ಸಮಗ್ರ ನ್ಯೂಸ್: ಕೇತಗಾಹಳ್ಳಿಯಲ್ಲಿ ಸರ್ಕಾರಿ ಜಮೀನು ಒತ್ತುವರಿ ಆರೋಪದಲ್ಲಿ ಇಷ್ಟು ದಿನ ಸೈಲೆಂಟ್ ಆಗಿದ್ದ ಮಾಜಿ ಸಿಎಂ, ಕೇಂದ್ರ ಸಚಿವ ಎಚ್.ಡಿ ಕುಮಾರಸ್ವಾಮಿ ಇದೀಗ ಏಕಾಏಕಿ ಬೆಂಗಳೂರಿನಲ್ಲಿ ಸುದ್ದಿ ಗೋಷ್ಠಿ ನಡೆಸಿ ಕಿಡಿಕಾರಿದ್ದಾರೆ.
ನನಗೆ ನೊಟೀಸ್ ಕೊಡುವುದು ಇರಲಿ. ಕೆಳಹಂತದ ಅಧಿಕಾರಿಗಳನ್ನ ನಾನು ಪ್ರಶ್ನೆ ಮಾಡಲ್ಲ. ಎಸ್ ಐಟಿ ತಂಡ ರಚಿಸಿ ತನಿಖೆ ಮಾಡಿಸಿದ್ದಾರೆ. ಇದು ಇತಿಹಾಸದಲ್ಲೇ ಪ್ರಥಮ. ಈ ಸರ್ಕಾರಕ್ಕೆ ನಾನು ಸವಾಲು ಹಾಕುವುದಕ್ಕೆ ಬಂದಿದ್ದೇನೆ. ಇಂದಿನಿಂದ ರಾಜ್ಯ ಸರ್ಕಾರದ ವಿರುದ್ಧ ನನ್ನ ಯುದ್ದ ಆರಂಭ ಮಾಡುತ್ತಿದ್ದೇನೆ ಎಂದು ಘೋಷಣೆ ಮಾಡಿದರು. ಈ ಮೂಲಕ ಕುಮಾರಸ್ವಾಮಿ ಹೇಳಿಕೆ ರಾಜ್ಯ ರಾಜಕಾರಣದಲ್ಲಿ ಸಂಚಲನಕ್ಕೆ ಕಾರಣವಾಗಿದೆ.
ರಾಜ್ಯದಲ್ಲಿ ನಡೆಯುತ್ತಿರುವ ಈ ಸರ್ಕಾರದಲ್ಲಿ ಅಕ್ರಮಗಳು,ದರೋಡೆ ಕೆಲಸ ನಡೆಯುತ್ತಿದೆ. ಗಜನಿ ಮಹಮ್ಮದ್ ಸೇರಿ ಹಿಂದೆ ಮೂರು ಜನ ಪ್ರಮುಖರು ಇದ್ರು. ಅಂತ ವ್ಯಕ್ತಿಗಳು ಈ ಸರ್ಕಾರದಲ್ಲಿ ಇದ್ದಾರೆ. ಈ ಸರ್ಕಾರ ಬಗ್ಗೆ ಮಾತಾಡಿದ್ರೆ ನಿರಾಸೆ ಆಗಬಹುದು. ಹನಿಟ್ರ್ಯಾಪ್, ಸುಪಾರಿ ಕೊಲೆ ಬಗ್ಗೆ ಚರ್ಚೆ ಆಗುತ್ತಿದೆ. ಎಂತಹ ಪರಿಸ್ಥಿತಿಗೆ ಬಂದಿದ್ದಾರೆ. ನಾನು ಹೇಳುವ ವಿಷಯಗಳನ್ನ ಜನರ ಮುಂದೆ ಇಡಬಹುದು. ಈ ಸರ್ಕಾರಕ್ಕೆ ನಾನು ಸವಾಲು ಹಾಕಲು ಬಂದಿದ್ದೇನೆ. ಸರ್ಕಾರದ ವಿರುದ್ಧ ನನ್ನ ಯುದ್ದ ಆರಂಭ ಮಾಡುತ್ತಿದ್ದೇನೆ ಎಂದು ಸಿದ್ದರಾಮಯ್ಯ ಸರ್ಕಾರಕ್ಕೆ ಎಚ್ಚರಿಕೆ ಸಂದೇಶ ರವಾನಿಸಿದರು.
ಸಾಯಿವೆಂಕಟೇಶ್ವರ ವಿಚಾರದಲ್ಲಿಕೇಸ್ ಹಾಕಿ ನಮ್ಮ ಕುಟುಂಬದ್ದು ಏನಿದೆ ಅಂತ ಹುಡುಕಿದ್ರು. ಹಿಂದೆ ಯಡಿಯೂರಪ್ಪ ಏನಿದೆ ಅಂತ ಹುಡುಕಿಸಿದ್ರು. ಆದರೆ ಏನೂ ಸಿಕ್ಕಿರಲಿಲ್ಲ. ಆಗ ನಾಲ್ಕು ಕೇಸ್ ನನ್ನ ಮೇಲೆ ಹಾಕಿಸಿದ್ರು. ಸಾಯಿವೆಂಕಟೇಶ್ವರ, ಜಂತಕಲ್ ಮೈನಿಂಗ್ ಹಾಕಿದ್ರು. ಯಡಿಯೂರಪ್ಪನವರು ಸಿಎಂ ಆಗಿದ್ದಾಗ ಹಾಕಿದ್ರು. ಇವತ್ತಿಗೆ 17 ವರ್ಷ ಆಗಿದೆ. ಒಂದು ತನಿಖೆ ನಡೆಸುವುದಕ್ಕೆ ಆಗಿಲ್ಲ. ಈಗ ಸ್ಪೈಸ್ ಜೆಟ್ ಸ್ಪೀಡ್ ನಲ್ಲಿ ತನಿಖೆ ಮಾಡಿದ್ರು. ವೈಯುಕ್ತಿಕ ದ್ವೇಷಕ್ಕಾಗಿ ನಾನು ಹೋರಾಟ ಮಾಡಿಲ್ಲ. ನನ್ನ ಹೆಂಡತಿ ತಮ್ಮನ ಮೇಲೆ ಕೇಸ್ ಹಾಕಿಸಿದ್ರು ಎಂದು ಡೆಪ್ಯೂಟಿ ಸಿಎಂ ಅವರು ಹೇಳಿದ್ರು. ನನ್ನ ಹತ್ತಿರ ಟನ್ ಗಟ್ಟಲೆ ದಾಖಲೆಗಳಿವೆ. ನನ್ನನ್ನ ನೀವು ಕೆಣಕಬೇಡಿ. ಬಳ್ಳಾರಿಗೆ ಹೋಗಿಲ್ಲ ಎಂದು ಡಿಸಿಎಂ ಹೇಳುತ್ತಾರೆ. ಎಷ್ಟು ಕಂಪನಿಗಳನ್ಮನೀವು ಇಟ್ಕೊಂಡಿದ್ರಿ. ಐರನ್ ಮಡಬೇಕೆಂದು ಎಷ್ಟು ಅರ್ಜಿ ಬರೆದಿದ್ರಿ. ಎಷ್ಟು ಐರನ್ ಲೂಟಿ ಹೊಡೆದ್ರಿ. ಆ ದಾಖಲೆಗಳು ನನ್ನ ಬಳಿ ಇವೆ ಎಂದು ಎಚ್ಚರಿಕೆ ನೀಡಿದರು.