ದ್ವಾದಶ ರಾಶಿಗಳ ವಾರಭವಿಷ್ಯ

ಸಮಗ್ರ ನ್ಯೂಸ್: ಏಪ್ರಿಲ್‌ ತಿಂಗಳ ನಾಲ್ಕನೇ ವಾರ 20-04-2025ರಿಂದ 26-04-2025ರವರೆಗೆ ಇರಲಿದೆ. ಶುಕ್ರನು ಉಚ್ಚ ರಾಶಿಯಲ್ಲಿ ಇದ್ದು, ಅನೇಕ ಸುಖಭೋಗಗಳೂ ಸಿಗಲಿದೆ. ಅದರಿಂದ ತೊಂದರೆಯೂ ಆಗಬಹುದು. ಶುಕ್ರದಶೆ ನಿಮಗೆ ಅನುಕೂಲ ಹಾಗೂ ಪ್ರತಿಕೂಲಗಳು ಇರಲಿದ್ದು ದೈವಾನುಕೂಲವು ಪ್ರತಿಕೂಲವನ್ನು ದೂರಮಾಡುವುದು.‌ ಹಾಗಾದರೆ ಈ ವಾರದಲ್ಲಿ ಯಾವ ರಾಶಿಯವರಿಗೆ ಶುಭ, ಯಾರಿಗೆ ಲಾಭ? ಸಮಸ್ಯೆಗಳಿಗೆ ಪರಿಹಾರವೇನು? ನೋಡೋಣ…

Ad Widget .

ಮೇಷ ರಾಶಿ:
ರಾಶಿ ಚಕ್ರದ ಮೊದಲನೇ ರಾಶಿಯವರಿಗೆ ಈ ವಾರ ಶುಭ. ಆರ್ಥಿಕ ಅನುಕೂಲತೆಗಿಂತ ನಿಮಗೆ ಉಪಯೋಗಕ್ಕೆ ಬರುವ ಅನೇಕ ವಸ್ತುಗಳು ಅನ್ಯರ ಮೂಲಕ ಸಿಗಲಿದೆ. ಅರ್ಧಕ್ಕೇ ಕಾರಣಾಂತರಗಳಿಂದ ನಿಂತಿದ್ದ ಕೆಲಸಗಳನ್ನು ಪೂರ್ಣಗೊಳಿಸುವಿರಿ. ಮನೆಯಲ್ಲಿ‌ ಪ್ರಶಾಂತವಾದ ವಾತಾವರಣವಿರಲಿದ್ದು ನಿಮಗೆ ಬಹಳ ಖುಷಿ ಎನಿಸುವುದು. ಧಾರ್ಮಿಕ ಕಾರ್ಯಗಳಿಗೆ ಖರ್ಚು ಆಗಬಹುದು ಅಥವಾ ಹಣವೂ ಬರಬಹುದು. ವೃತ್ತಿಯನ್ನು ನೀವು ಗೌರವಿಸಲಿದ್ದೀರಿ. ಅದರ ಬಗ್ಗೆ ಯಾರಾದರೂ ನಕರಾತ್ಮಕವಾಗಿ ಮಾತನಾಡಿದರೆ ಅವರ ಜೊತೆ ವಿವಾದಕ್ಕೆ ಇಳಿಯುವಿರಿ.

Ad Widget . Ad Widget .

ವೃಷಭ ರಾಶಿ:
ಈ ತಿಂಗಳ ಕೊನೆಯ ವಾರದಲ್ಲಿ ನಿಮಗೆ ಧೈರ್ಯ ಬರಲಿದೆ. ಯಾವುದನ್ನು ಮಾಡಲೂ ಅತಿಯಾದ ಯೋಚನೆ ಮಾಡದೇ ಮುನ್ನಡೆಯುವಿರಿ. ಅಂದುಕೊಂಡಿದ್ದು ಆಗುವುದಿಲ್ಲ ಎಂಬ ನಂಬಿಕೆಯಿಂದ ಹೊರ ಬರುವಿರಿ.ಲ. ಎಲ್ಲವನ್ನೂ ನಾವಂದುಕೊಂಡಂತೆ ನಡೆಸಲು ಸಾಧ್ಯವಿಲ್ಲ. ನಿಮಗೆ ಧೈರ್ಯ ಹೇಳುವವರಿಂದ ಅನುಕೂಲವಿದೆ. ಆರ್ಥಿಕತೆಯು ಸ್ವಲ್ಪ ದುರ್ಬಲಗೊಳ್ಳುವುದು. ಹತಾಶರಾಗುವ ಅವಶ್ಯಕತೆ ಇಲ್ಲ. ನಿಮ್ಮ ಬಗ್ಗೆ ನಿಮ್ಮವರಿಗೆ ತಿಳಿಸುವ ಅನಿವಾರ್ಯತೆ ಬರಬಹುದು. ನಿಮ್ಮ ಬಗ್ಗೆ ನಿಮಗೆ ಸ್ಪಷ್ಟತೆ ಇರಲಿ. ಆರೋಗ್ಯಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಬಗೆಹರಿಸುವನು.

ಮಿಥುನ ರಾಶಿ:
ಈ ರಾಶಿಯವರಿಗೆ ಈ ವಾರ ಅಶುಭ. ಹೆಚ್ಚು ಕೋಪವುಳ್ಳವರಾಗುವಿರಿ. ಉದ್ಯೋಗದಲ್ಲಿ ತೀವ್ರತರವಾಗಿ ವಾಗ್ವಾದ ನಡೆಸುವಿರಿ. ನಿರೀಕ್ಷಿತವಾದ ಸಂಪತ್ತು ನಿಮಗೆ ಸಿಗಲಿದೆ. ಯಾವುದೇ ವಿಚಾರವನ್ನು ನಿಮ್ಮ ಸಾಮರ್ಥ್ಯ ಹಾಗೂ ವಿದ್ಯೆ ತಕ್ಕಂತೆ ಯೋಚಿಸಿ. ಎಲ್ಲವನ್ನೂ ಸರಿ ಮಾಡುತ್ತೇನೆ ಎಂಬ ಹುಂಬುತನವನ್ನು ತೋರಿಸಬೇಡಿ. ಮಕ್ಕಳ ಜೊತೆ ಸಂವಹನವನ್ನು ಜಾಣ್ಮೆಯಿಂದ ಮಾಡಿ. ನೀವು ಮಹತ್ತರವಾದ ಏನನ್ನಾದರೂ ಮಾಡಲು ಹೊರಟಿದ್ದರೆ ನಿಮಗೆ ಶುಭಸೂಚನೆಗಳು ಸಿಗುವುದು. ಅದನ್ನು ಗಮನಿಸಿಕೊಂಡು ನಿಮ್ಮ ಕೆಲಸವನ್ನು ಮುಂದುವರಿಸಿ. ಸ್ನೇಹಿತರು ದಾರಿಯನ್ನು ತಪ್ಪಿಸಬಹುದು. ಯಾರ ಬಳಿ ಏನನ್ನು ಹೇಳಬೇಕು ಎಂಬ ಬಗ್ಗೆ ಸ್ಪಷ್ಟತೆ ಇರಲಿ. ಲಕ್ಷ್ಮೀನಾರಾಯಣರ ಸ್ತೋತ್ರ ಮಾಡಿ.

ಕರ್ಕಾಟಕ ರಾಶಿ:
ರಾಶಿ ಚಕ್ರದ ನಾಲ್ಕನೇ ರಾಶಿಯವರಿಗೆ ಈ ವಾರ ಸುಖ. ಶುಕ್ರನು ನಿಮಗೆ ವಾಹನ, ಸುಖ ಭೋಜನ, ನಿದ್ರಾಸುಖವನ್ನು ಕೊಡುವನು. ತಾಯಿಯ ಪ್ರೀತಿ ನಿಮಗೆ ಸಿಗುವುದು. ಯಾವುದನ್ನಾದರೂ ಹೇಳುವುದು ಸುಲಭ, ಸ್ವತಃ ಮಾಡಲು ಬಂದಾಗ ವಾಸ್ತವದ ಪರಿಚಯವಾಗುವುದು. ಸಂಗಾತಿಯನ್ನು ನೀವು ಅತಿಯಾಗಿ ಇಷ್ಟಪಡುವಿರಿ. ಆದರೆ ಪ್ರತಿಯಾಗಿ ಪ್ರೀತಿಯು ಸಿಗುತ್ತದೆ ಎಂದು ತಿಳಿಯಬೇಡಿ. ಅನಾರೋಗ್ಯವಿದ್ದರೂ ಸದಾ ಉತ್ಸಾಹಿಗಳಾಗಿ ಇರುವಿರಿ. ಉದ್ಯೋಗದ ಬದಲಾವಣೆಯು ನಿಮಗೆ ಹವ್ಯಾಸದಂತೆ ಆಗುವುದು. ಸರ್ಜನಶೀಲ ವ್ಯಕ್ತಿಗಳಾಗಿದ್ದರೆ ನಿಮಗೆ ಅವಕಾಶಗಳು ಹೆಚ್ಚು ಬರುತ್ತದೆ. ಒಳ್ಳೆಯದನ್ನು ಬೆಂಬಲಿಸಿದರೆ ಅದಕ್ಕೆ ಬರುವ ಬಲವೇ ಬೇರೆ.

ಸಿಂಹ ರಾಶಿ:
ಈ ತಿಂಗಳ ಕೊನೆಯ ವಾರದಲ್ಲಿ ನಿಮಗೆ ಶುಭ. ಶುಕ್ರನು ಅಷ್ಟಮದಲ್ಲಿ ಇದ್ದು ವಾಹನ ಸುಖವಿರಲಿದೆ. ಉದ್ಯಮದಿಂದ ಅಭಿವೃದ್ಧಿ. ನೀವು ಹಲವು ದಿನಗಳಿಂದ ಕಾಡುತ್ತಿರುವ ಅಥವಾ ಅನುಭವಿಸುತ್ತಿರುವ ಸಮಸ್ಯೆಗಳಿಗೆ ಪರಿಹಾರವನ್ನು ಹುಡುಕಿಕೊಳ್ಳುವಿರಿ. ಸಹೋದರಿಯರು ನಿಮ್ಮ ಪರವಾಗಿರುವರು. ಪೂರ್ವಯೋಚನೆ ಇಲ್ಲದೇ ಆರಂಭಮಾಡಿದ ಕೆಲಸವನ್ನು ಆಮೇಲೆ ಪರಿಶೀಲಿಸದರೆ ಏನು? ಪೂರ್ವಸಿದ್ಧತೆ ಚೆನ್ನಾಗಿರಬೇಕಾಗುತ್ತದೆ. ಸ್ನೇಹಿತರಿಂದ ಅಪಹಾಸ್ಯಕ್ಕೆ ಒಳಗಾಗುವಿರೊ. ಸರ್ಕಾರಿ ಉದ್ಯೋಗದಲ್ಲಿ ಇದ್ದವರಿಗೆ ಕೆಲವೊಂದು ಗೊಂದಲಗಳು ಆಗಬಹುದು. ಬೇರೆ ಕಡೆಗೆ ಇಟ್ಟಿದ್ದ ಗಮನವನ್ನು ಬದಲಿಸಿ, ನಿಮ್ಮ ಜೀವನದ ಬಗ್ಗೆ ಯೋಚಿಸುವುದು ಒಳ್ಳೆಯದು ಎಂದು ಅನ್ನಿಸಬಹುದು. ಶಿವಾರಾಧನೆಯನ್ನು ಮಾಡಿ.

ಕನ್ಯಾ ರಾಶಿ:
ಏಪ್ರಿಲ್ ತಿಂಗಳ ನಾಲ್ಕನೇ ವಾರದಲ್ಲಿ ನಿಮಗೆ ಸ್ತ್ರೀಯರಿಂದ ಪೀಡೆ. ಸದ್ಯ ಉಚ್ಚಸ್ಥಾನದಲ್ಲಿ ಇರುವ ಕಾರಣ ಪ್ರೇಮಕ್ಕಾಗಿ ಬರುವುದು. ತಾಳ್ಮೆಯಿಂದ ಆದಷ್ಟು ವ್ಯವಹರಿಸಿ. ಅಪರೂಪದ ವಿಚಾರಗಳು ನಿಮಗೆ ಗೊತ್ತಾಗಲಿದೆ. ನೆರೆ ಹೊರೆಯರ ಜೊತೆ ಚೆನ್ನಾಗಿರಿ. ಅತಿಯಾದ ಸಲುಗೆಯಿಂದ ನಿಮಗೆ ಕಷ್ಟವಾಗಬಹುದು. ಪ್ರದರ್ಶನ ಕಲೆಯಲ್ಲಿ ಆಸಕ್ತಿ ದೊರೆಯುವುದು. ನಿಮ್ಮ ನಡೆ ಹಾಗು ನುಡಿಗಳು ಅವರಿಗೆ ವಿರೋಧದಂತೆ ಕಾಣಬಹುದು. ಮನಸ್ಸನ್ನು ನಕಾರಾತ್ಮಕವಾಗಿ ಹರಿಯಲು ಬಿಡಬೇಡಿ. ಕೃಷಿಗೆ ಸಂಬಂಧಿಸಿದ ಚಟುವಟಿಕೆಲ್ಲಿ ಭಾಗವಹಿಸುವಿರಿ. ಗುಡ್ಡ ಬೆಟ್ಟಗಳ, ನದಿಪ್ರದೇಶಗಳನ್ನು ಸುತ್ತಿವ ಮನಸ್ಸಾದೀತು. ಗಣಪತಿಗೆ ದೂರ್ವಾಪತ್ರವನ್ನು ಹಾಕಿ.

ತುಲಾ ರಾಶಿ:
ರಾಶಿ ಚಕ್ರದ ಏಳನೇ ರಾಶಿಯವರಿಗೆ ಈ ವಾರ ಶುಭ. ವಾಹನದಿಂದ ವಿಪತ್ತು ಬರುವುದು. ಸ್ತ್ರೀಯರು ದ್ವೇಷಿಸಬಹುದು. ಭೋಗದಿಂದ ವಿಮುಖರಾಗುವಿರಿ. ಸ್ವಂತ ಉದ್ಯಮವನ್ನು ನಡೆಸುತ್ತಿದ್ದರೆ, ಹೊಸಮಾರ್ಗವನ್ನು ಯೋಚಿಸಿ. ನಿಮ್ಮ ಆಸ್ತಿಯನ್ನು ಮಾರಾಟಮಾಡಲು ಆಲೋಚಿಸಿಸುವಿರಿ. ನೂತನ ವಾಹನಖರೀದಿಯನ್ನು ಮಾಡಲಿದ್ದೀರಿ. ಮಾನಸಿಕ ಒತ್ತಡದಿಂದ ಸ್ವಲ್ಪ ಸಮಸ್ಯೆಯನ್ನು ಅನುಭವಿಸುವಿರಿ. ಶ್ರಮವಹಿಸಿದ ಕಾರ್ಯಕ್ಕೆ ಫಲವು ಸಿಗಬಹುದಿ. ಒಳ್ಳೆಯವರ ಸಂಗ ಸಿಗಬಹುದು ಅಥವಾ ಉತ್ತಮ ಪುಸ್ತಕವನ್ನು ಓದುವಿರಿ. ನಿಮಗೆ ಆಸ್ತಿಯ ವಿಚಾರದಲ್ಲಿ ವಂಚನೆಯಾಗಲಿದೆ. ಕೋಪ ಮಾಡಿಕೋಳ್ಳದೇ ಸಹಜವಾಗಿರಿ ಇರಿ. ದೇಹಕ್ಕೆ ಆಯುಧದಿಂದ ಪ್ರಹಾರ. ದುರ್ಗಾರಾಧನೆಯನ್ನು ಮಾಡಿ.

ವೃಶ್ಚಿಕ ರಾಶಿ:
ಈ ತಿಂಗಳ ನಾಲ್ಕನೇ ವಾರದಲ್ಲಿ ನಿಮಗೆ ಶುಕ್ರನು ಉತ್ತಮಸ್ಥಾನದಲ್ಲಿ ಇದ್ದು, ಸಂತಾನದ ಸುದ್ದಿಯಿಂದ ಸುಖ. ಸ್ತ್ರೀ ಸಂತಾನವಾಗಲಿದೆ. ನಿಮ್ಮ ಮತಿಕೌಶಲಕ್ಕೆ ಕಛೇರಿಯಲ್ಲಿ ಬೆರಗಾಗಲಿದೆ. ಪರರಿಗೆ ಸಹಾಯ ಮಾಡಲು ಅವಕಾಶ ಬಂದರೆ ಮಾಡಿ, ಹಿಂದೆ ಹೆಜ್ಜೆ ಇಡಬೇಡಿ. ಮುಂದೆ ನಿಮಗೇ ಅಪಾಯವು ಬಂದಾಗ ಸಹಾಯವಾಗುವುದು. ಕಲಾ ವಿದ್ಯಾರ್ಥಿಗಳಿಗೆ ಪ್ರೊತ್ಸಾಹ ಅವಕಾಶವಿರುವುದು. ನಿಮ್ಮವರ ಬಳಿ ವಿಧೇಯತೆಯನ್ನು ಇಟ್ಟುಕೊಳ್ಳುವುದು ಉತ್ತಮ. ಕೆಲಸವನ್ನು ಬದಲಿಸುವ ಮನಸ್ಸು ಮಾಡುವಿರಿ. ಹಿತಶತ್ರುಗಳು ನಿಮಗೆ ಏನನ್ನಾದರೂ ಮಾಡಲು ಇಚ್ಛಿಸುವರು. ಆರ್ಥಿಕತೆಯ ವಿಚಾರದಲ್ಲಿ ಹಿನ್ನಡೆಯಾಗಲಿದೆ. ನೂತನಗೃಹದ ಪ್ರವೇಶ ಮಾಡುವಿರಿ.

ಧನು ರಾಶಿ:
ರಾಶಿ ಚಕ್ರದ ಒಂಭತ್ತನೇ ರಾಶಿಯವರಿಗೆ ಈ ವಾರ ಶುಭ. ಚತುರ್ಥದಲ್ಲಿ ಶುಕ್ರನು ಉಚ್ಚನಾಗಿ ಕೌಟುಂಬಿಕಸುಖ, ಮಾತೃಸುಖವನ್ನು ನೀಡುವನು. ಎಲ್ಲರೂ ನಿಮಗೆ ಬೇಕಾದುದನ್ನು ಕೊಡುವವರಲ್ಲಿ ಮಾತ್ರ ಕೇಳಿ. ಮಿತ್ರರ ಸಂಖ್ಯೆ ಬೆಳೆಯುವುದು. ಆದರೆ ಸನ್ಮಿತ್ರರು ಬಹಳ ಕಡಿಮೆ ಇರುವರು. ಮಾತುಗಳಿಂದ ನಿಮಗೆ ಕಿರಿಕಿರಿಯಾಗುವ ಸಾಧ್ಯತೆ ಇದೆ. ಸಂಗಾತಿಯ ಜೊತೆ ದೂರದ ಊರಿಗೆ‌ ಪ್ರಯಾಣ ಮಾಡುವಿರಿ. ನಿಮ್ಮ ಆದಾಯವನ್ನು ಮನೆಗೆ ನೀಡುವಿರಿ. ಮಕ್ಕಳಿಂದ ಮಾನಸಿಕ ಹಿಂಸೆ ಎದುರಾದೀತು. ಖರ್ಚು ಹೆಚ್ಚಾಯಿತು ಎನ್ನುವ ಆತಂಕ ಬೇಡ, ಆದಾಯಕ್ಕೂ ದಾರಿಯು ಸಿಗುವುದು. ಉದ್ಯಮಿಗಳಿಗೆ ವ್ಯಾಪಾರಕ್ಕೆ ಸಂಬಂಧಿಸಿದ ಅನಿರೀಕ್ಷಿತ ಪ್ರಯಾಣವು ಬರಲಿದೆ‌. ಉದ್ಯೋಗದ ಬಡ್ತಿಯಿಂದ ನಿಮಗೆ ಸಂತೋಷ. ಸ್ತ್ರೀಯರು ನಿಮಗೆ ಶತ್ರುವಾಗುವರು.

ಮಕರ ರಾಶಿ:
ಈ ವಾರದಲ್ಲಿ ಶುಕ್ರನು ತೃತೀಯದಲ್ಲಿ ಇರುವುದರಿಂದ ಪರಾಕ್ರಮ ತೋರಿಸಿ ಸಂಪತ್ತನ್ನು ಪಡೆಯುವಿರಿ. ಉದ್ಯೋಗದಲ್ಲಿ ಉನ್ನತ ಸ್ಥಾನ, ಸಾಗುವ ದಾರಿಯು ಎಷ್ಟೇ ಚೆನ್ನಾಗಿದ್ದರೂ ಒಮ್ಮೆ ಹಿಂದಿರುಗಿ ನೋಡುವುದು ಒಳ್ಳೆಯದು. ಉದ್ಯೋಗದಲ್ಲಿ ಬಡ್ತಿ ಸಿಗುವ ಅವಕಾಶವಿದೆ. ಅಸಂಬದ್ಧ ಮಾತುಕತೆಗಳನ್ನು ನಿಲ್ಲಿಸಿ. ನಿಮ್ಮ ಬಗ್ಗೆ ಇರುವ ಭಾವನೆ ಬದಲಾಗಬಹುದು. ವಿದ್ಯಾರ್ಥಿಗಳು ಕ್ರೀಡೆಯಲ್ಲಿ ಹೆಚ್ಚು ಮಗ್ನರಾಗುವರು. ನಿಮ್ಮ ಎಂದಿನ‌ ನಿಶ್ಚಲ ಮನಸ್ಸಿನಿಂದ ವಿಚಲಿತರಾಗಬೇಡಿ. ಪ್ರಕ್ಷುಬ್ಧ ವಾತಾವರಣ ಎದುರಾಗುವುದು. ಲೆಕ್ಕಕ್ಕೆ ಸಿಗದ, ಆದರೆ ನಿರಂತರವಾಗಿ ಇರುವ ಸಮಸ್ಯೆಯಿಂದ ಹೊರಬರುವುದು ಸದ್ಯ ಕಷ್ಟವಾಗಲಿದೆ. ದೈವಾನುಗ್ರಹದ ಅವಶ್ಯಕತೆ ಬಹಳ ಇದೆ.

ಕುಂಭ ರಾಶಿ:
ಈ ತಿಂಗಳ ಕೊನೆಯ ವಾರದಲ್ಲಿ ನಿಮಗೆ ಶುಭ. ಶುಕ್ರನು ಉಚ್ಚನಾಗಿ ದ್ವಿತೀಯದಲ್ಲಿ ಇದ್ದು ಆದಾಯ ಮೂಲದ ಕಾರ್ಯವನ್ನು ಚೆನ್ನಾಗಿಸುವನು. ಬರಬೇಕಾದ ಸಂಪತ್ತು ಬರುವುದು. ಆರ್ಥಿಕ ದೃಢತೆಗೆ ಬೇಕಾದ ಯೋಜನೆಯೂ ಸಫಲವಾಗುವುದು. ಯಾರಾದರೂ ಏನನ್ನಾದರೂ ಬಂದು ಕೇಳಿದರೆ ಇಲ್ಲವೆನ್ನದೇ ಇರುವಷ್ಟರಲ್ಲಿ ಅಲ್ಪವನ್ನಾದರೂ ಕೊಡಿ. ಅಸಾಧ್ಯವನ್ನು ಸಾಧಿಸುವ ಛಲವು ಒಳ್ಳೆಯದೇ. ಪವಿತ್ರ ತಾಣದಲ್ಲಿ ಈ ವಾರದ ಹೆಚ್ಚಿನ ಸಮಯವನ್ನು ಕಳೆಯುವಿರಿ. ಹೊಸ ಜವಾಬ್ದಾರಿಗಳು ನಿಮ್ಮ ಹೆಗಲಿಗೆ ಬರಬಹುದು. ನಿಭಾಯಿಸುವ ದಾರ್ಢ್ಯವನ್ನು ಬೆಳೆಸಿಕೊಳ್ಳಿ. ವೃತ್ತಿಯಲ್ಲಿ ಬದಲಾವಣೆಯನ್ನು ಬಯಸುವಿರಿ. ಆದರೆ ಅದನ್ನು ಕೈಬಿಡುವುದು ಸೂಕ್ತ. ಶಿವಾಲಯಕ್ಕೆ ಹೋಗಿ ಏಕಾಂತದಲ್ಲಿ ಕುಳಿತುಕೊಳ್ಳಿ.

ಮೀನ ರಾಶಿ:
ಏಪ್ರಿಲ್ ತಿಂಗಳ ನಾಲ್ಕನೇ ವಾರದಲ್ಲಿ ಶುಭ. ಶುಕ್ರನು ಉಚ್ಚಸ್ಥಾನದಲ್ಲಿ ಇರುವ ಕಾರಣ ಯಾವ ರೀತಿಯ ಸುಖಭೋಗವನ್ನು ಅನುಭವಿಸುವ ಮನಸ್ಸು ಇರುವುದೋ ಅದೆಲ್ಲ ಸಿಗಲಿದೆ. ಪೂರ್ಣವಿಚಾರವನ್ನು ತಿಳಿದು ಮಾತನಾಡಿ.‌ ಅರ್ಧ ವಿಷಯವನ್ನು ತಿಳಿದು ಮಾತನಾಡಿದರೆ ಇನ್ನೊಬ್ಬರಿಗೆ ನೋವಾದೀತು. ಅವರ ಶಾಪಕ್ಕೂ ಗುರಿಯಾಗುವಿರಿ. ನಿಮ್ಮ ಮನಸ್ಸಿನಲ್ಲಿ ಒಂದು ಕೃತಿಯಲ್ಲಿ ಒಂದು ಎನ್ನುವ ವಿಷಯವು ಇಂದಿನ‌ ನಿಮ್ಮ ವರ್ತನೆಯಿಂದ ತಿಳಿಯಲಿದೆ. ಉತ್ಸಾಹ ಭಂಗವನ್ನು ಸ್ನೇಹಿತರು ಮಾಡುವರು. ಬಾಯಿ ಚಪಲಕ್ಕೆ ಆಹಾರವನ್ನು ತಿಂದು ಆನಾರೋಗ್ಯ ಹೆಚ್ಚಾಗುವುದು ಕುತೂಹಲದ‌ ನೆಪದಲ್ಲಿ ಏನಾದರೂ ಮಾಡಿಕೊಳ್ಳಬೇಡಿ. ನಿಮಗೆ ನೀವು ಮಾಡುವ ಕೆಲಸದ ಬಗ್ಗೆ ಗಮನವಿರಲಿ.

Leave a Comment

Your email address will not be published. Required fields are marked *