ಸಮಗ್ರ ನ್ಯೂಸ್: ಚಿನ್ನದ ಬೆಲೆ ಐತಿಹಾಸಿಕ ಗರಿಷ್ಠ ಮಟ್ಟಕ್ಕೆ ಏರಿಕೆ ಕಂಡಿದೆ. ದೆಹಲಿಯ ಮಾರುಕಟ್ಟೆಯಲ್ಲಿ 10 ಗ್ರಾಂ ಚಿನ್ನದ ಬೆಲೆ 98,100 ರೂ. ತಲುಪಿದೆ. ಕೇವಲ ಒಂದೇ ದಿನದಲ್ಲಿ, ಬುಧವಾರ 10 ಗ್ರಾಂಗೆ 1,650 ರೂ. ಏರಿಕೆಯಾಗಿದ್ದು, ಮಂಗಳವಾರ ಇದ್ದ 96,450 ರೂ.ನಿಂದ ಈ ಗಮನಾರ್ಹ ಜಿಗಿತ ಕಂಡಿದೆ.
ಚಿನ್ನದ ಜೊತೆಗೆ ಬೆಳ್ಳಿಯ ಬೆಲೆಯೂ ಗಗನಕ್ಕೇರಿದೆ. ಬುಧವಾರ 1 ಕೆಜಿ ಬೆಳ್ಳಿಯ ಬೆಲೆ 99,400 ರೂ. ತಲುಪಿದ್ದು, ಒಂದೇ ದಿನದಲ್ಲಿ 1,900 ರೂ. ಏರಿಕೆ ಕಂಡಿದೆ. ಮಾರುಕಟ್ಟೆ ತಜ್ಞರು, ಶೀಘ್ರದಲ್ಲೇ ಕೆಜಿ ಬೆಳ್ಳಿಯ ಬೆಲೆಯೂ 1 ಲಕ್ಷ ರೂ. ಗಡಿಯನ್ನು ದಾಟಬಹುದು ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಚಿನ್ನ ಮತ್ತು ಬೆಳ್ಳಿಯ ಬೆಲೆ ಏರಿಕೆಯಿಂದ ಆಭರಣ ಖರೀದಿದಾರರಿಗೆ ನಿರಾಸೆಯಾದರೂ, ಹೂಡಿಕೆದಾರರಿಗೆ ಇದು ಲಾಭದಾಯಕ ಸಮಯವಾಗಿದೆ. ಆದರೆ, ಮಾರುಕಟ್ಟೆ ತಜ್ಞರು ಎಚ್ಚರಿಕೆಯಿಂದ ಹೂಡಿಕೆ ಮಾಡುವಂತೆ ಸಲಹೆ ನೀಡಿದ್ದಾರೆ. ಜಾಗತಿಕ ಆರ್ಥಿಕತೆಯ ಏರಿಳಿತದಿಂದ ಬೆಲೆಯಲ್ಲಿ ಏರುಪೇರು ಸಾಧ್ಯವಿದೆ.