ಸಮಗ್ರ ನ್ಯೂಸ್: ಏಪ್ರಿಲ್ 12, 2025 ರಂದು ಸಂಭವಿಸುವ ವಿಶಿಷ್ಟ ಹುಣ್ಣಿಮೆಯೆಂದರೆ ಗುಲಾಬಿ ಚಂದ್ರ. ದೂರದರ್ಶಕದ ಅಗತ್ಯವಿಲ್ಲದೆ, ಭಾರತದಾದ್ಯಂತ ಜನರು ತಮ್ಮ ಮನೆಗಳು, ಬಾಲ್ಕನಿಗಳು ಅಥವಾ ಛಾವಣಿಗಳಿಂದ ಅದನ್ನು ವೀಕ್ಷಿಸಬಹುದು. ಹಾಗಾದರೆ ಈ ಪಿಂಕ್ ಮೂನ್ ಯಾಕೆ ಕಂಡುಬರುತ್ತದೆ? ನೋಡೋಣ…
ಚಂದ್ರ ಭೂಮಿಯ ಏಕೈಕ ಉಪಗ್ರಹ, ಹಾಗೆ ಚಂದ್ರನಿಗೂ ಭೂಮಿಯ ಚಲನೆಗೂ ಹಾಗೆ ಭೂಮಿ ಮೇಲೆ ನಡೆಯುವ ಹಲವು ವಿದ್ಯಮಾನಗಳಿಗೆ ನಿಕಟ ಸಂಬಂಧವಿದೆ. ಚಂದ್ರನ ಚಲನೆ ಹಾಗೆ ಚಂದ್ರನ ಚಲನೆಯ ಆಧಾರದ ಮೇಲೆ ಭೂಮಿಯಲ್ಲಿ ಹಲವು ಕ್ರಿಯೆಗಳು ನಿರ್ಧರಿತವಾಗುವುದು ನೋಡಬಹುದು.
ಏಪ್ರಿಲ್ 12ರ ರಾತ್ರಿ 8:22ರ ಸುಮಾರುಗೆ ಪಿಂಕ್ ಮೂನ್ ವಿದ್ಯಮಾನ ನಡೆಯಲಿದೆ. ಹುಣ್ಣಿಮೆಯ ದಿನ ನಡೆಯುವ ಈ ವಿದ್ಯಮಾನವನ್ನು ಎಲ್ಲರು ಕಣ್ತುಂಬಿಕೊಳ್ಳಬಹುದು. ಈ ಹುಣ್ಣಿಮೆಯು ಚಂದ್ರನು ಭೂಮಿಯಿಂದ ಅತ್ಯಂತ ದೂರದಲ್ಲಿದ್ದಾಗ ಸಂಭವಿಸುತ್ತದೆ. ಆದ್ದರಿಂದ ಇದನ್ನು ಮೈಕ್ರೋಮೂನ್ ಎಂದು ಕರೆಯಲಾಗಿದೆ. ಹೀಗಾಗಿ ಮೈಕ್ರೋಮೂನ್ ಸೂಪರ್‌ಮೂನ್‌ಗಿಂತ ಚಿಕ್ಕದಾಗಿಯೂ ಹಾಗೆ ಕಡಿಮೆ ಬೆಳಕನ್ನು ಹೊಂದಿರುತ್ತದೆ. ಹೀಗಾಗಿ ಏಪ್ರಿಲ್ 12ರಂದು ಮೈಕ್ರೋ ಮೂನ್ ನೋಡಬಹುದು.
ಅಚ್ಚರಿ ಏನೆಂದರೆ ಚಂದ್ರನು ಈ ದಿನ ಸಂಪೂರ್ಣ ನಿಮಗೆ ಗುಲಾಬಿ ಬಣ್ಣದಲ್ಲಿ ಕಾಣಿಸುವುದಿಲ್ಲ. ನಿಗದಿತ ಗಾತ್ರಕ್ಕಿಂತ ಕಡಿಮೆ ಹಾಗೂ ದೂರದಲ್ಲಿ ಚಂದ್ರನ ಸ್ಥಾನ ಇರುವ ಕಾರಣ ಮಂದವಾಗಿ ಕಾಣಿಸಲಿದೆ. ಇದು ಗುಲಾಬಿ ಬಣ್ಣ ಹೊಂದಿರುವಂತೆ ಭಾಸವಾಗಲಿದೆ. ಓಲ್ಡ್ ಫಾರ್ಮರ್ಸ್ ಅಲ್ಮಾನಾಕ್ ಪ್ರಕಾರ ಪೂರ್ವ ಉತ್ತರ ಅಮೆರಿಕಾದಲ್ಲಿ ಬೇಸಿಗೆ ಆರಂಭದ ಸಮಯದಲ್ಲಿ ಅರಳುವ ಗುಲಾಬಿ ಹೂವುಗಳ ಕಾಲದಲ್ಲಿ ಈ ಮೈಕ್ರೋಮೂನ್ ಉಂಟಾಗುವುದರಿಂದ ಪಿಂಕ್ ಮೂನ್ ಎಂಬ ಹೆಸರು ಇಡಲಾಗಿದೆ. ಈ ಕಾರಣ ಹೊರತುಪಡಿಸಿ ಪಿಂಕ್ ಮೂನ್ ಎಂಬ ಹೆಸರಿಗೆ ಬೇರೆ ಯಾವುದೇ ಕಾರಣಗಳಿಲ್ಲ. ಅಂದು ಚಂದ್ರ ಪಿಂಕ್ ಬಣ್ಣದಲ್ಲಿ ಕಾಣಿಸುವುದಿಲ್ಲ.
ಗುಲಾಬಿ ಚಂದ್ರನನ್ನು ಏಪ್ರಿಲ್ 12ರ ರಾತ್ರಿ ಹಾಗೂ 13ರ ರಾತ್ರಿಯಲ್ಲಿ ನೋಡಬಹುದು. ಆದ್ರೆ ಏಪ್ರಿಲ್ 12ರ ರಾತ್ರಿ 8:22ಕ್ಕೆ ತನ್ನ ಪರಿಪೂರ್ಣ ಮಟ್ಟ ತಲುಪಲಿದೆ. ಈ ಸಮಯದಲ್ಲಿ ಚಂದ್ರನು ಭೂಮಿಯಿಂದ ಬಹಳ ದೂರದಲ್ಲಿರಲಿದ್ದಾನೆ. ಆದ್ರೆ ಈ ಏಪ್ರಿಲ್ ಪಿಂಕ್ ಮೂನ್‌ಗೆ ಹಲವು ಹೆಸರುಗಳಿರುವುದು ನೋಡಬಹುದು. ಈ ಹುಣ್ಣಿಮೆಯನ್ನು ಬ್ರೇಕಿಂಗ್ ಐಸ್ ಮೂನ್, ಹೆಬ್ಬಾತುಗಳು ಮೊಟ್ಟೆ ಇಡುವ ಚಂದ್ರ, ಬಾತುಕೋಳಿಗಳು ಹಿಂತಿರುಗುವ ಚಂದ್ರ ಮತ್ತು ಕಪ್ಪೆ ಚಂದ್ರ ಎಂಬ ವಿಚಿತ್ರ ಹೆಸರುಗಳಿಂದಲೂ ಕರೆಯುತ್ತಾರೆ.