ಸಮಗ್ರ ನ್ಯೂಸ್: ಒಂದನೇ ತರಗತಿಗೆ ಮಕ್ಕಳನ್ನು ಸೇರಿಸಲು ಆರು ವರ್ಷ ಕಡ್ಡಾಯ ಸಡಲಿಕೆ ಮಾಡಬಾರದೆಂದು ಖಾಸಗಿ ಶಾಲೆಗಳು ಮನವಿ ಮಾಡಿವೆ.
ಮುಂಬರುವ 2025- 26ನೇ ಶೈಕ್ಷಣಿಕ ವರ್ಷದಿಂದ ಒಂದನೇ ತರಗತಿಗೆ ಮಕ್ಕಳನ್ನು ದಾಖಲಿಸಲು ಜೂನ್ 1 ಕ್ಕೆ ಆರು ವರ್ಷ ಪೂರ್ಣಗೊಂಡಿರಬೇಕೆಂಬ ನಿಯಮವನ್ನು ಯಾವುದೇ ಕಾರಣಕ್ಕೂ ಸಡಿಲಿಕೆ ಮಾಡಬಾರದು ಎಂದು ಖಾಸಗಿ ಶಾಲೆಗಳ ಸಂಘಟನೆ ಕ್ಯಾಮ್ಸ್ ರಾಜ್ಯದ ಮುಖ್ಯ ಕಾರ್ಯದರ್ಶಿಗೆ ಮನವಿ ಮಾಡಿದೆ.
ಕ್ಯಾಮ್ಸ್ ಪ್ರಧಾನ ಕಾರ್ಯದರ್ಶಿ ಡಿ. ಶಶಿಕುಮಾರ್ ಅವರು ರಾಜ್ಯದ ಮುಖ್ಯ ಕಾರ್ಯದರ್ಶಿಗೆ ಮನವಿ ಮಾಡಿ ಪತ್ರ ಬರೆದಿದ್ದು, ಆರ್‌ಟಿಇ ಅಡಿ ಎರಡು ವರ್ಷದ ಹಿಂದೆಯೇ ಸರ್ಕಾರ ಒಂದನೇ ತರಗತಿ ದಾಖಲಾತಿಗೆ ಆರು ವರ್ಷ ಕಡ್ಡಾಯ ವಯೋಮಿತಿ ನಿಗದಿಪಡಿಸಿತ್ತು. ಆದರೆ, ಅದಾಗಲೇ ಎಲ್‌ಕೆಜಿ, ಯುಕೆಜಿಗೆ ದಾಖಲಾಗಿದ್ದ ಮಕ್ಕಳಿಗೆ ಒಂದನೇ ತರಗತಿ ದಾಖಲಾತಿಗೆ ಸಮಸ್ಯೆಯಾಗಲಿದೆ ಎನ್ನುವ ಕಾರಣಕ್ಕೆ ಆದೇಶ 2025 -26 ರಿಂದ ಜಾರಿಗೆ ಬರಲಿದೆ ಎಂದು ಸರ್ಕಾರ ಪರಿಷ್ಕೃತ ಆದೇಶ ನೀಡಿತ್ತು. ಈ ಹಿನ್ನೆಲೆಯಲ್ಲಿ ವಯೋಮಿತಿ ಸಡಿಲಿಕೆ ಮಾಡಬಾರದು ಎಂದು ಹೇಳಲಾಗಿದೆ.