ಸಮಗ್ರ ನ್ಯೂಸ್: ಆಭರಣ ಪ್ರಿಯರಿಗೆ ಬಿಗ್ ಶಾಕ್ ಎದುರಾಗಿದ್ದು, ಒಂದೇ ಚಿನ್ನದ ಬೆಲೆಯಲ್ಲಿ ಬರೋಬ್ಬರಿ 6250 ರೂ. ಏರಿಕೆಯಾಗಿ, 10 ಗ್ರಾಂ ಚಿನ್ನದ ಬೆಲೆ 96,450 ರೂ. ತಲುಪಿದೆ.
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ 10 ಗ್ರಾಂ ಚಿನ್ನದ ಒಂದೇ ದಿನ ರು.ಏರಿಕೆಯಾಗಿ, 96,450 ರು.ಗೆ ತಲುಪಿದೆ. ಇದು ಸಾರ್ವಕಾಲಿಕ ದಾಖಲೆ ಬರೆದಿದೆ. ಸ್ಥಳೀಯ ಆಭರಣ ವ್ಯಾಪಾರಿಗಳು ಮತ್ತು ಚಿಲ್ಲರೆ ವ್ಯಾಪಾರಿಗಳಿಂದ ಚಿನ್ನಕ್ಕೆ ಭಾರೀ ಬೇಡಿಕೆ ಸೃಷ್ಟಿಯಾದ ಕಾರಣ ದರದಲ್ಲಿ ಏರಿಕೆಯಾಗಿದೆ.
ಬುಧವಾರ(ಏ.09) ದಂದು ಶೇ.99.9 ಶುದ್ಧತೆಯ ಗೋಲ್ಡ್ ಪ್ರತಿ 10 ಗ್ರಾಂಗೆ 90,200 ರೂ. ಇತ್ತು. ನಾಲ್ಕು ದಿನಗಳ ತೀವ್ರ ಕುಸಿತದ ನಂತರ ಚೇತರಿಸಿಕೊಂಡಿದ್ದು, 99.5 ಪ್ರತಿಶತ ಶುದ್ಧತೆಯ ಚಿನ್ನವು ರೂ 6,250 ರಷ್ಟು ಏರಿಕೆಯಾಗಿ 10 ಗ್ರಾಂಗೆ 96,000 ರೂ.ಗೆ ಸಾರ್ವಕಾಲಿಕ ಗರಿಷ್ಠ ಮಟ್ಟವನ್ನು ತಲುಪಿದೆ. ಪ್ರತಿ 10 ಗ್ರಾಂಗೆ 89,750 ರೂ. ಹಿಂದಿನ ಬೆಲೆ ಇತ್ತು.
ಬೆಳ್ಳಿಯ ಬೆಲೆಗಳು ಸಹ ಪ್ರತಿ ಕೆಜಿಗೆ ರೂ 2,300 ರಿಂದ ರೂ 95,500 ರಷ್ಟು ಏರಿಕೆಯನ್ನು ದಾಖಲಿಸಿದೆ. ಹಿಂದಿನ ಮಾರುಕಟ್ಟೆಯ ಬೆಳ್ಳಿ ಪ್ರತಿ ಕೆಜಿಗೆ 93,200 ರೂ. ಇತ್ತು.