪ್ರತಿ ಗ್ರಾಮ್‌ ಬಂಗಾರದ ದರ 9,284 ರುಪಾಯಿಗೆ ಏರಿಕೆಯಾಗಿದೆ. ಜಾಗತಿಕ ಆರ್ಥಿಕ ಪರಿಸ್ಥಿತಿಯ ಅನಿಶ್ಚಿತತೆ, ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು ಘೋಷಿಸಿರುವ ಟಾರಿಫ್‌ ವಾರ್ ಜತೆಗೆ ಹಣದುಬ್ಬರ ಕೂಡ ಪ್ರಭಾವ ಬೀರಿದೆ. ನಾನಾ ದೇಶಗಳ ಸೆಂಟ್ರಲ್‌ ಬ್ಯಾಂಕ್‌ಗಳು ಕೂಡ ಬಂಗಾರದ ಖರೀದಿಯನ್ನು ಹೆಚ್ಚಿಸಿವೆ. ವಿಶ್ಲೇಷಕರ ಪ್ರಕಾರ

ಲಕ್ಷದ ಸನಿಹಕ್ಕೆ ಬಂಗಾರದ ದರ| ಇಂದಿನ ಧಾರಣೆ ಎಷ್ಟಿದೆ ಗೊತ್ತಾ? Read More »

ಒಂದನೇ ತರಗತಿಗೆ ಸೇರಲು 6 ವರ್ಷ ಕಡ್ಡಾಯ ನಿಯಮ‌ ಸಡಿಲಿಕೆ ಮಾಡದಂತೆ ಮನವಿ

ಸಮಗ್ರ ನ್ಯೂಸ್: ಒಂದನೇ ತರಗತಿಗೆ ಮಕ್ಕಳನ್ನು ಸೇರಿಸಲು ಆರು ವರ್ಷ ಕಡ್ಡಾಯ ಸಡಲಿಕೆ ಮಾಡಬಾರದೆಂದು ಖಾಸಗಿ ಶಾಲೆಗಳು ಮನವಿ ಮಾಡಿವೆ. ಮುಂಬರುವ 2025- 26ನೇ ಶೈಕ್ಷಣಿಕ ವರ್ಷದಿಂದ ಒಂದನೇ ತರಗತಿಗೆ ಮಕ್ಕಳನ್ನು ದಾಖಲಿಸಲು ಜೂನ್ 1 ಕ್ಕೆ ಆರು ವರ್ಷ ಪೂರ್ಣಗೊಂಡಿರಬೇಕೆಂಬ ನಿಯಮವನ್ನು ಯಾವುದೇ ಕಾರಣಕ್ಕೂ ಸಡಿಲಿಕೆ ಮಾಡಬಾರದು ಎಂದು ಖಾಸಗಿ ಶಾಲೆಗಳ ಸಂಘಟನೆ ಕ್ಯಾಮ್ಸ್ ರಾಜ್ಯದ ಮುಖ್ಯ ಕಾರ್ಯದರ್ಶಿಗೆ ಮನವಿ ಮಾಡಿದೆ. ಕ್ಯಾಮ್ಸ್ ಪ್ರಧಾನ ಕಾರ್ಯದರ್ಶಿ ಡಿ. ಶಶಿಕುಮಾರ್ ಅವರು ರಾಜ್ಯದ ಮುಖ್ಯ ಕಾರ್ಯದರ್ಶಿಗೆ ಮನವಿ

ಒಂದನೇ ತರಗತಿಗೆ ಸೇರಲು 6 ವರ್ಷ ಕಡ್ಡಾಯ ನಿಯಮ‌ ಸಡಿಲಿಕೆ ಮಾಡದಂತೆ ಮನವಿ Read More »