ಸಮಗ್ರ ನ್ಯೂಸ್: ಚೀನಿವಾರ ಪೇಟೆಯಲ್ಲಿ ಇಂದು ಸಾರ್ವಕಾಲಿಕ ದಾಖಲೆ ನಿರ್ಮಾಣವಾಗಿದೆ. 10 ಗ್ರಾಂ ಚಿನ್ನದ ದರ ಬರೋಬ್ಬರಿ 1 ಲಕ್ಷ ರೂ. ತಲುಪುವ ಮೂಲಕ ಐತಿಹಾಸಿಕ ದಾಖಲೆ ಬರೆದಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ತೆರಿಗೆ ಸಮರ ಬಂಗಾರದ ಬೆಲೆಯನ್ನು ಹಿಂದೆಂದಿಗಿಂತಲೂ ಹೆಚ್ಚಿನ ಮೌಲ್ಯ ದಾಖಲಿಸುವಂತೆ ಮಾಡಿದೆ.
ಹೂಡಿಕೆದಾರರು ಬಂಗಾರದ ಮೇಲೆ ಅಪಾರ ಒಲವು ತೋರುತ್ತಿರುವುದೇ ಈ ದಾಖಲೆಯ ದರ ಏರಿಕೆಗೆ ಕಾರಣ ಎನ್ನಲಾಗುತ್ತಿದೆ. ಇದರೊಟ್ಟಿಗೆ ಅಕ್ಷಯ ತೃತೀಯ, ಮದುವೆ ಸೇರಿದಂತೆ ಶುಭಸಮಾರಂಬಗಳಿಗೆ ಬಂಗಾರ ಖರೀದಿ ಬರಾಟೆಯೂ ತಾರಕ್ಕೇರಿರೋದು ಬಂಗಾರದ ಬೇಡಿಕೆಯನ್ನು ವಿಪರೀತ ಏರಿಸಿದೆ.
ಹೀಗಾಗಿಯೇ ನಿನ್ನೆ 98.800 ರೂಪಾಯಿ ಇದ್ದ 24 ಕ್ಯಾರೆಟ್ ಬಂಗಾರ ಇಂದು ಮುಂಜಾನೆ 200 ರೂ. ಏರಿಕೆ ದಾಖಲಿಸೋ ಮೂಲಕ 1 ಲಕ್ಷದ ಗಡಿ ದಾಟಿದೆ. ದೆಹಲಿಯಲ್ಲಿ ಪ್ರತಿ ಗ್ರಾಂ 24 ಕ್ಯಾರೆಟ್ ಬಂಗಾರದ ಬೆಲೆ 10.150 ದಾಖಲಾಗಿದ್ದರೆ, ಬೆಂಗಳೂರಲ್ಲಿ ಈ ದರ 10.135 ರೂಪಾಯಿ ಇದೆ.