ಐತಿಹಾಸಿಕ ವಕ್ಫ್ ತಿದ್ದುಪಡಿ ಮಸೂದೆಗೆ ರಾಷ್ಟ್ರಪತಿ ಅಂಕಿತ

ಸಮಗ್ರ ನ್ಯೂಸ್: ಸಂಸತ್ತಿನ ಉಭಯ ಸದನಗಳಲ್ಲಿ ಅಂಗೀಕಾರಗೊಂಡ ಐತಿಹಾಸಿಕ ವಕ್ಫ್ ಮಸೂದೆಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಶನಿವಾರ ರಾತ್ರಿ ಒಪ್ಪಿಗೆ ನೀಡಿದ್ದು, ಕಾಯ್ದೆ ಜಾರಿಗೆ ಅಧಿಸೂಚನೆಯೊಂದೇ ಬಾಕಿ ಇದೆ.

Ad Widget .

ಸುಮಾರು 17 ಗಂಟೆಗಳ ಚರ್ಚೆಯ ನಂತರ, ಶುಕ್ರವಾರ ಮುಂಜಾನೆ ರಾಜ್ಯಸಭೆಯು ಮಸೂದೆಯನ್ನು ಪರವಾಗಿ 128 ಮತಗಳು ಮತ್ತು ವಿರುದ್ಧ 95 ಮತಗಳೊಂದಿಗೆ ಅಂಗೀಕರಿಸಿತು.

Ad Widget . Ad Widget .

ಇನ್ನು ಸರ್ಕಾರದ ಅಧಿಸೂಚನೆ ಹೊರಬಿ ದ್ದರೆ ಕಾನೂನು ರೂಪದಲ್ಲಿ ಇದು ಜಾರಿಗೆ ಬರಲಿದೆ. ಅಧಿಸೂಚನೆ ಶೀಘ್ರದಲ್ಲೇ ಪ್ರಕಟವಾಗಲಿದೆ ಎಂದು ಮೂಲಗಳು ಹೇಳಿವೆ. ಹೊಸ ಕಾನೂನನ್ನು ಕಾಂಗ್ರೆಸ್, ಎಐಎಂಐಎಂ ಮತ್ತು ಆಮ್ ಆದ್ಮ ಪಕ್ಷ (ಎಎಪಿ) ಸುಪ್ರೀಂ ಕೋರ್ಟ್‌ನಲ್ಲಿ ಪ್ರತ್ಯೇಕ ಅರ್ಜಿಗಳ ಮೂಲಕ ಪ್ರಶ್ನಿಸಿವೆ. ಆದರ ಅರ್ಜಿ ವಿಚಾರಣೆಗೆ ಇನ್ನೂ ಸಮಯವನ್ನು ಸುಪ್ರೀಂ ಕೋರ್ಟ್ ನಿಗದಿಪಡಿಸಿಲ್ಲ. ಸರ್ಕಾರಿ ಹಾಗೂ ಇತರ ಆಸ್ತಿಪಾಸ್ತಿಗಳ ಮೇಲೆ ಮನಬಂದಂತೆ ಹಕ್ಕು ಸಾಧಿಸುವ ಅಧಿಕಾರ ಹೊಂದಿದ್ದ ಆರೋಪ ಹೊತ್ತಿದ್ದ ವಕ್ಸ್ ಮಂಡಳಿಗೆ ಲಗಾಮು ಹಾಕಲು ವಕ್ಸ್ ತಿದ್ದುಪಡಿ ಮಸೂದಗೆ ಇತ್ತೀಚೆಗೆ ಮ್ಯಾರಥಾನ್ ಚರ್ಚೆ ಬಳಿಕ ಸಂಸತ್ತು ಅಂಗೀಕಾರ ನೀಡಿತ್ತು.

Leave a Comment

Your email address will not be published. Required fields are marked *