ಮಂಗಳೂರು: ಪಿಎಸ್ಐ ಮಗನಿಂದ ಅಪ್ರಾಪ್ತೆ ಮೇಲೆ ಅತ್ಯಾಚಾರ| ಆರೋಪಿಯ ಬಂಧನ

ಸಮಗ್ರ ನ್ಯೂಸ್: ರಾಜ್ಯದಲ್ಲಿ ಮತ್ತೊಂದು ಪೈಶಾಚಿಕ ಕೃತ್ಯ ನಡೆದಿದ್ದು, ಪೊಲೀಸ್ ಸಬ್ ಇನ್ಸ್ಪೆಕ್ಟರ್ ಮಗನಿಂದಲೆ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ನಡೆದಿದ್ದು, ದಕ್ಷಿಣ ಕನ್ನಡ ಜಿಲ್ಲೆಯ ಮಹಿಳಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಒಂದು ಘಟನೆ ನಡೆದಿದೆ.

Ad Widget ... ..

17 ವರ್ಷದ ಕಾಲೇಜು ವಿದ್ಯಾರ್ಥಿನಿ ಮೇಲೆ PSI ಮಗ ಅತ್ಯಾಚಾರ ಎಸಗಿದ್ದಾನೆ. ವಿದ್ಯಾರ್ಥಿನಿ ಮನೆಯಲ್ಲಿ ಒಬ್ಬಳೇ ಇದ್ದಾಗ ಈ ಒಂದು ಕೃತ್ಯ ಎಸಗಿದ್ದಾನೆ. ಮನೆಗೆ ನೀರು ಕೇಳುವ ನೆಪದಲ್ಲಿ ಹೋಗಿ ಇನ್ಸ್ಪೆಕ್ಟರ್ ಮಗ ಅತ್ಯಾಚಾರ ಎಸಗಿದ್ದಾನೆ. ಅಲ್ಲದೇ ಬಾಲಕಿಗೆ ಬೆದರಿಸಿ ಏಳೆಂಟು ಬಾರಿ ನಿರಂತರವಾಗಿ ಅತ್ಯಾಚಾರ ಮಾಡಿದ್ದಾನೆ ಎನ್ನಲಾಗಿದೆ.

Ad Widget

ದಕ್ಷಿಣ ಕನ್ನಡ ಜಿಲ್ಲೆಯ ಪಿಎಸ್‌ಐ ಒಬ್ಬರ ಪುತ್ರ ಮಂಜುನಾಥ್ ಎನ್ನುವ ಕಾಮುಕನಿಂದ ಈ ಕೃತ್ಯ ನಡೆದಿದೆ. ಬಾಲಕಿ ಗರ್ಭಿಣಿಯಾದ ಬಳಿಕ ಈ ಒಂದು ಪ್ರಕರಣ ಬೆಳಕಿಗೆ ಬಂದಿದೆ. ಘಟನೆ ಸಂಬಂಧ ಪೋಕ್ಸೋ ಕೇಸ್ ದಾಖಲಿಸಿ, ಇದೀಗ ಪೊಲೀಸರು ಆರೋಪಿ ಮಂಜುನಾಥನನ್ನು ಅರೆಸ್ಟ್ ಮಾಡಿದ್ದಾರೆ.

Leave a Comment

Your email address will not be published. Required fields are marked *