ಸಮಗ್ರ ನ್ಯೂಸ್: ಯುವಕನೊಬ್ಬ ಯುವತಿಯ ಮೊಬೈಲ್ ನಂಬರ್ ಪಡೆದು ರಾತ್ರೀ ಇಡೀ ಅಶ್ಲೀಲ ಮಸೇಜ್ ಮಾಡಿ ಮರುದಿನ ಭೇಟಿಯಾಗಲು ಬಂದ ವೇಳೆ ಸ್ಥಳೀಯರು ಸರಿಯಾಗಿ ಧರ್ಮದೇಟು ನೀಡಿ ಪೊಲೀಸರ ವಶಕ್ಕೆ ನೀಡಿದ ಘಟನೆ ವಿಟ್ಲ ಹೊರವಲಯದ ಕುಡ್ತಮುಗೇರು ಎಂಬಲ್ಲಿ ನಡೆದಿದೆ.
ಧರ್ಮದೇಟು ತಿಂದವನನ್ನು ಕನ್ಯಾನ ಸಮೀಪದ ಪಂಜಾಜೆ ನಿವಾಸಿ ಸವಾದ್(22)ಎಂದು ತಿಳಿದುಬಂದಿದೆ. ಬೆಂಗಳೂರಿನ ಕೋರಮಂಗಲದ ಡ್ರೆಸ್ ಅಂಗಡಿಯಲ್ಲಿ ಸೇಲ್ಸ್ ಮ್ಯಾನ್ ಆಗಿರುವ ಸವಾದ್ ರಂಝಾನ್ ಹಬ್ಬಕ್ಕೆ ಬಂದಿದ್ದ. ಇದೇ ಸಂದರ್ಭ ಈತನ ಅದೃಷ್ಟ ಕೆಟ್ಟಿದ್ದ ಕಾರಣ ಮಾಡಬಾರದ್ದನ್ನು ಮಾಡಲು ಹೋಗಿ ಪೊಲೀಸರ ಅತಿಥಿಯಾಗಿದ್ದಾನೆ.
ಸವಾದ್ ಯುವತಿಯೋರ್ವಳ ನಂಬರ್ ಕೇಳಿದ್ದ ಆದರೆ ಆಕೆ ಪರಿಚಯದ ಯುವಕನ ಮೊಬೈಲ್ ನಂಬರ್ ಕೊಟ್ಟಿದ್ದಳು. ಯುವತಿಯ ನಂಬರ್ ಎಂದು ತಿಳಿದಿದ್ದ ಆ ಯುವಕ ರಾತ್ರಿಯಿಡಿ ಆಶ್ಲೀಲ ಸಂದೇಶ ಕಳುಹಿಸಿದ್ದಾನೆ. ಅಲ್ಲದೇ ತಡರಾತ್ರಿ ಬಳಿಕ ಬಟ್ಟೆ ಬಿಚ್ಚಿ ವೀಡಿಯೋ ಕಾಲ್ ಮಾಡುವಂತೆ ಪದೇ ಪದೇ ಮೆಸೇಜ್ ಮೂಲಕ ಒತ್ತಾಯಿಸಿ ಮಾನಸಿಕ ಕಿರುಕುಳ ನೀಡಿದ್ದಾನೆ. ಆ ಬಳಿಕ ಭೇಟಿಯಾಗುವ ಇಂಗಿತ ವ್ಯಕ್ತಪಡಿಸಿದ್ದ ಸವಾದ್ ಭೇಟಿಯಾಗಲೆಂದು ಕೆಲಸಕ್ಕೆ ರಜಾ ಹಾಕಿ ಕುಡ್ತಮುಗೇರು ಎಂಬಲ್ಲಿಗೆ ಬಂದಾಗ ಸ್ಥಳೀಯರು ಆತನನ್ನು ಹಿಡಿದು ವಿಟ್ಲ ಠಾಣಾ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕಾಗಮಿಸಿ ಪೊಲೀಸರು ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.