April 2025

ಲೋಕಸಭೆಯಲ್ಲಿ ವಕ್ಫ್ ತಿದ್ದುಪಡಿ ಮಸೂದೆ ಮಂಡನೆ

ಸಮಗ್ರ ನ್ಯೂಸ್: ಲೋಕಸಭೆಯಲ್ಲಿ ವಕ್ಫ್ ತಿದ್ದುಪಡಿ ವಿಧೇಯಕ ಮಂಡನೆ ಆರಂಭಗೊಂಡಿದೆ. ಗೃಹಸಚಿವ ಅಮಿತ್ ಶಾ ಈ ಬಗ್ಗೆ ಮಾತನಾಡಿ ವಕ್ಫ್ ಮಸೂದೆ ಮಂಡನೆಗೆ ಕೇಂದ್ರ ಸಂಪುಟ ಅನುಮೋದನೆ ನೀಡಿದೆ ಎಂದು ತಿಳಿಸಿದರು. ಕೇಂದ್ರ ಸಂಸದೀಯ ವ್ಯವಹಾರಗಳು ಹಾಗೂ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಅವರು ಪ್ರಸ್ತಾವಿತ ವಕ್ಫ್ ತಿದ್ದುಪಡಿ ಮಸೂದೆಯನ್ನು ಲೋಕಸಭೆಯಲ್ಲಿ ಮಂಡಿಸಿದರು. ಮುಸ್ಲಿಂ ಸಂಘಟನೆಗಳು ಹಾಗೂ ವಿರೋಧ ಪಕ್ಷಗಳಿಂದ ತೀವ್ರ ಟೀಕೆಗೆ ಗುರಿಯಾಗಿರುವ ವಕ್ಫ್ ತಿದ್ದುಪಡಿ ಮಸೂದೆ ಕುರಿತ ಚರ್ಚೆಗೆ ಕಾರ್ಯಕಲಾಪಗಳ ಸಲಹಾ ಸಮಿತಿ […]

ಲೋಕಸಭೆಯಲ್ಲಿ ವಕ್ಫ್ ತಿದ್ದುಪಡಿ ಮಸೂದೆ ಮಂಡನೆ Read More »

ಲಕ್ಷದ ಸನಿಹಕ್ಕೆ ಬಂಗಾರದ ದರ| ಇಂದಿನ ಧಾರಣೆ ಎಷ್ಟಿದೆ ಗೊತ್ತಾ?

ಸಮಗ್ರ ನ್ಯೂಸ್: ಬಂಗಾರದ ದರ ಏ. 1ರಂದು ಹೊಸ ದಾಖಲೆಯ ಎತ್ತರಕ್ಕೇರಿದೆ. ಪ್ರತಿ 10 ಗ್ರಾಮ್‌ ಚಿನ್ನದ ದರ ಬರೋಬ್ಬರಿ 91,000 ರೂ.ಗೆ ಜಿಗಿದಿದೆ. ಬೆಂಗಳೂರಿನಲ್ಲಿ 24 ಕ್ಯಾರಟ್‌ನ ಪ್ರತಿ ಗ್ರಾಮ್‌ ಬಂಗಾರದ ದರ 9,284 ರುಪಾಯಿಗೆ ಏರಿಕೆಯಾಗಿದೆ. ಜಾಗತಿಕ ಆರ್ಥಿಕ ಪರಿಸ್ಥಿತಿಯ ಅನಿಶ್ಚಿತತೆ, ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು ಘೋಷಿಸಿರುವ ಟಾರಿಫ್‌ ವಾರ್ ಜತೆಗೆ ಹಣದುಬ್ಬರ ಕೂಡ ಪ್ರಭಾವ ಬೀರಿದೆ. ನಾನಾ ದೇಶಗಳ ಸೆಂಟ್ರಲ್‌ ಬ್ಯಾಂಕ್‌ಗಳು ಕೂಡ ಬಂಗಾರದ ಖರೀದಿಯನ್ನು ಹೆಚ್ಚಿಸಿವೆ. ವಿಶ್ಲೇಷಕರ ಪ್ರಕಾರ

ಲಕ್ಷದ ಸನಿಹಕ್ಕೆ ಬಂಗಾರದ ದರ| ಇಂದಿನ ಧಾರಣೆ ಎಷ್ಟಿದೆ ಗೊತ್ತಾ? Read More »

ಒಂದನೇ ತರಗತಿಗೆ ಸೇರಲು 6 ವರ್ಷ ಕಡ್ಡಾಯ ನಿಯಮ‌ ಸಡಿಲಿಕೆ ಮಾಡದಂತೆ ಮನವಿ

ಸಮಗ್ರ ನ್ಯೂಸ್: ಒಂದನೇ ತರಗತಿಗೆ ಮಕ್ಕಳನ್ನು ಸೇರಿಸಲು ಆರು ವರ್ಷ ಕಡ್ಡಾಯ ಸಡಲಿಕೆ ಮಾಡಬಾರದೆಂದು ಖಾಸಗಿ ಶಾಲೆಗಳು ಮನವಿ ಮಾಡಿವೆ. ಮುಂಬರುವ 2025- 26ನೇ ಶೈಕ್ಷಣಿಕ ವರ್ಷದಿಂದ ಒಂದನೇ ತರಗತಿಗೆ ಮಕ್ಕಳನ್ನು ದಾಖಲಿಸಲು ಜೂನ್ 1 ಕ್ಕೆ ಆರು ವರ್ಷ ಪೂರ್ಣಗೊಂಡಿರಬೇಕೆಂಬ ನಿಯಮವನ್ನು ಯಾವುದೇ ಕಾರಣಕ್ಕೂ ಸಡಿಲಿಕೆ ಮಾಡಬಾರದು ಎಂದು ಖಾಸಗಿ ಶಾಲೆಗಳ ಸಂಘಟನೆ ಕ್ಯಾಮ್ಸ್ ರಾಜ್ಯದ ಮುಖ್ಯ ಕಾರ್ಯದರ್ಶಿಗೆ ಮನವಿ ಮಾಡಿದೆ. ಕ್ಯಾಮ್ಸ್ ಪ್ರಧಾನ ಕಾರ್ಯದರ್ಶಿ ಡಿ. ಶಶಿಕುಮಾರ್ ಅವರು ರಾಜ್ಯದ ಮುಖ್ಯ ಕಾರ್ಯದರ್ಶಿಗೆ ಮನವಿ

ಒಂದನೇ ತರಗತಿಗೆ ಸೇರಲು 6 ವರ್ಷ ಕಡ್ಡಾಯ ನಿಯಮ‌ ಸಡಿಲಿಕೆ ಮಾಡದಂತೆ ಮನವಿ Read More »

ಕರ್ನಾಟಕದ ಜನತೆಗೆ ಮತ್ತೊಂದು ಬರೆ ಹಾಕಿದ ಸರ್ಕಾರ| ಡೀಸೆಲ್ ಮಾರಾಟ ತೆರಿಗೆ ₹2 ಹೆಚ್ಚಳ| ನಾಳೆಯಿಂದಲೇ ಪರಿಷ್ಕೃತ ದರ ಜಾರಿ

ಸಮಗ್ರ ನ್ಯೂಸ್: ಕರ್ನಾಟಕ ಸರ್ಕಾರ ಡೀಸೆಲ್​ ಮೇಲಿನ ತೆರಿಗೆಯನ್ನು ಶೇ 2.73 ರಷ್ಟು ಹೆಚ್ಚಳ ಮಾಡಿ ತಕ್ಷಣದಿಂದಲೇ ಜಾರಿಗೆ ಬರುವಂತೆ ಆದೇಶ ಹೊರಡಿಸಿದೆ. ಇದರಿಂದ, ಡೀಸೆಲ್ ಬೆಲೆ ಲೀಟರ್‌ಗೆ 2 ರೂ.ಗಳಷ್ಟು ಹೆಚ್ಚಾಗಲಿದೆ. ಈ ಹಿಂದೆ ಶೇ 18.44 ರಷ್ಟು ಇದ್ದ ತೆರಿಗೆ, ಇದೀಗ ಶೇ 21.17ಕ್ಕೆ ಏರಿಕೆಯಾಗಿದೆ. ಸದ್ಯ ಬೆಂಗಳೂರಲ್ಲಿ ಡಿಸೇಲ್​ 88.99 ರೂ. ಮಾರಾಟವಾಗುತ್ತಿದೆ. ಬೆಲೆ ಏರಿಕೆಯಿಂದ ಡೀಸೆಲ್ ಬೆಲೆ 90 ರೂ. ಆಗಲಿದೆ. ಕರ್ನಾಟಕ ಸರ್ಕಾರ ಹಾಲು ಮತ್ತು ವಿದ್ಯುತ್ ದರ ಏರಿಕೆ

ಕರ್ನಾಟಕದ ಜನತೆಗೆ ಮತ್ತೊಂದು ಬರೆ ಹಾಕಿದ ಸರ್ಕಾರ| ಡೀಸೆಲ್ ಮಾರಾಟ ತೆರಿಗೆ ₹2 ಹೆಚ್ಚಳ| ನಾಳೆಯಿಂದಲೇ ಪರಿಷ್ಕೃತ ದರ ಜಾರಿ Read More »

ನಾಳೆ ಬೆಂಗಳೂರಿನಲ್ಲಿ ಆರ್ಸಿಬಿ – ಜಿಟಿ ಮ್ಯಾಚ್.. ಮೆಟ್ರೋ ಸೇವೆ ವಿಸ್ತರಣೆ

ಸಮಗ್ರ ನ್ಯೂಸ್: ನಾಳೆ ಬೆಂಗಳೂರಿನಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ (IPL) ಪಂದ್ಯ ನಡೆಯಲಿದ್ದು, ಗುಜರಾತ್ ಟೈಟನ್ಸ್ ವಿರುದ್ಧ ಆರ್ಸಿಬಿ ಮ್ಯಾಚ್ ನಡೆಯಲಿದೆ. ಈ ಕಾರಣ ನಮ್ಮ ಮೆಟ್ರೋ ಕೂಡ ಪ್ರಯಾಣಿಕರಿಗೆ ಗುಡ್ ನ್ಯೂಸ್ ನೀಡಿದೆ. ಮೆಟ್ರೋ ಕಾರ್ಯಾಚರಣೆ ಅವಧಿಯನ್ನು ವಿಸ್ತರಣೆ ಮಾಡಲಾಗಿದ್ದು, ಈ ಬಗ್ಗೆ ಬಿಎಂಆರ್ಸಿಎಲ್ ಸಾಮಾಜಿಕ ಮಾಧ್ಯಮ ಎಕ್ಸ್ನಲ್ಲಿ ಸಂದೇಶ ಪ್ರಕಟಿಸುವ ಮೂಲಕ ಮಾಹಿತಿ ನೀಡಿದೆ ನಾಳೆ ಮೆಟ್ರೋ ಸೇವೆಯನ್ನು ತಡ ರಾತ್ರಿ 12.30ರ ವರೆಗೆ ವಿಸ್ತರಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಮಾಧ್ಯಮ ಪ್ರಕಟನೆಯನ್ನು ಪರಿಶೀಲಿಸಿ ಎಂದು

ನಾಳೆ ಬೆಂಗಳೂರಿನಲ್ಲಿ ಆರ್ಸಿಬಿ – ಜಿಟಿ ಮ್ಯಾಚ್.. ಮೆಟ್ರೋ ಸೇವೆ ವಿಸ್ತರಣೆ Read More »

ಕಾರು ಡಿಕ್ಕಿ ಹೊಡೆದು ವಿದ್ಯಾರ್ಥಿ ಸಾವು

ಸಮಗ್ರ ನ್ಯೂಸ್: ಕಾರೊಂದು ಢಿಕ್ಕಿ ಹೊಡೆದ ಪರಿಣಾಮ ರಸ್ತೆ ದಾಟಲು ನಿಂತಿದ್ದ ವಿದ್ಯಾರ್ಥಿಯೊಬ್ಬ ಮೃತಪಟ್ಟ ಘಟನೆ ಬ್ರಹ್ಮಾವರದ ಬಿರಿಯಾನಿ ಪಾಯಿಂಟ್ ಬಳಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಇಂದು ಬೆಳಗ್ಗೆ 8.30ರ ಸುಮಾರಿಗೆ ನಡೆದಿದೆ. ಮೃತರನ್ನು ಬ್ರಹ್ಮಾವರ ಎಸ್‌ಎಂಎಸ್ ಶಾಲೆಯ 6ನೇ ತರಗತಿ ವಿದ್ಯಾರ್ಥಿ ವಂಶ್ ಶೆಟ್ಟಿ(11) ಎಂದು ಗುರುತಿಸಲಾಗಿದೆ. ಬೇಸಿಗೆ ರಜೆಯ ಹಿನ್ನೆಲೆಯಲ್ಲಿ ಶಾಲೆಯಲ್ಲಿ ಬೇಸಿಗೆ ಕ್ರೀಡಾ ಶಿಬಿರ ನಡೆಯುತ್ತಿದ್ದು, ಈ ಹಿನ್ನೆಲೆಯಲ್ಲಿ ವಂಶ್ ಶೆಟ್ಟಿ ಶಾಲೆಗೆ ಹೋಗಲು ರಸ್ತೆ ದಾಟಲು ರಸ್ತೆ ಬದಿ ನಿಂತುಕೊಂಡಿದ್ದನು. ಈ

ಕಾರು ಡಿಕ್ಕಿ ಹೊಡೆದು ವಿದ್ಯಾರ್ಥಿ ಸಾವು Read More »

ಪಟಾಕಿ ಅಂಗಡಿಯಲ್ಲಿ ಭಾರೀ ಅಗ್ನಿ ಅವಘಡ| 17 ಮಂದಿ ಸಜೀವ ದಹನ

ಸಮಗ್ರ ನ್ಯೂಸ್: ಗುಜರಾತ್‌ನ ಬನಸ್ಕಾಂತದ ದೀಸಾದ ಧುನ್ವಾ ರಸ್ತೆಯಲ್ಲಿರುವ ಪಟಾಕಿ ಕಾರ್ಖಾನೆ ಮತ್ತು ಗೋದಾಮಿನಲ್ಲಿ ಭಾರಿ ಬೆಂಕಿ ಕಾಣಿಸಿಕೊಂಡಿದೆ. ಇದರಿಂದಾಗಿ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ 17 ಕಾರ್ಮಿಕರು ಸಾವನ್ನಪ್ಪಿದರು. ಉಳಿದ 3 ಗಾಯಗೊಂಡ ಕಾರ್ಮಿಕರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಚಿಕಿತ್ಸೆಯ ಸಮಯದಲ್ಲಿ ಅನೇಕ ಕಾರ್ಮಿಕರು ಸಾವನ್ನಪ್ಪಿದರು. ಮಾಹಿತಿಯ ಪ್ರಕಾರ, ಬಾಯ್ಲರ್ ಸ್ಫೋಟದಿಂದಾಗಿ ಬೆಂಕಿ ಕಾಣಿಸಿಕೊಂಡಿದೆ. ಬೆಂಕಿ ಹೊತ್ತಿಕೊಂಡ ನಂತರ, ಅಗ್ನಿಶಾಮಕ ದಳದವರು ಸ್ಥಳಕ್ಕೆ ತಲುಪಿ ಬೆಂಕಿಯನ್ನು ನಂದಿಸಲು ಪ್ರಾರಂಭಿಸಿದರು. ಬೆಂಕಿಯಿಂದಾಗಿ ಕಾರ್ಖಾನೆಯ ಮೊದಲ ಮಹಡಿ ಕುಸಿದು ಬಿದ್ದಿದೆ. ಪ್ರಸ್ತುತ

ಪಟಾಕಿ ಅಂಗಡಿಯಲ್ಲಿ ಭಾರೀ ಅಗ್ನಿ ಅವಘಡ| 17 ಮಂದಿ ಸಜೀವ ದಹನ Read More »

ಸ್ವಯಂಘೋಷಿತ ದೇವಮಾನವ ನಿತ್ಯಾನಂದ ಸ್ವಾಮಿ ಇನ್ನಿಲ್ಲ!!? ಸೋಶಿಯಲ್ ಮೀಡಿಯಾದಲ್ಲಿ ಸಾವಿನ ಸುದ್ದಿ ವೈರಲ್

ಸಮಗ್ರ ನ್ಯೂಸ್: ಭಾರತದಿಂದ 2019ರಲ್ಲಿ ಪಲಾಯನಗೈದು ‘ಯುನೈಟೆಡ್ ಸ್ಟೇಟ್ಸ್ ಆಫ್ ಕೈಲಾಸ’ ಎಂಬ ಸಾರ್ವಭೌಮ ರಾಷ್ಟ್ರ ಸ್ಥಾಪಿಸಿರುವುದಾಗಿ ಘೋಷಿಸಿಕೊಂಡಿರುವ ಸ್ವಯಂಘೋಷಿತ ದೇವಮಾನವ ನಿತ್ಯಾನಂದ ನಿಧನ ಹೊಂದಿದ್ದಾನೆ ಎನ್ನುವ ಸುದ್ದಿಯೊಂದನ್ನು ನಿತ್ಯಾನಂದನ ಸಹೋದರಿಯ ಮಗ ಸುಂದರೇಶ್ವರನ್ ವಿಡಿಯೋ ಮೂಲಕ ಬಹಿರಂಗಪಡಿಸಿದ್ದಾರೆ ಎನ್ನಲಾದ ಸುದ್ದಿಯೊಂದು ಸೋಶಿಯಲ್​​ ಮೀಡಿಯಾದಲ್ಲಿ ಹರಿದಾಡುತ್ತಿದೆ. ಸ್ವಯಂ ಘೋಷಿತ ಆಧ್ಯಾತ್ಮಿಕ ಗುರು ನಿತ್ಯಾನಂದ ಸ್ವಾಮಿಯವರ ನಿಧನದ ಸುದ್ದಿ ವೈರಲ್ ಆಗಿದೆ. ನಿತ್ಯಾನಂದ ಎರಡು ದಿನಗಳ ಹಿಂದೆ ನಿಧನರಾದರು ಎಂದು ಅವರ ಸೋದರಳಿಯ ಸುಂದರೇಶ್ವರನ್ ವೀಡಿಯೊದಲ್ಲಿ ಬಹಿರಂಗಪಡಿಸಿದ್ದಾರೆ. ಅವರು

ಸ್ವಯಂಘೋಷಿತ ದೇವಮಾನವ ನಿತ್ಯಾನಂದ ಸ್ವಾಮಿ ಇನ್ನಿಲ್ಲ!!? ಸೋಶಿಯಲ್ ಮೀಡಿಯಾದಲ್ಲಿ ಸಾವಿನ ಸುದ್ದಿ ವೈರಲ್ Read More »