ಕುಕ್ಕೆ ಸುಬ್ರಹ್ಮಣ್ಯ: ಮತ್ತೆ ನಂ.1 ಸ್ಥಾನ ಕಾಯ್ದುಕೊಂಡ ಸುಬ್ರಹ್ಮಣ್ಯ| ಈ ಆರ್ಥಿಕ ವರ್ಷದಲ್ಲಿ 155 ಕೋಟಿಗೆ ಏರಿದ ದೇಗುಲದ ಆದಾಯ

ಸಮಗ್ರ ನ್ಯೂಸ್: ರಾಜ್ಯದ ಶ್ರೀಮಂತ ದೇವಸ್ಥಾನ ದಕ್ಷಿಣ ಕನ್ನಡ ಜಿಲ್ಲೆಯ ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ ಮತ್ತೆ ತಾನೇ ರಾಜ್ಯಕ್ಕೆ ಶ್ರೀಮಂತ ದೇವಸ್ಥಾನ ಎಂಬುದನ್ನು ಸಾಬೀತುಪಡಿಸಿದೆ.

Ad Widget .

2024-25ನೇ ಸಾಲಿನ ವಾರ್ಷಿಕ ಆದಾಯ ರೂ.155.95 ಕೋಟಿ (155,95,19,567)ರೂ. ಗಳಿಗೆ ಏರಿಕೆಯಾಗಿದ್ದು, ಕಳೆದ ವರ್ಷಕ್ಕಿಂತ 9.94 ಕೋಟಿ ರೂ. ಏರಿಕೆಯಾಗಿದೆ. ಕಳೆದ ವರ್ಷ 146.01 ಕೋಟಿ ಆಗಿತ್ತು. ಸರ್ಪ ಸಂಸ್ಕಾರ ಸೇರಿದಂತೆ ವಿವಿಧ ಸೇವೆ ಹಾಗೂ ಇತರ ಮೂಲಗಳಿಂದ ಒಟ್ಟು ಆದಾಯ 155. 95 ಕೋಟಿ ರೂ. ಬಂದಿದ್ದು, ಖರ್ಚು 79.82 ಕೋಟಿ ರೂ (79,82,73,197) ಆಗಿದೆ.

Ad Widget . Ad Widget .

ಹಿಂದೂ ಧಾರ್ಮಿಕ ಸಂಸ್ಥೆಗಳು ಹಾಗೂ ಧರ್ಮದಾಯ ದತ್ತಿ ಇಲಾಖೆಯಡಿ ಈ ದೇವಸ್ಥಾನ ಬರಲಿದೆ. ನಾಗಾರಾಧನೆಯ ಪ್ರಮುಖ ಕ್ಷೇತ್ರವಾಗಿದ್ದು, ರಾಜ್ಯದವರಲ್ಲದೇ ಹೊರ ರಾಜ್ಯಗಳಿಂದಲೂ ಸಾವಿರಾರು ಭಕ್ತರು ಆಗಮಿಸುತ್ತಾರೆ. ಕುಕ್ಕೆ ಶ್ರೀ ಸುಬ್ರಹ್ಮಣ್ಯ ಆದಾಯ ಗಳಿಕೆಯಲ್ಲಿ ಕಳೆದ ವರ್ಷವೂ ಪ್ರಥಮ ಸ್ಥಾನದ ಲ್ಲಿತ್ತು. ಎರಡನೇ ಸ್ಥಾನಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ್ದಾಗಿತ್ತು. ಈ ವರ್ಷವೂ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನವೇ ಅತ್ಯಧಿಕ ಆದಾಯ ಸಂಗ್ರಹದ ದೇವಸ್ಥಾನವಾಗುವ ಸಾಧ್ಯತೆ ಇದೆ. ಇಲಾಖೆಯಿಂದ ಅಧಿಕೃತ ಪಟ್ಟಿ ಬಿಡುಗಡೆ ಬಳಿಕ ಮಾಹಿತಿ ಲಭ್ಯವಾಗಲಿದೆ.

ದೇವಸ್ಥಾನಕ್ಕೆ ಮುಖ್ಯವಾಗಿ ಹರಕೆ ಸೇವೆ, ಕಾಣಿಕೆ ಡಬ್ಬಿ, ಬಡ್ಡಿ, ಛತ್ರಗಳ ಬಾಡಿಗೆ, ಕಟ್ಟಡಗಳ ಬಾಡಿಗೆ ಮತ್ತು ಕೃಷಿ ತೋಟದಿಂದ ಆದಾಯವು ಬರುತ್ತದೆ. ಕಳೆದ 13 ವರ್ಷಗಳಿಂದ ನಿರಂತರವಾಗಿ ಆದಾಯ ಗಳಿಕೆಯಲ್ಲಿ ರಾಜ್ಯದ ನಂಬರ್ ದೇವಸ್ಥಾನವಾಗಿ ಹೊರ ಹೊಮ್ಮಿರುವ ಕುಕ್ಕೆಯು ಈ ಬಾರಿ ಪ್ರಪ್ರಥಮವಾಗಿ 155 ಕೋಟಿಗೂ ಮಿಕ್ಕಿ ಆದಾಯ ಗಳಿಸುವ ಮೂಲಕ ತನ್ನ ನಂಬರ್ ವನ್ ಸ್ಥಾನವನ್ನು ಮತ್ತೆ ಗಟ್ಟಿಗೊಳಿಸುವಲ್ಲಿ ಸಂಶಯವಿಲ್ಲ.

Leave a Comment

Your email address will not be published. Required fields are marked *