ವಾಯುಭಾರ ಕುಸಿತ| ಎ.8ರವರೆಗೆ ರಾಜ್ಯದ ಈ ಜಿಲ್ಲೆಗಳಲ್ಲಿ ಭಾರೀ ಮಳೆ‌ ಸಾಧ್ಯತೆ| ಎಲ್ಲೊ ಅಲರ್ಟ್ ಘೋಷಣೆ

ಸಮಗ್ರ ನ್ಯೂಸ್: ಸಮುದ್ರದ ಎರಡು ಭಾಗದಲ್ಲಿ ವಾಯುಭಾರ ಕುಸಿತ ಉಂಟಾಗಿದ್ದು, ಸ್ಪಷ್ಟ ಚಂಡಮಾರುತ ಪರಿಚಲನೆ ದಾಖಲಾಗಿದೆ. ಈ ಕಾರಣದಿಂದ ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಮುಂದಿನ 05 ದಿನ ಏಪ್ರಿಲ್ 8ರವರೆಗೆ ಗುಡುಗು ಮಿಂಚು, ಬಿರುಗಾಳಿ ಸಹಿತ ಭಾರೀ ಮಳೆ ಅಬ್ಬರಿಸಲಿದೆ.

Ad Widget .

ರಾಜ್ಯದಲ್ಲಿ ಕೆಲವೆಡೆ ಬಿಸಿಲಿನ ತಾಪ ಹೆಚ್ಚಾಗಿತ್ತು, ಈ ಮಧ್ಯೆ ಬದಲಾದ ಹವಾಮಾನ ವೈಪರಿತ್ಯಗಳ ಪ್ರಭಾವದಿಂದಾಗಿ ಸಾಧಾರಣದಿಂದ ಭಾರೀ ಮಳೆ ಆರ್ಭಟಿಸಲಿದೆ. ಪೂರ್ವ ಮುಂಗಾರು ಮಳೆ ಮತ್ತಷ್ಟು ಚುರುಕಾಗಲಿದೆ. ಕೆಲವೆಡೆ ಗುಡುಗು, ಮಿಂಚು ಸಹಿತ ಧಾರಾಕಾರ ಮಳೆ ಅಬ್ಬರಿಸಲಿದೆ. ಸದರಿ ವರ್ಷ ಈವರೆಗೆ ಬಂದ ಪೂರ್ವ ಮುಂಗಾರು ಪೈಕಿ ಮುಂದಿನ 03 ದಿನ ಅಬ್ಬರಿಸುವ ಮಳೆ, ಅತ್ಯಧಿಕ ಮಳೆ ಎಂದು ಹೇಳಲಾಗಿದೆ.

Ad Widget . Ad Widget .

ಲಕ್ಷದ್ವೀಪ ವ್ಯಾಪ್ತಿಯ ಸಮುದ್ರ 0.9 ಕಿಲೋ ಮೀಟರ್ ಎತ್ತರದಲ್ಲಿ ಹಾಗೂ ಕೊಮೆರಿಯನ್ ಪ್ರದೇಶಗಳಲ್ಲಿ 3.6 ಕಿಲೋ ಮೀಟರ್ ಎತ್ತರದಲ್ಲಿ ಚಂಡಮಾರುತದ ಗಾಳಿ ಸೃಷ್ಟಿಯಾಗಿದೆ. ಕೆಲವು ಗಂಟೆಗಳ ಹಿಂದೆ ವಾಯುಭಾರ ಕುಸಿತಗೊಂಡಿದ್ದು, ಇದೀಗ ಸ್ಪಷ್ಟ ಚಂಡಮಾರುತವಾಗಿ ಬದಲಾಗಿದೆ. ಈ ಕಾರಣದಿಂದ ದಕ್ಷಿಣ ಭಾರತದ ಮೂರು ನಾಲ್ಕು ರಾಜ್ಯಗಳಲ್ಲಿ ಭಾರೀ ಮಳೆ ಆಗಮಿಸಲಿದೆ. ಕರ್ನಾಟಕದಲ್ಲೂ ಸೈಕ್ಲೋನ್ ಎಫೆಕ್ಟ್‌ ಅತ್ಯಧಿಕ ಪ್ರಮಾಣದಲ್ಲಿ ಉಂಟಾಗಲಿದೆ

ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಬಾಗಲಕೋಟೆ, ಬೆಳಗಾವಿ, ಬೀದರ್, ಧಾರವಾಡ, ಗದಗ, ಹಾವೇರಿ, ಕಲಬುರಗಿ, ಕೊಪ್ಪಳ, ವಿಜಯಪುರ, ಚಿತ್ರದುರ್ಗ, ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ, ಹಾಸನ, ಕೊಡಗು, ಮೈಸೂರು, ಶಿವಮೊಗ್ಗ ಮತ್ತು ತುಮಕೂರು ಜಿಲ್ಲೆಗಳಲ್ಲಿ ಕನಿಷ್ಠ ಒಂದರಿಂದ ಮೂರು ದಿನಗಳ ಕಾಲ ಬೇರೆ ಬೇರೆ ಸಮಯದಲ್ಲಿ ಜೋರು ಗಾಳಿ ಸಹಿತ ಭಾರೀ ಮಳೆ ಆಗಲಿದೆ. ಕೆಲವೆಡೆ ಆಲಿಕಲ್ಲು ಸಹಿತ ವ್ಯಾಪಕ ಮಳೆ ಸುರಿಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

Leave a Comment

Your email address will not be published. Required fields are marked *