ಸಮಗ್ರ ನ್ಯೂಸ್: ಮಂಗಳೂರು ಚಾಲಿ ಅಡಿಕೆ ಮಾರುಕಟ್ಟೆಯಲ್ಲಿ ಹೊಸ ಅಡಿಕೆ, ಸಿಂಗಲ್ ಚೋಲ್ ಧಾರಣೆ ಏರುಮುಖದತ್ತ ಸಾಗಿದರೆ, ಕಾಳುಮೆಣಸು ಧಾರಣೆ 700 ರೂ. ಗಡಿ ದಾಟಿ ಮುನ್ನುಗಿದೆ. ರಬ್ಬರ್, ತೆಂಗಿನ ಕಾಯಿ ಧಾರಣೆಯು ಏರಿಕೆಯ ಸೂಚನೆ ನೀಡಿದೆ.
ಕಾಳುಮೆಣಸು ಧಾರಣೆ ಏರಿಕೆಯತ್ತ ಸಾಗಿದ್ದು ಕೃಷಿಕರಿಗೆ ಖುಷಿ ತಂದಿದೆ. ಎ.2 ರಂದು ಹೊರ ಮಾರುಕಟ್ಟೆಯಲ್ಲಿ ಕೆ.ಜಿ.ಗೆ 710 ರೂ. ದಾಖಲಾಗಿತ್ತು. ಕ್ಯಾಂಪ್ಕೋ ಮಾರುಕಟ್ಟೆಯಲ್ಲಿ 695 ರೂ.ಇತ್ತು. ಒಂದು ವಾರದಲ್ಲಿ ಕೆ.ಜಿ.ಗೆ 20 ರೂ. ಏರಿಕೆ ಕಂಡಿದೆ. ಡಬ್ಬಲ್ ಚೋಲ್ ಧಾರಣೆ 500 ದಾಟಿದ ಬೆನ್ನಲ್ಲೇ ಹೊಸ ಅಡಿಕೆ, ಸಿಂಗಲ್ ಚೋಲ್ ಧಾರಣೆಯು ಏರಿಕೆ ದಾಖಲಿಸಿದೆ.
ಎ.2 ರಂದು ಹೊರ ಮಾರುಕಟ್ಟೆಯಲ್ಲಿ ಹೊಸ ಅಡಿಕೆ ಧಾರಣೆ ಕೆ.ಜಿ.ಗೆ 440 ರೂ. ಇದ್ದು 450 ರೂ. ಸನಿಹಕ್ಕೆ ತಲುಪಿದೆ. ಸಿಂಗಲ್ ಚೋಲ್ ಧಾರಣೆ 480 ರೂ. ಇದ್ದು 500 ರೂ.ಸನಿಹಕ್ಕೆ ತಲುಪಿದೆ. ಕ್ಯಾಂಪ್ಕೋ ಮಾರುಕಟ್ಟೆಯಲ್ಲಿ ಹೊಸ ಅಡಿಕೆ ಕೆ.ಜಿ.ಗೆ 430 ರೂ., ಸಿಂಗಲ್ ಚೋಲ್ 460 ರೂ., ಡಬ್ಬಲ್ ಚೋಲ್ 495 ರೂ. ದಾಖಲಾಗಿತ್ತು. ಹೊರ ಮಾರುಕಟ್ಟೆಯಲ್ಲಿ ಹೊಸ ಅಡಿಕೆಗೆ 415 ರೂ., ಸಿಂಗಲ್ ಚೋಲ್ 475 ರೂ.ಇತ್ತು. ಡಬ್ಬಲ್ ಚೋಲ್ ಧಾರಣೆ ಯಥಾಸ್ಥಿತಿಯಲ್ಲಿತ್ತು.
ಎ.2 ರಂದು ರಬ್ಬರ್ ಗ್ರೇಡ್‌ಗೆ 203 ರೂ., ರಬ್ಬರ್ ಸ್ಕಾಪ್ 133.5 ರೂ. ಇತ್ತು. ತೆಂಗಿನಕಾಯಿ ಧಾರಣೆ ರೂ.63 ಇದ್ದರೆ, ಕೊಬ್ಬರಿ ಧಾರಣೆ 175 ರಲ್ಲಿ ಸ್ಥಿರವಾಗಿತ್ತು.