ಸಮಗ್ರ ನ್ಯೂಸ್: ರವಿಯು ತನ್ನ ಉಚ್ಚ ರಾಶಿಗೆ ಅಂದರೆ ಮೇಷ ರಾಶಿಗೆ ಪ್ರವೇಶ ಮಾಡುವನು. ರವಿ ದಶೆ ಇದ್ದವರಿಗೆ ಇದು ಒಳ್ಳೆಯದು. ಅದಿಲ್ಲವಾದರೆ ಸ್ಥಾನವಶದಿಂದ ರವಿಯು ಅವಕೃಪೆಗೆ ಪಾತ್ರರಾಗುವಿರಿ. ರವಿಯು ಆರೋಗ್ಯ ಕಾರಕನಾದ ಕಾರಣ ಅನಾರೋಗ್ಯ ಕಾಡುವ ಸಾಧ್ಯತೆ ಹೆಚ್ಚು. ಈ ವಾರ ಯಾವ ರಾಶಿಗೆ ಏನು ಫಲ? ಯಾರಿಗೆ ಲಾಭ? ನೋಡೋಣ ಬನ್ನಿ…
ಮೇಷ ರಾಶಿ: ಏಪ್ರಿಲ್ ತಿಂಗಳ ಮೂರನೇ ವಾರದಲ್ಲಿ ಮಿಶ್ರಫಲ. ರವಿಯು ನಿಮ್ಮ ರಾಶಿಗೆ ಬರಲಿದ್ದು, ಅತಿಯಾದ ದೇಹಾಯಾಸವಾಗಲಿದೆ. ಕೂಡಿದ ಹಣ ಕಾರಣಾಂತರಗಳಿಂದ ಅನ್ಯರ ಪಾಲಾಗುವುದು. ಮಾಡದೇ ಉಳಿದ ಕೆಲಸ ಕಾರ್ಯಗಳತ್ತ ಗಮನಹರಿಸಿ. ವ್ಯಾಪರದಲ್ಲಿ ಲಾಭವಾಗಲಿದೆ. ಕೋಪ ಅಧಿಕವಾಗಿ ಬರಲಿದೆ. ಜ್ವರ ಮೊದಲಾದ ರೋಗವನ್ನು ಅನುಭವಸಿಬೇಕು. ಪ್ರಯಾಣದಲ್ಲಿ ಸುಖವಿರದು. ಏನಾದರೊಂದು ತೊಂದರೆ ಆಗುವುದು. ಕಛೇರಿಯಲ್ಲಿ ಉಂಟಾದ ಕೆಲವು ಗೊಂದಲವು ನಿಮ್ಮ ಮನಸ್ಸನ್ನು ಹಾಳು ಮಾಡುವುದು. ಹಿತಶತ್ರುಗಳನ್ನು ಅರಿಯುವಲ್ಲಿ ನಿಮಗೆ ಸೋಲು. ದೌರ್ಬಲ್ಯವನ್ನು ಹೇಳಿಕೊಂಡು ಪರಿಹಾರ ಕಂಡುಕೊಳ್ಳುವುದು ಉತ್ತಮ. ವಿಳಂಬವಾಗಿ ಬರುತ್ತದೆ ಎಂದುಕೊಂಡ ನಿಮ್ಮ ಹಣವು ಬೇಗ ಬರಬಹುದು. ನಿಮ್ಮ ನಿರ್ಧಾರವು ತೂಗುಕತ್ತಿಯಂತೆ ಇರಲಿದೆ.
ವೃಷಭ ರಾಶಿ: ರಾಶಿ ಚಕ್ರದ ಎರಡನೇ ರಾಶಿಯವರಿಗೆ ಅಶುಭ. ಸೂರ್ಯನು ಹನ್ನೆರಡನೇ ರಾಶಿಗೆ ಬರಲಿದ್ದು ತಂದೆಯ ಕಡೆಯಿಂದ ಅಸಹಕಾರ. ಸುಖ ಸಿಗದೇ ಒದ್ದಾಡುವಿರಿ. ಹಣಕಾಸೂ ಕೈಯಲ್ಲ ನಿಲ್ಲದು ಎಂಬ ಹತಾಶೆ. ಕೊಟ್ಟ ಸಾಲ ಮರಳಿಬರುವ ಆಸೆಯನ್ನು ಬಿಡುವಿರಿ. ನಿಮ್ಮ ಮೇಲೆ ಸಹಾನುಭೂತಿಯು ಉಂಟಾಗುವ ಸಾಧ್ಯತೆ ಇದೆ. ಸ್ನೇಹಿತರ ಜೊತೆ ವೈರ ಬರಬಹುದು. ಅನಾರೋಗ್ಯದಿಂದ ಬಳಲಬೇಕಾಗುವುದು. ನಿಮ್ಮನ್ನು ನೀವೇ ಕಾಪಾಡಿಕೊಳ್ಳಿ. ನೀವು ಗಣ್ಯರೊಂದಿಗೆ ಇಂದಿನ ಒಡನಾಡವಿರಲಿದೆ. ವಿವಾಹಕ್ಕೆ ಸಂಬಂಧಿಸಿದ ಕಟು ಮಾತುಗಳು ಕೇಳಿಬರಬಹುದು. ನಕಾರಾತ್ಮಕ ವಿಚಾರಗಳ ನಡೆಯೂ ನೀವು ಬಲವಾಗಿದ್ದರೆ ಅದು ವಿದ್ಯೆಯ ಕಾರಣದಿಂದ. ಆಪ್ತರಿಗೆ ನಿಮ್ಮ ಬದಲಾದ ನಡವಳಿಕೆಯು ಇಷ್ಟವಾಗದು. ಸಮಯದ ಹೊಂದಾಣಿಕೆಯು ನಿಮಗೆ ಕಷ್ಟವಾಗುವುದು. ಬಂಧುವನ್ನೇ ಪಾಲುದಾರರನ್ನಾಗಿ ಆಯ್ಕೆ ಮಾಡಿಕೊಳ್ಳುವಿರಿ.
ಮಿಥುನ ರಾಶಿ: ಈ ತಿಂಗಳ ಮೂರನೇ ವಾರದಲ್ಲಿ ರವಿಯು ಏಕಾದಶ ಸ್ಥಾನಕ್ಕೆ ಬರಲಿದ್ದು, ಬಯಸಿಯೂ ಸಿಗದ ಸ್ಥಾನಮಾನಗಳು ನಿಮ್ಮದಾಗಲಿದೆ. ಸಂಪತ್ತಿಗೆ ಸಹೋದರನ ಕಡೆಯಿಂದ ಪ್ರಾಪ್ತಿ. ಸೃಜನಾತ್ಮಕವಾಗಿ ಬದುಕುವ ಸ್ವಭಾವಕ್ಕೆ ಫಲಸಿಗಬಹುದು. ಉತ್ತಮವಾದ ಯೋಜನೆಗಳನ್ನು ರೂಪಿಸಿ. ಹಲವು ದಿನಗಳಿಂದ ಅನುಭವಿಸಿದ ರೋಗವು ಉಪಶಮನವಾಗಿ ಉತ್ತಮ ಆರೋಗ್ಯ ನಿಮ್ಮದಾಗಲಿದೆ. ನಿಮ್ಮ ಸಂಗಾತಿಯು ನಿಮಗೆ ಅನುಕೂಲವನ್ನು ಕಲ್ಪಿಸುವವಳೇ ಆಗಿದ್ದಾಳೆ. ಅಭಿವೃದ್ಧಿಗೆ ಅವಕಾಶವಿದ್ದರೂ ನಿಮಗೆ ಹಿನ್ನಡೆಯಂತೆ ಎಲ್ಲವೂ ಭಾಸವಾಗುವುದು. ಶ್ರಮಕ್ಕೆ ತಕ್ಕ ಫಲವು ಲಭಿಸಿಲ್ಲ ಎಂದು ನಿಮ್ಮ ಮನಸ್ಸಿಗೆ ಗಾಢವಾಗಿ ತಿಳಿಯುವುದು. ಅತಿಯಾಗಿ ಯಾವುದನ್ನು ಮಾಡಲು ಹೋಗುವುದು ಬೇಡ. ಹೊಸ ಕಲಿಕೆಗೆ ಉತ್ಸಾಹ ಇರಲಿದ್ದು ಶ್ರದ್ಧೆಯಿಂದ ಅದನ್ನು ಅಭ್ಯಾಸ ಮಾಡುವಿರಿ. ನಿಮ್ಮ ತಮಾಷೆಯು ಇಷ್ಟವಾಗದೇ ಇರಬಹುದು. ಆದಿತ್ಯ ಹೃದಯವನ್ನು ಪಠಿಸಿ.
ಕರ್ಕಾಟಕ ರಾಶಿ: ಏಪ್ರಿಲ್ ತಿಂಗಳ ಈ ವಾರದಲ್ಲಿ ನಿಮಗೆ ಶುಭ. ರವಿಯು ದಶಮದಲ್ಲಿ ಇರುವ ಕಾರಣ ನೀವು ಪರಾಕ್ರಮದಿಂದ ಎಲ್ಲವನ್ನೂ ಗೆಲ್ಲಲು ಸಾಧ್ಯ. ಪ್ರಯತ್ನಕ್ಕೆ ಫಲವಿದ್ದೇ ಇದೆ. ಕಳ್ಳತನದ ಆರೋಪವನ್ನು ಎದುರಿಸಬೇಕಾಗಬಹುದು. ನಿಮ್ಮ ನಿರುದ್ಯೋಗವು ಚಿಂತೆಯಾಗಿ ನಿಮ್ಮ ಬಗ್ಗೆಯೇ ನಿಮಗೆ ನಕಾರಾತ್ಮಕ ಭಾವ ಮೂಡುವುದು. ಮಾಡಬೇಕಾದ ಕೆಲಸವನ್ನು ಅಚ್ಚುಕಟ್ಟಿನಿಂದ ಮಾಡಿ, ಕಾರ್ಯವು ನಿಸ್ಸಂಶಯವಾಗಿ ಸಿದ್ಧಿಸುವುದು. ಯಾವುದೋ ಆಲೋಚನೆಯಲ್ಲಿ ಮುಳುಗಿರುವಿರಿ. ಬಂಧುಗಳ ಭೇಟಿಯು ನಿಮಗೆ ಅಷ್ಟಾಗಿ ಇಷ್ಟವಾಗದು. ಸರಳವಾದ ಕೆಲಸವನ್ನು ಮನಶ್ಚಾಂಚಲ್ಯದಿಂದ ಸಂಕೀರ್ಣ ಮಾಡಿಕೊಳ್ಳುವಿರಿ. ನಿಮ್ಮ ಸ್ವಾಭಿಮಾನಕ್ಕೆ ತೊಂದರೆ ಉಂಟಾಗಬಹುದು. ನಿಮ್ಮ ಹಾಸ್ಯಪ್ರಜ್ಞೆ ಕೆಲವರಿಗೆ ಇಷ್ಟವಾಗದು.
ಸಿಂಹ ರಾಶಿ: ಈ ತಿಂಗಳಲ್ಲಿ ಮೂರನೇ ವಾರದಲ್ಲಿ ರಾಶಿಯ ಅಧಿಪತಿ ಸೂರ್ಯ ನವಮದಲ್ಲಿ ಇರುವನು. ಬಂಧುಗಳಿಂದ ಆಪತ್ತು ನಿಮಗೆ. ದೈನ್ಯದಿಂದ ಎಲ್ಲ ಕಾರ್ಯಕ್ಕು ಸಹಕಾರ ಕೊಡುವಿರಿ. ಯಾರನ್ನಾದರೂ ಅಗಲುವ ಸಂದರ್ಭ ಬರುವುದು. ಅತಿಯಾದ ಮನಸ್ಸಿನ ಚಾಂಚಲ್ಯವನ್ನು ನಿಲ್ಲಿಸಬೇಕಾಗುವುದು. ನಿಮ್ಮ ಅಂತರಂಗವನ್ನು ವ್ಯಕ್ತಪಡಿಸಲು ನಿಮಗೆ ಸೂಕ್ತ ಸಮಯವು ಲಭ್ಯವಾಗದೇ ಇರಬಹುದು. ಕಲಾವಿದರು ಉತ್ತಮ ಅವಕಾಶಗಳನ್ನು ತಮ್ಮದಾಗಿಸಿಕೊಳ್ಳುವರು. ನಿಮ್ಮ ತಪ್ಪಿನ ನಿರ್ಧಾರದಿಂದ ಪಶ್ಚಾತ್ತಾಪ ಪಡಬೇಕಾಗುವುದು. ಇನ್ನೊಬ್ಬರನ್ನು ಪ್ರಶಂಸಿಸುವ ಮನೋಭಾವ ನಿಮ್ಮಲ್ಲಿ ಇರದು. ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಅಗತ್ಯ. ಸೂರ್ಯಾಷ್ಟಕವನ್ನು ಪಠಿಸಿ ಅವನ ಅನುಗ್ರಹ ಪಡೆಯಿರಿ.
ಕನ್ಯಾ ರಾಶಿ: ರಾಶಿ ಚಕ್ರದ ಆರನೇ ರಾಶಿಯವರಿಗೆ ಈ ವಾರ ಅಶುಭ. ಅಷ್ಟಮದಲ್ಲಿ ರವಿಯಿಂದ ರಾಜಭೀತಿ ಉಂಟಾಗುವುದು. ಅಧಿಕಾರಿಗಳಿಂದ ಆಗಾಗ ಪೀಡೆಯನ್ನು ಅನುಭವಿಸುವಿರಿ. ಇರುವ ರೋಗವು ಉಲ್ಬಣಿಸಬಹುದು. ಜೀವನದಲ್ಲಿ ಆಸಕ್ತಿದಾಯಕ ವಿಷಯಗಳಿಗೆ ಕಾಯುತ್ತಿದ್ದಲ್ಲಿ ಅದನ್ನು ಮಾಡಿ. ಕಲಹದಲ್ಲಿ ಅಶಕ್ತಿ ಬರುವುದು ಇಲ್ಲವೇ ನಿಮ್ಮ ಬಳಿ ಕಲಹಕ್ಕಾಗಿ ಬಾರಬಹುದು. ನಿಮ್ಮದಾದ ಕೆಲವು ಅಸಂಬದ್ಧ ವ್ಯವಸ್ಥೆಯನ್ನು ನೀವು ಸರಿ ಮಾಡಿಕೊಳ್ಳಬೇಕಾಗುವುದು. ಹೊಸ ವಸ್ತುವಿನ ಖರೀದಿಯಲ್ಲಿ ನಿಮಗೆ ಮೋಸ ಆಗುವ ಸಾಧ್ಯತೆ ಇದೆ. ಪ್ರೀತಿಪಾತ್ರರ ಜೊತೆ ಸಲುಗೆಯಿಂದ ಇರುವಿರಿ. ಮಾನಸಿಕ ತಾಪ ಹೆಚ್ಚಾಗುವುದು. ಸಣ್ಣ ಒತ್ತಡವೂ ಅತಿಯಾದ ಫಲವನ್ನು ನಿಮ್ಮಲ್ಲಿ ಉಂಟುಮಾಡುವುದು. ನಿಮ್ಮ ಯೋಜನೆಯನ್ನು ಪ್ರಯೋಗಕ್ಕೆ ತರಲು ಪೂರ್ಣ ಯಶಸ್ಸನ್ನು ಪಡೆಯಲಾರಿರಿ. ಮನಸ್ಸಿನಿಂದ ನೀವು ಕೆಲವು ವಿಚಾರವನ್ನು ತೆಗೆದುಹಾಕುವುದು ಉತ್ತಮ.
ತುಲಾ ರಾಶಿ: ಏಪ್ರಿಲ್ ತಿಂಗಳ ಈ ವಾರದಲ್ಲಿ ನಿಮಗೆ ಅಶುಭ. ಪ್ರಾಯಾಣದಲ್ಲಿ ಆಕಸ್ಮಿಕ ಬದಲಾವಣೆ. ನಿಮಗೆ ಅದೆಲ್ಲ ಸಹಿಸುವುದು ಕಷ್ಟವಾಗುವುದು. ಇತರರಿಗೆ ಒಳ್ಳೆಯದನ್ನು ಮಾಡುವ ಕಾರ್ಯಕ್ಕೆ ಪ್ರತಿಫಲವಿದೆ. ಹೊಟ್ಟೆ ಅಥವಾ ಗುದದ್ವಾರಕ್ಕೆ ಸಂಬಂಧಿಸಿದ ಖಾಯಿಲೆಯಿಂದ ಕಷ್ಟಪಡುವಿರಿ. ಜೀರ್ಣ ಕ್ರಿಯೆ ಸರಿಯಾಗದು. ನೀವು ನಿರಾಸೆ ಅನುಭವಿಸುತ್ತೀರಿ. ಎಲ್ಲ ಕೆಲಸಕ್ಕೂ ಭಯವಾಗಲಿದೆ. ಮುಂದೇನು ಎಂಬ ಆತಂಕವೂ ಮನೆಮಾಡುವುದು. ಜನ ಹಾಗೂ ಸಮಯ ಎಲ್ಲವನ್ನೂ ನೋಡಿ ವ್ಯವಹರಿಸಿ. ದುಡುಕಿ ಯಾವುದನ್ನೂ ಮಾಡುವುದು ಬೇಡ. ನಿಮ್ಮ ಸ್ಥಿರಾಸ್ತಿಯ ಮಾರಾಟದಲ್ಲಿ ಏಕಮುಖವಾದ ಅಭಿಪ್ರಾಯ ಬೇಡ.
ವೃಶ್ಚಿಕ ರಾಶಿ: ರವಿಯು ಈ ವಾರದಲ್ಲಿ ಷಷ್ಠ ಸ್ಥಾನಕ್ಕೆ ಬರಲಿದ್ದಾನೆ. ಇದರಿಂದ ನಿಮಗೆ ಶುಭ. ರೋಗಗಳ ಪರಿಹಾರವಾಗಿ ಸ್ವಾಸ್ಥ್ಯದ ಕಡೆ ನಿಮ್ಮ ಶರೀರ ಹಾಗೂ ಮನಸ್ಸು ಹೋಗುವುದು. ವೈರಿಗಳು ನಿಮ್ಮೊಡನೆ ವೈರವನ್ನು ಬಿಡುವರು. ಸಂಧಾನಕ್ಕೆ ಬರುವ ಸಾಧ್ಯತೆಯೂ ಇದೆ. ವ್ಯಾಪಾರಿಗಳಿಗೆ ಹಳೆಯ ಹೂಡಿಕೆಯ ಕಾರಣದಿಂದಾಗಿ ಇಂದು ನಷ್ಟವಾಗುವ ಸಾಧ್ಯತೆ ಇದೆ. ಬರುವ ಸಮಸ್ಯೆಯನ್ನು ಗಂಭೀರವಾಗಿ ಸ್ವೀಕರಿಸುವುದು ಬೇಡ. ಹಿಂದೆ ಕೊಟ್ಟ ಸಾಲವು ಮರಳಿ ಬರುವ ನಿರೀಕ್ಷೆಯಲ್ಲಿ ಇರುವಿರಿ. ನಿಮ್ಮೊಳಗಿನ ಸಣ್ಣ ಶೋಕ ಮೋಹಗಳಿಗೂ ತಿಲಾಂಜಲಿ ದೊರೆಯುವುದು. ಹೊಸ ಉತ್ಸಾಹದಿಂದ ಕಾರ್ಯವನ್ನು ಪ್ರಾರಂಭಿಸುವಿರಿ. ಕಾರ್ಯಕ್ಕಾಗಿ ಹೆಚ್ಚು ಓಡಾಡಬೇಕಾಗುವುದು. ನಿದ್ರಾಹೀನತೆಯಿಂದ ಕಿರಿಕಿರಿ ಉಂಟಾಗುವುದು. ಮಕ್ಕಳ ವರ್ತನೆಯು ಹಿಡಸದೇ ಇರುವುದು.
ಧನು ರಾಶಿ: ಪಂಚಮಕ್ಕೆ ರವಿಯ ಪ್ರವೇಶವಾದ ಕಾಲಕ್ಕೆ ಮನಸ್ಸಿನಲ್ಲಿ ಗೊಂದಲ, ನಕಾರಾತ್ಮಕ ನಿರ್ಧಾರಕ್ಕೆ ಹೆಚ್ಚು ಒತ್ತಿರಲಿದೆ. ಸಾಲವನ್ನು ಮರುಪಾವತಿ ಮಾಡದೇ ಇರುವ ನಿಮ್ಮ ಸಂಬಂಧಿಕರಿಗೆ ಸಾಲ ಕೊಡಬಾರದು. ಅತಿಥಿಗಳ ಆಗಮನದಿಂದ ಮನೆಯಲ್ಲಿ ಆಹ್ಲಾದಕರ ವಾತಾವರಣ. ಈ ಸಮಯಕ್ಕಾಗಿ ಕಾಯುವ ರೋಗಗಳು ಒಮ್ಮೆಲೇ ನಿಮ್ಮನ್ನು ಪ್ರವೇಶಿ ಅಸ್ತವ್ಯಸ್ತ ಮಾಡುವರು. ನಿಮ್ಮ ಕೆಲಸದ ಸ್ಥಳದಲ್ಲಿ ಪ್ರೀತಿ ಮೇಲುಗೈ ಸಾಧಿಸುತ್ತದೆ. ಪ್ರತಿಕೂಲ ವಾತಾವರಣವನ್ನು ನಿಭಾಯಿಸುವ ಕಲೆಯನ್ನು ಗೊತ್ತುಮಾಡಿಕೊಳ್ಳುವಿರಿ. ಬೇಡದಿರುವುದರ ಕಡೆ ಬಯಕೆ ಹೆಚ್ಚುವುದು. ಸಾಲ ಕೊಟ್ಟವರು ನಿಮ್ಮನ್ನು ಏನೂ ಕೇಳುವುದಿಲ್ಲ. ಮಕ್ಕಳು ನಿಮಗೆ ಬೇಕಾದ ಆರ್ಥಿಕ ನೆರವನ್ನು ಕೊಡುವರು. ನಿಮ್ಮ ದುರಭ್ಯಾಸವು ಅತಿಯಾಗಲಿದೆ. ಕಛೇರಿಯಿಂದ ಸ್ವಲ್ಪ ಬಿಡುವು ಮಾಡಿ ಕುಟುಂಬಕ್ಕೆ ಸಮಯ ಕೊಡುವಿರಿ.
ಮಕರ ರಾಶಿ: ರಾಶಿ ಚಕ್ರದ ಹತ್ತನೇ ರಾಶಿಯವರಿಗೆ ಈ ವಾರ ಮಿಶ್ರ ಫಲ. ಚತುರ್ಥದಲ್ಲಿ ಇರುವ ರವಿಯು ಸೊಂಟದ ಕೆಲಭಾಗದಲ್ಲಿ ನೋವು, ಗಾಯಗಳನ್ನು ಮಾಡಿಸುವನು. ನಿಮ್ಮ ಭೋಗದ ಆಸಕ್ತಿ ನೀರೆರೆಚಬಹುದು. ಸುತ್ತಲೂ ನಿಮ್ಮ ಪ್ರಿಯತಮೆಯ ಪ್ರೀತಿಯನ್ನು ಅನುಭವಿಸುತ್ತೀರಿ. ಕುಟುಂಬದಲ್ಲಿ ಕೆಲವು ಸಮಸ್ಯೆಗಳಿರುತ್ತವೆ. ಪ್ರಯಾಣದ ಸಮಯದಲ್ಲಿ ಖರ್ಚು ಹೆಚ್ಚಾಗುತ್ತದೆ. ನೀವು ಕೆಲವು ವ್ಯವಹಾರ ಸಂಪರ್ಕ ಹೊಂದಿದ್ದರೆ, ಅದೃಷ್ಟವು ನಿಮ್ಮೊಂದಿಗೆ ಇರುತ್ತದೆ. ನಿಮ್ಮ ಬಗ್ಗೆ ಕುಟುಂಬದಲ್ಲಿ ಒಳ್ಳೆಯ ಅಭಿಪ್ರಾಯವು ಇರುವುದು. ವೈವಾಹಿಕ ಜೀವನದಲ್ಲಿ ಏರಿಳಿತವು ಆರಂಭವಾಗಬಹದು. ಸಾಲ ಕೊಟ್ಟವರು ನಿಮ್ಮನ್ನು ಶತ್ರುಗಳಂತೆ ಕಾಣುವರು. ನಿಮ್ಮ ಕಾರ್ಯವನ್ನು ಕೆಲವು ಸಹೋದ್ಯೋಗಿಗಳು ಟೀಕಿಸಬಹುದು.
ಕುಂಭ ರಾಶಿ: ರವಿಯು ಈ ವಾರದಲ್ಲಿ ಸ್ಥಾನ ಬದಲಾವಣೆ ಮಾಡಲಿದ್ದು, ತೃತೀಯ ಸ್ಥಾನಕ್ಕೆ ಹೋಗುವನು. ಇದರಿಂದ ಈ ವಾರ ನಿಮಗೆ ಬಯಸಿದ ಉನ್ನತಿಯ ಪ್ರಾಪ್ತಿಯಾಗುವುದು. ಹೇರಳವಾದ ಸಂಪತ್ತು ಸಿಗಲಿದೆ ಅಥವಾ ಸಂಪತ್ತು ಪಡೆಯುವ ದಾರಿಯೂ ಸಿಗುವುದು. ಸಾಮಾಜಿಕ ಕಾರ್ಯಗಳಿಗೆ ಹಾಜರಾಗಲು ಅವಕಾಶಗಳಿರಬಹುದು ಹಾಗೂ ಇದು ನಿಮ್ಮನ್ನು ಪ್ರಭಾವಿ ವ್ಯಕ್ತಿಗಳ ಜೊತೆ ನಿಕಟ ಸಂಪರ್ಕ ಹೊಂದುವಂತೆ ಮಾಡಬಹುದು. ಜೀವನದ ತೊಂದರೆಗಳನ್ನು ನೆಮ್ಮದಿಯಿಂದ ಜೀವನವನ್ನು ಸಾಗಿಸಬಹುದಾಗಿದೆ. ಆತುರಾತುರವಾಗಿ ಯಾವುದನ್ನೂ ಮಾಡಲು ಹೋಗುವುದು ಬೇಡ. ಇನ್ನೊಬ್ಬರು ತೋರುವ ನಿರ್ಲಕ್ಷ್ಯದಿಂದ ನೀವು ಬಹಳ ದುಃಖಿಸುವಿರಿ. ಶತ್ರುಗಳ ಕಾಟದಿಂದ ಮುಕ್ತಿಸಿಗುವುದು.
ಮೀನ ರಾಶಿ: ರಾಶಿ ಚಕ್ರದ ಕೊನೆಯ ರಾಶಿಯವರಿಗೆ ಈ ವಾರ ಅಶುಭ. ಧನ ಸ್ಥಾನದಲ್ಲಿ ರವಿಯು ಪ್ರವೇಶವಾಗಲಿದೆ. ಸಂಪತ್ತು ನಾಶವಾಗುವುದು. ಶತ್ರುಗಳೇ ಅದನ್ನು ಕದ್ದೊಯ್ಯಬಹುದು. ನೀವು ಕೆಲಸದಲ್ಲಿ ಒಂದು ಒಳ್ಳೆಯ ಸುದ್ದಿ ಪಡೆಯಬಹುದು. ಮಾನಸಿಕವಾಗಿ ಸ್ವಲ್ಪ ಮಟ್ಟಿನ ಕಿರಿಕಿರಿಯನ್ನು ಅನುಭವಿಸುವಿರಿ. ಒಂಟಿತನವನ್ನು ಇಷ್ಟಪಡುತ್ತೀರಿ. ಒಳ್ಳೆಯ ಸಮಾಚರ ನಿಮ್ಮನ್ನು ಸೇರಬಹುದು. ನಂಬಿಕೆಯೇ ಸ್ವಭಾವವಾಗಿರುವ ನಿಮ್ಮನ್ನು ಅದು ಕೈ ಬಿಡದು. ಹಠಮಾರಿತನ ಹೆಚ್ಚಾಗುವುದು. ಎಲ್ಲದಕ್ಕೂ ಆಗ್ರಹ ಮಾಡುವ ಬುದ್ಧಿ ಬರುವುದು. ನೀವಾಡುವ ಮಾತಿನ ಮೇಲೆ ನಿಮ್ಮ ಕಾರ್ಯಗಳು ನಿಂತಿರುವುದು. ಯಾವ ವ್ಯವಸ್ಥೆ ವ್ಯಕ್ತಿ ವಸ್ತುಗಳೂ ನಿಮಗೆ ಸುಖವನ್ನು ಕೊಡಲಾರವು ಅಥವಾ ಅವರಿಂದ ಸುಖವೆನಿಸದು. ಪ್ರೇಮವು ನಿಮ್ಮನ್ನು ಉತ್ಸಾಹದಿಂದ ಇಡುವುದು.