ಸಮಗ್ರ ನ್ಯೂಸ್: ವಿಶ್ವದ ಮೊದಲ 10ಜಿ ಬ್ರಾಡ್‌ಬ್ಯಾಂಡ್ ನೆಟ್ವರ್ಕ್ ಅನ್ನು ಚೀನಾವು ಪರಿಚಯಿಸಿದ್ದು, ಇದರಿಂದಾಗಿ ಬರೀ ಒಂದು ನಿಮಿಷದಲ್ಲಿಯೇ ಎರಡು ಗಂಟೆ ಅವಧಿಯ ಸಿನಿಮಾವನ್ನು ಡೌನ್‌ಲೋಡ್ ಮಾಡಬಹುದಾಗಿದೆ. ಚೀನಾ ಹಾಗೂ ಹುವೈ ಯುನಿಕಾರ್ನ್ ಜೊತೆ ಜಂಟಿಯಾಗಿ 10ಜಿ 10ಜಿ ಬ್ರಾಡ್‌ಬ್ಯಾಂಡ್ ನೆಟ್ವರ್ಕ್ ಅನ್ನು ಚೀನಾದ ಹೆಬ್ಬೆ ಪ್ರಾಂತ್ಯದ ಸುನನ್ ಕೌಂಟಿಯಲ್ಲಿ ಕಾರ್ಯಗತಗೊಳಿಸಿದೆ.
ಭಾರತ ಸೇರಿ ಇತರೆ ದೇಶಗಳು 100 ಎಂಬಿಪಿಎಸ್ ವೇಗದಲ್ಲಿರುವಾಗ, ಚೀನಾ ಕಂಪನಿಗಳು ಇದರಿಂದ 10 ಪಟ್ಟು ವೇಗವನ್ನು ಹೊಂದಿರುವ ಬ್ರಾಡ್‌ಬ್ಯಾಂಡ್ ನೆಟ್ವರ್ಕ್ ಅನ್ನು ಜಾರಿಗೊಳಿಸಿದೆ. 2 ಗಂಟೆಗಳ ಫಿಲ್ಡ್‌ಗಳು ಕೇವಲ 1 ನಿಮಿಷದಲ್ಲಿ ಮಾಡಬಹುದು.
900 ಜಿಬಿಯಷ್ಟು ಭಾರಿ ಫೈಲ್ ಗಳು ಕೆಲವೇ ಸೆಕೆಂಡಲ್ಲಿ ಡೌನ್‌ಲೋಡ್ ಆಗುತ್ತವೆ. ಫೈಬರ್ ಆಪ್ಟಿಕ್ ಆರ್ಕಿಟೆಕ್ಚರ್ ಅನ್ನು ಅಪ್ ಗ್ರೇಡ್ ಮಾಡಿದಾಗ ಸಿಂಗಲ್ ಯೂಸರ್ ಬ್ಯಾಂಡ್‌ವಿಡ್ಸ್ ಅನ್ನು ಸಾಂಪ್ರದಾಯಿಕ ಗಿಗಾಬೈಟ್‌ನಿಂದ 102 ಹಂತಕ್ಕೆ ಕೊಂಡೊಯ್ಯುತ್ತದೆ ಎಂದು ಹೇಳಲಾಗಿದೆ.
10ಜಿ ಪರಿಚಯಿಸಿದ ಚೀನಾ/ ಒಂದು ನಿಮಿಷದಲ್ಲಿಯೇ ಡೌನ್‌ಲೋಡ್ ಆಗಲಿದೆ ಎರಡು ಗಂಟೆಯ ಸಿನಿಮಾ
