ಸಮಗ್ರ ನ್ಯೂಸ್: ರಾಜ್ಯದಲ್ಲಿ ಮದ್ಯ ಪ್ರಿಯರು ಸರ್ಕಾರಕ್ಕೆ ಭಾರೀ ಶಾಕ್ ಕೊಟ್ಟಿದ್ದಾರೆ. ಮೂರು ಮೂರು ಬಾರಿ ಮದ್ಯದ ಬೆಲೆಯನ್ನು ಏರಿಕೆ ಮಾಡಿ ಅಬಕಾರಿ ಆದಾಯ ಸಂಗ್ರಹ ಮಾಡಿಕೊಳ್ಳುವ ನಿರೀಕ್ಷೆಯಲ್ಲಿದ್ದ ಸರ್ಕಾರಕ್ಕೆ ಇದೀಗ ಭಾರೀ ಆಘಾತ ಎದುರಾಗಿದೆ. ಮದ್ಯ ಬೆಲೆಯು ಕಳೆದ ಒಂದೂವರೆ ವರ್ಷದ ಅವಧಿಯಲ್ಲೇ ಮೂರು ಬಾರಿ ಹೆಚ್ಚಳವಾಗಿತ್ತು. ಒಂದರ ಹಿಂದೆ ಒಂದು ವಸ್ತುಗಳ ಬೆಲೆ ಏರಿಕೆಯ ನಂತರ ಮದ್ಯದ ಬೆಲೆ ಏರಿಕೆಯು
ಜನ ಸಾಮಾನ್ಯರಿಗೆ ಭಾರೀ ಶಾಕ್ ಕೊಟ್ಟಿತ್ತು. ಇದೀಗ ಆ ಶಾಕ್ ಅನ್ನು ಮದ್ಯ ಪ್ರಿಯರು ಸರ್ಕಾರಕ್ಕೆ ಹಾಗೂ ಮದ್ಯ ಮಾರಾಟ ಕಂಪನಿಗಳಿಗೆ ಹಸ್ತಾಂತರಿಸಿದ್ದಾರೆ.
ಕಳೆದ ಎರಡು ವರ್ಷಗಳಿಂದಲೂ ಅಬಕಾರಿ ಇಲಾಖೆಗೆ ಟಾರ್ಗೆಟ್ ರೀಚ್ ಆಗುವುದಕ್ಕೆ ಆಗುತ್ತಿಲ್ಲ. 2024 – 2025ನೇ ಸಾಲಿನಲ್ಲೂ ಸರ್ಕಾರಕ್ಕೆ ಮದ್ಯದಿಂದ ನಿರೀಕ್ಷಿತ ಆದಾಯ ಬಂದಿಲ್ಲ. ಬರೋಬ್ಬರಿ 2,995 ಕೋಟಿ ರೂ ಸಂಗ್ರಹದಲ್ಲಿ ಖೋತಾ ಆಗಿದೆ ಎಂದು ಹೇಳಲಾಗಿದೆ. ಇದು ಸರ್ಕಾರಕ್ಕೆ ಮದ್ಯ ಪ್ರಿಯರು ಕೊಟ್ಟಿರುವ ಭರ್ಜರಿ ಶಾಕ್. ಮದ್ಯ ಮಾರಾಟ ಪ್ರಮಾಣ ತುಸು ಹೆಚ್ಚಳವಾಗಿದೆ.
ಆದರೆ, ಸರ್ಕಾರಕ್ಕೆ ಹೆಚ್ಚಾಗಿ ಆದಾಯ ಬರುತ್ತಿದ್ದ ಬಿಯರ್ ಮಾರಾಟವೇ ಕುಸಿತ ಕಂಡಿದೆ. ಸರ್ಕಾರವು ಕಳೆದ ಒಂದೂವರೆ ವರ್ಷದ ಅವಧಿಯಲ್ಲಿ ಅಂದರೆ 18 ತಿಂಗಳ ಅವಧಿಯಲ್ಲಿ ಬರೋಬ್ಬರಿ ಮೂರು ಬಾರಿ ಬಿಯರ್ ಮಾರಾಟ ಬೆಲೆಯನ್ನು ಹೆಚ್ಚಳ ಮಾಡಿತ್ತು.
ಇದರಿಂದ ಬಿಯರ್ ಮಾರಾಟವು ಭಾರೀ ಕುಸಿತ ಕಂಡಿದ್ದು. ಲಾಭದ ನಿರೀಕ್ಷೆಯಲ್ಲಿದ್ದ ಸರ್ಕಾರಕ್ಕೆ ಆಘಾತ ಎದುರಾಗಿದೆ. ಬಿಯರ್ ಮಾರಾಟ ಕುಸಿತ ಕಾಣುವುದಕ್ಕೆ ರಾಜ್ಯ ಸರ್ಕಾರವು ಬಿಯರ್ ಬೆಲೆಯನ್ನು ನಿರಂತರವಾಗಿ ಹೆಚ್ಚಿಸಿದ್ದೇ ಕಾರಣ ಅಂತ ಹೇಳಲಾಗಿದೆ. 2023 -2024ನೇ ಸಾಲಿಗೆ ಹೋಲಿಕೆ ಮಾಡಿದರೆ, 2024 – 2025ರ ಮಾರ್ಚ್ ಅವಧಿಯವರೆಗೆ ಬಿಯರ್ ಮಾರಾಟ ಕುಸಿತ ಕಂಡಿದೆ. ಬೆಲೆ ಏರಿಕೆ ಮಾಡಿ ಅಬಕಾರಿ ಆದಾಯದ ನಿರೀಕ್ಷೆಯಲ್ಲಿದ್ದ ಸರ್ಕಾರಕ್ಕೆ ಮದ್ಯ ಪ್ರಿಯರು ಸೆಡ್ಡು ಹೊಡೆದಿದ್ದಾರೆ.
ಈ ರೀತಿ ಇರುವಾಗಲೇ ಬಿಯರ್ ಮಾರಾಟ ಕಂಪನಿಗಳು ರಾಜ್ಯ ಸರ್ಕಾರಕ್ಕೆ ಪತ್ರ ಬರೆದು. ದಯವಿಟ್ಟು ಯಾವುದೇ ಕಾರಣಕ್ಕೂ ಮದ್ಯದ ಮೇಲೆ ಅದರಲ್ಲೂ ಮುಖ್ಯವಾಗಿ ಬಿಯರ್ ಬೆಲೆ ಏರಿಕೆ ಮಾಡಬೇಡಿ. ಈಗಾಗಲೇ ಬಿಯರ್ ಬೆಲೆ ಹೆಚ್ಚಳವಾಗಿರುವುದರಿಂದ ಬಿಯರ್ ಮಾರಾಟದಲ್ಲಿ ಭಾರೀ ಕುಸಿತ ಕಂಡಿದೆ ಎಂದು ಸರ್ಕಾರಕ್ಕೆ ಪತ್ರ ಬರೆದು ಮನವಿ ಮಾಡಿದ್ದಾರೆ.